Saturday, February 24, 2024

ಪ್ರೈಮ್‌ ವಾಲಿಬಾಲ್‌: ಕಾರ್ತಿಕ್‌, ಅಶ್ವಲ್‌ಗೆ ಬಂಪರ್

sportsmail:

ಕರ್ನಾಟಕದ ಶ್ರೇಷ್ಠ ವಾಲಿಬಾಲ್‌ ಆಟಗಾರರಾದ ಕಾರ್ತಿಕ್‌ ಎ. ಹಾಗೂ ಅಶ್ವಲ್‌ ರೈ ಪ್ರೈಮ್‌ ವಾಲಿಬಾಲ್‌ ಲೀಗ್‌ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಅನುಕ್ರಮವಾಗಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಮತ್ತು ಕೋಲ್ಕೊತಾ ಥಂಡರ್‌ಬೋಲ್ಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ.‌

ಭಾರತ ತಂಡದ ಆಟಗಾರರು ಮತ್ತು ಏಷ್ಯನ್‌ ಚಾಂಪಿಯನ್ಷಿಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಕಾರ್ತಿಕ್‌ ಮತ್ತು ಅಶ್ವಲ್‌ ರೈ 15 ಲಕ್ಷ ರೂ. ಮೊತ್ತಕ್ಕೆ ಹರಾಜಾಗುವುದರೊಂದಿಗೆ ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಕೊಚ್ಚಿ ಬ್ಲೂ ಸಪೈಕರ್ಸ್‌ ಮತ್ತು ಕೋಲ್ಕೊತಾ ತಂಡಗಳು ಬಲಿಷ್ಠವೆನಿಸಿಕೊಳ್ಳುವುದು ಸ್ಪಷ್ಟ.

ಒಟ್ಟು 400 ಆಟಗಾರರು ಹರಾಜಿನಲ್ಲಿದ್ದು, ಪ್ಲಾಟಿನಂ ಮತ್ತು ಗೋಲ್ಡ್‌ ವಿಭಾಗದಲ್ಲಿ ಸುಮಾರು 24 ಆಟಗಾರರು ಉತ್ತಮ ಬೆಲೆಗೆ ವಿವಿಧ ತಂಡಗಳನ್ನು ಸೇರಿಕೊಂಡರು. ಒಟ್ಟು ಏಳು ತಂಡಗಳು ಮೊದಲ ವಾಲಿಬಾಲ್‌ ಲೀಗ್‌ನಲ್ಲಿ ಸ್ಪರ್ಧಿಸಲಿವೆ.

ಏಳು ತಂಡಗಳು:

ಕ್ಯಾಲಿಕಟ್‌ ಹೀರೋಸ್‌, ಕೊಚ್ಚಿ ಬ್ಲೂ ಸ್ಪೈಕರ್ಸ್‌, ಅಹಮದಾಬಾದ್‌ ಡಿಫೆಂಡರ್ಸ್‌, ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್‌, ಚೆನ್ನೈ ಬ್ಲಿಟ್ಸ್‌, ಬೆಂಗಳೂರು ಟಾರ್ಪೆಡೊಸ್‌ ಮತ್ತು ಕೋಲ್ಕೊತಾ ಥಂಡರ್‌ಬೋಲ್ಟ್ಸ್‌ ತಂಡಗಳು ಉತ್ತಮ ಆಟಗಾರರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡರು. ಪ್ರತಿಯೊಂದು ಫ್ರಾಂಚೈಸಿಯು ಒಟ್ಟು 14 ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿತ್ತು. ಅದರಲ್ಲಿ 12 ಭಾರತದ ಆಟಗಾರರು ಮತ್ತು 2 ವಿದೇಶಿ ಆಟಗಾರರು ಇರಬೇಕಾಗಿರುವುದು ಕಡ್ಡಾಯವಾಗಿತ್ತು.

ಭಾರತದ ಆಟಗಾರರನ್ನು ಫ್ರಾಂಚೈಸಿಗಳು ಭಾರತದ ಹರಾಜಿನಲ್ಲಿ ಖರೀದಿಸಿದ ಫ್ರಾಂಚೈಸಿಗಳು ಪ್ರೈಮ್‌ ವಾಲಿಬಾಲ್‌ಲೀಗ್‌ ಇಂಟರ್‌ನ್ಯಾಷನಲ್‌ ಪ್ಲೇಯರ್ಸ್‌ ಡ್ರಾಫ್ಟ್‌ ಮೂಲಕ ಆಯ್ಕೆ ಮಾಡಿದರು.

 

ಕ್ಯಾಲಿಕಟ್ ಹೀರೋಸ್:‌ ಫ್ರಾನ್ಸ್‌ನ ಅರೋನ್‌ ಕೌಬಿ (ಅಟ್ಯಾಕರ್)‌ ಮತ್ತು ಅಮೆರಿಕದ ಡೇವಿಡ್‌ ಲೀ (ಬ್ಲಾಕರ್).‌ ಭಾರತದ ಆಟಗಾರರು: ಅಜಿತ್‌ ಸಿ (ಅಟ್ಯಾಕರ್ 8.5 ಲಕ್ಷ), ಜೆರೋಮ್‌ ವಿನೀತ್‌ (ಯುನಿವರ್ಸಲ್‌, 15ಲಕ್ಷ ರೂ.).‌

ಕೊಚ್ಚಿ ಬ್ಲೂ ಸ್ಪೈಕರ್ಸ್:‌ ಅಮೆರಿಕದ ಅಂತಾರಾಷ್ಟ್ರೀಯ ಆಟಗಾರರಾದ ಕಾಲ್ಟನ್‌ ಕೊವೆಲ್‌ (ಅಟ್ಯಾಕರ್)‌, ಕಾಡಿ ಕಾಲ್ಡ್‌ವೆಲ್‌ (ಬ್ಲಾಕರ್)‌ ಅವರನ್ನು ಆಯ್ಕೆ ಮಾಡಿಕೊಂಡಿದೆ, ಭಾರತೀಯ ಆಟಗಾರರಲ್ಲಿ ದೀಪೇಶ್‌ ಕುಮಾರ್‌ ಸಿನ್ಹಾ (ಬ್ಲಾಕರ್‌ 10.75 ಲಕ್ಷ ರೂ.), ಕಾರ್ತಿಕ್‌ ಎ (ಬ್ಲಾಕರ್‌ (15 ಲಕ್ಷ ರೂ.), ಪ್ರಮುಖ ಆಟಗಾರರು.

 

ಅಹಮದಾಬಾದ್‌ ಡಿಫೆಂಡರ್ಸ್:‌ ವಿದೇಶಿ ಆಟಗಾರರಲ್ಲಿ ಅಮೆರಿಕದ ಬ್ಲಾಕರ್‌ ರೆಯಾನ್‌ ಮಿಹಾನ್‌ ಮತ್ತು ಅರ್ಜೆಂಟೀನಾದ ಅಟ್ಯಾಕರ್‌ ರೋಡ್ರಿಗೋ ವಿಲಾಲ್‌ಬೊನ್‌ ಸೇರಿದ್ದಾರೆ. ಭಾರತೀಯ ಆಟಗಾರರಲ್ಲಿ ಸೆಟ್ಟರ್‌ ಮುತ್ತು ಸ್ವಾಮಿ (10ಲಕ್ಷ ರೂ.). ಅಟ್ಯಾಕರ್‌ ಹರ್ದೀಪ್‌ ಸಿಂಗ್‌ (4.4ಲಕ್ಷ ರೂ), ಅಟ್ಯಾಕರ್‌ ಸೊಹನ್‌ ಟಿ ಜಾನ್‌ (7.25 ಲಕ್ಷ ರೂ.), ಮಿಡ್ಲ್‌ ಬ್ಲಾಕರ್‌ ಮನೋಜ್‌ ಎಲ್‌ ಎಂ (7.25ಲಕ್ಷ ರೂ.), ಲಿಬೆರೋ ವಿಭಾಗದಲ್ಲಿ ಪ್ರಭಾಕರ್‌ ಪಿ. (4ಲಕ್ಷ ರೂ) ಸೇರಿದ್ದಾರೆ.

ಹೈದರಾಬಾದ್‌ ಬ್ಲ್ಯಾಕ್‌ ಹಾಕ್ಸ್:‌ ವೆನಿನ್ಜುವೆಲಾದ ಯುನಿನರ್ಸಲ್‌ ಆಟಗಾರ ಆಂಟೊನಿಯೋ ಅರಿಯಾಸ್‌ ಗುಜ್ಮಾನ್‌, ಕ್ಯೂಬಾದ ಅಟ್ಯಾಕರ್‌ ಹೆನ್ರಿ ಬೆಲ್‌ ವಿದೇಶಿ ಆಟಗಾರರಾಗಿ ಸೇರ್ಪಡೆಯಾಗಿದ್ದಾರೆ. ಭಾರತೀಯ ಆಟಗಾರರಲ್ಲಿ ಸೆಟ್ಟರ್‌ ಹರಿಹರನ್‌ ವಿ (15ಲಕ್ಷ ರೂ.), ವಿಪುಲ್‌ ಕುಮಾರ್‌ (4.5ಲಕ್ಷ ರೂ.), ಅಟ್ಯಾಕರ್‌ ರೋಹಿತ್‌ ಕುಮಾರ್‌ (5.3 ಲಕ್ಷ ರೂ.), ಅಟ್ಯಾಕರ್‌ ಅಮಿತ್‌ ಗುಲಿಯಾ (10ಲಕ್ಷ ರೂ.) ಸೇರಿದ್ದಾರೆ.

ಚೆನ್ನೈ ಬ್ಲಿಟ್ಸ್:‌ ವೆನಿನ್ಜುವೆಲಾದ ಫೆರ್ನಾಂಡೋ ಡೇವಿಡ್‌ ಗೊನ್ಸಾಲೀಸ್‌ ರೋಡ್ರಿಗಸ್‌ ಅಟ್ಯಾಕರ್‌ ವಿಭಾಗದಲ್ಲಿ ಮತ್ತು ಬ್ರೆಜಿಲ್‌ನ ಬ್ರೂನೋ ಡಾ ಸಿಲ್ವಾ ಅಟ್ಯಾಕರ್‌ ವಿಭಾಗದಲ್ಲಿ ವಿದೇಶಿ ಆಟಗಾರರಾಗಿದ್ದಾರೆ. ಅಖಿನ್‌ ಜಿ ಎಸ್‌ ಮಿಡ್ಲ್‌ ಬ್ಲಾಕರ್‌ ವಿಭಾಗ (9.75ಲಕ್ಷ ರೂ.), ಅಟ್ಯಾಕರ್‌ ನವೀನ್‌ ರಾಜ್‌ ಜಾಕೋಬ್‌ (8ಲಕ್ಷ ರೂ.), ಉಕ್ರಪಾಂಡಿಯನ್ ಮೋಹನ್‌ ಸೆಟ್ಟರ್‌ ವಿಭಾಗದಲ್ಲಿ (7.75 ಲಕ್ಷ ರೂ), ಜಿ.ಆರ್.‌ ವೈಷ್ಣವ್‌ ಮಿಡ್ಲ್‌ ಬ್ಲಾಕರ್‌ (4ಲಕ್ಷ ರೂ.) ತಂಡವನ್ನು ಸೇರಿದ್ದಾರೆ.

ಬೆಂಗಳೂರು ಟಾರ್ಪೆಡೊಸ್:‌ ಅಮೆರಿಕ ಯುನಿವರ್ಸಲ್‌ ಆಟಗಾರ ನೊಹಾ ಟೈಟಾನೋ, ಅಟ್ಯಾಕರ್‌ ಕೇಲ್‌ ಫ್ರೆಂಡ್‌ ವಿದೇಶಿ ಆಟಗಾರರಾಗಿ ಸೇರಿದ್ದಾರೆ. ಸೆಟ್ಟರ್‌ ರಂಜಿತ್‌ ಸಿಂಗ್‌ (4.4ಲಕ್ಷ ರೂ), ಅಟ್ಯಾಕರ್‌ ಪಂಕಜ್‌ ಶರ್ಮಾ (7.5ಲಕ್ಷ ರೂ.), ಮಿಡ್ಲ್‌ ಬ್ಲಾಕರ್‌ ಲವ್‌ಮೀತ್‌ ಕಾರ್ತಿಕೇಯ (4.6ಲಕ್ಷ ರೂ.), ಮಿಡ್ಲ್‌ ಬ್ಲಾಕರ್‌ ರೋಹಿತ್‌ ಪಿ. (7.5ಲಕ್ಷ ರೂ.), ಲಿಬೆರೋ ಮಿಥುನ್‌ ಕುಮಾರ್‌ (5.6ಲಕ್ಷ ರೂ.) ತಂಡಕ್ಕೆ ಸೇರ್ಪಡೆಯಾದರು.

ಕೋಲ್ಕೊತಾ ಥಂಡರ್‌ಬೋಲ್ಟ್ಸ್:‌ ಅಮೆರಿಕದ ಬ್ಲಾಕರ್‌ ಮ್ಯಾಥ್ಯೂ ಆಗಸ್ಟ್‌, ಅಮೆರಿಕದ ಯುನಿವರ್ಸಲ್‌ ಆಟಗಾರ ಇಯಾನ್‌ ಸ್ಯಾಟರ್‌ಫೀಲ್ಡ್‌ ವಿದೇಶ ಆಟಗಾರರ ಪಟ್ಟಿಯಲ್ಲಿ ಸೇರಿದ್ದಾರೆ. ಯುನಿವರ್ಸಲ್‌ ಆಟಗಾರ ವಿನೀತ್‌ ಕುಮಾರ್‌ (8.75ಲಕ್ಷ ರೂ.), ಕರ್ನಾಟಕದ ಆಶ್ವಲ್‌ ರೈ (15ಲಕ್ಷ ರೂ.) ಮಿಡ್ಲ್‌ ಬ್ಲಾಕರ್‌ ವಿಭಾಗದಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Related Articles