Saturday, July 20, 2024

ಪಾಂಡ್ಯ ದಾಳಿಗೆ ಇಂಗ್ಲೆಂಡ್ ಥಂಡಾ

ಏಜೆನ್ಸೀಸ್ ನಾಟಿಂಗ್‌ಹ್ಯಾಮ್

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂತ್ಯಕ್ಕೆ ಭಾರತ ತಂಡ ಎರಡನೇ ಇನಿಂಗ್ಸ್‌ನಲ್ಲಿ 292 ರನ್‌ಗಳ ಮುನ್ನಡೆ ಕಂಡು ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದೆ.

ಎರಡು ದಿನಗಳ ಹಿಂದೆ ವೆಸ್ಟ್‌ಇಂಡೀಸ್‌ನ ಮಾಜಿ ಆಟಗಾರ ಮೈಕಲ್ ಹೋಲ್ಡಿಂಗ್ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಟೆಸ್ಟ್ ಕ್ರಿಕೆಟ್‌ನ ಆಲ್‌ರೌಂಡರ್ ಎಂದು ಈಗಾಗಲೇ ಒಪ್ಪಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ತಕ್ಕ ಉತ್ತರ ನೀಡುವಂತೆ ಪಾಂಡ್ಯ 28 ರನ್‌ಗೆ 5 ವಿಕೆಟ್ ಗಳಿಸಿ ಇಂಗ್ಲೆಂಡ್ ತಂಡ ಕೇವಲ 161 ರನ್‌ಗೆ ಆಲೌಟ್ ಆಗುವಂತೆ ಮಾಡಿದರು. ಅಲ್ಲದೆ ಹೋಲ್ಡಿಂಗ್ ಅವರಿಗೆ ಹೋಲ್ಡ್ ಯುವರ್ ಟಂಗ್ ಎಂದು ಬಾಯಿ ಮುಚ್ಚಿಸಿದ್ದಾರೆ.
ಭಾರತ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 329 ರನ್ ಗಳಿಸಿತ್ತು. ಆರಂಭದಲ್ಲಿ ನೋಡಿದರೆ ಈ ಮೊತ್ತ ನಾಟಿಂಗ್‌ಹ್ಯಾಮ್ ಪಿಚ್ ಹಾಗೂ ಇಂಗ್ಲೆಂಡ್‌ನ ಬ್ಯಾಟಿಂಗ್ ಸರದಿಯನ್ನು ನೋಡಿದರೆ  ಕಡಿಮೆಯೇ ಎಂದೆನಿಸಿತ್ತು. ಆದರೆ ನಿಖರ ಬೌಲಿಂಗ್ ಪ್ರದರ್ಶಿಸಿದ ಭಾರತ ಆತಿಥೇಯರನ್ನು 161 ರನ್‌ಗೆ  ಆಲೌಟ್ ಮಾಡಿ 168 ರನ್ ಮೊದಲ ಇನಿಂಗ್ಸ್‌ನ ಮುನ್ನಡೆ ಕಂಡಿತು. ಇಶಾಂತ್ ಶರ್ಮಾ 32ಕ್ಕೆ 2 ಹಾಗೂ ಜಸ್‌ಪ್ರೀತ್ ಬುಮ್ರಾ 37ಕ್ಕೆ 2 ಭಾರತದ ಬೌಲಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಾಂಡ್ಯ 6-1-28-5 ಬೌಲಿಂಗ್ ಪ್ರದರ್ಶನ ಇಂಗ್ಲೆಂಡ್ ಬೇಗನೆ ಪೆವಿಲಿಯನ್ ಸೇರುವಂತೆ ಮಾಡಿತು.
ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತದ ಪರ ಶಿಖರ್ ಧವನ್ (44) ಹಾಗೂ ಕೆ.ಎಲ್. ರಾಹುಲ್ (36)  ಹಾಗೂ ಪೂಜಾರ (ಔಟಾಗದೆ 33)ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವುದರೊಂದಿಗೆ ಎರಡನೇ ದಿನದಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿ ಒಟ್ಟಾರೆ 292 ರನ್ ಮುನ್ನಡೆ ಕಾಯ್ದುಕೊಂಡಿತು.

Related Articles