Thursday, September 21, 2023

ಚಿನ್ನ ಗೆದ್ದ ದಿಯಾ ರವಿ

ಸ್ಪೋರ್ಟ್ಸ್ ಮೇಲ್ ವರದಿ 

ಬೆಂಗಳೂರಿನ ಬನಶಂಕರಿಯಲ್ಲಿರುವ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯ ಎರಡನೆಯ ತರಗತಿ ವಿದ್ಯಾರ್ಥಿನಿ ದಿಯಾ ಆರ್. ಶಾಲಾ ವಾರ್ಷಿಕ ಕ್ರೀಡಾ ಕೂಟದ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

300 ಮೀ. ಓಟದಲ್ಲಿ ದಿಯಾ ಪ್ರಥಮ ಸ್ಥಾನ ಗಳಿಸಿದರು. 

ಶಾಲೆಯ ಪ್ರಾಂಶುಪಾಲೆ ಶೋಭನಾ ಬಹುಮಾನ ವಿತರಿಸಿದರು. ರವಿ ಕುಮಾರ್ ಬಿ.ಎನ್  ಹಾಗೂ ರಾಣಿ ಬಿ ಎನ್ ಅವರ ಪುತ್ರಿ ದಿಯಾ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದು ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಪಟು ಆಗುವ ಭರವಸೆ ತೋರಿಸಿದ್ದಾರೆ.

Related Articles