ಬಾಯಿಯಲ್ಲೇ ಟೇಬಲ್ ಟೆನಿಸ್ ಆಡುವ ಇಬ್ರಾಹಿಂ

0
87
ಟೋಕಿಯೋ:
ಟೋಕಿಯೋದಲ್ಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಆರಂಭಗೊಂಡಿದೆ. ಅಲ್ಲಿ ಯಾರು ಚಿನ್ನ ಗೆಲ್ತಾರೆ, ಯಾರು ಸೋಲ್ತಾರೆ ಎಂಬುದು ಮುಖ್ಯವಲ್ಲ. ಅಲ್ಲಿ ಎಲ್ಲರೂ ಬದುಕನ್ನೇ ಗೆದ್ದವರು. ಅದರ ಮುಂದೆ ಈ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳೆಲ್ಲ ಗೌಣ.
ಟೋಕಿಯೋ ದಲ್ಲಿ ಮೊದಲ ದಿನ ನಡೆದದ್ದು ಟೇಬಲ್ ಟೆನಿಸ್ ಸ್ಪರ್ಧೆ. ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿ ಇಡೀ ಜಗತ್ತಿನ ಹೃದಯ ಗೆದ್ದಿದ್ದ ಈಜಿಪ್ಟ್ ನ ಇಬ್ರಾಹಿಂ ಹಮದ್ತೌವ್ ಈಗ ಮತ್ತೊಮ್ಮೆ ಗಮನ ಸೆಳೆದರು. ಸೋಲಿನ ನಡುವೆಯೂ ಹೃದಯ ಗೆದ್ದರು. ಇದಕ್ಕೆ ಮುಖ್ಯ ಕಾರಣ ಅವರು ಆಡಿದ್ದು ಬಾಯಿಯಲ್ಲಿ. ಸರ್ವ್ ಮಾಡೋದು ಕಾಲಲ್ಲಿ..!!!!
10ನೇ ವಯಸ್ಸಿನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ತನ್ನೆರಡೂ ಕೈಗಳನ್ನು ಕಳೆದುಕೊಂಡ ಇಬ್ರಾಹಿಂಗೆ ಟೇಬಲ್ ಟೆನಿಸ್ ಹೊಸ ಬದುಕು ನೀಡಿತು.‌ 2014ರಲ್ಲಿ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಸಂಸ್ಥೆ ಇಬ್ರಾಹಿಂ ಅವರು ಬಾಯಿಯ ಸಹಾಯದಿಂದ ಟೇಬಲ್ ಟೆನಿಸ್ ಆಡುತ್ತಿರುವ ವೀಡಿಯೋ ವನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು. ಕೋಟ್ಯಂತರ ಜನ ಆ ವೀಡಿಯೋ ದಿಂದ ಸ್ಫೂರ್ತಿ ಪಡೆದರು. ಇದರಿಂದ ಇಬ್ರಾಹಿಂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದರು. 2016 ರ ರಿಯೋ ಒಲಿಂಪಿಕ್ಸ್ ಗೂ ಆಯ್ಕೆಯಾದರು. ಇಬ್ರಾಹಿಂ ಪಾಲಿಗೆ ಟೋಕಿಯೋ ಎರಡನೇ ಒಲಿಂಪಿಕ್ಸ್.
ಟೋಕಿಯೋ ದಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿದರೂ ಜಗತ್ತು ಇಬ್ರಾಹಿ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.