ದಶಕಗಳ ಬಳಿಕ ಒಲಿಂಪಿಕ್ ಟೂರ್ನಿಯಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ 5-4 ಗೋಲುಗಳ ಅಂತರದಿಂದ ರೋಚಕ ರೀತಿಯಲ್ಲಿ ಸೋಲಿಸಿ ಕಂಚಿನ ಪದಕ ಪಡೆಯಿತು.
1980ರ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಬಳಿಕ ಭಾರತ ಹಾಕಿ ತಂಡ ಒಲಿಂಪಿಕ್ನಲ್ಲಿ ಗಿಟ್ಟಿಸಿರುವ ಮೊದಲ ಪದಕ ಇದಾಗಿದೆ. ಟೋಕಿಯೋದಲ್ಲಿ ನಡೆದ ಈ ರೋಚಕ ಹಣಾಹಣಿಯಲ್ಲಿ ಜರ್ಮನಿ ತಂಡ ಒಂದು ಹಂತದಲ್ಲಿ 3-1 ಗೋಲುಗಳಿಂದ ಮುನ್ನಡೆ ಹೊಂದಿತ್ತು. ಆದರೆ, ಭಾರತ ಸತತ 4 ಗೋಲು ಗಳಿಸಿ 5-3 ಮುನ್ನಡೆ ಪಡೆಯಿತು. ಕೊನೆಯ ಕ್ವಾರ್ಟರ್ನಲ್ಲಿ ಜರ್ಮನಿ ಕಂಬ್ಯಾಕ್ ಮಾಡಿ 4ನೇ ಗೋಲು ಗಳಿಸಿತು.
ಅಂತಿಮವಾಗಿ ಗೆಲುವಿನ ಮಾಲೆ ಭಾರತಕ್ಕೆ ಒಲಿಯಿತು. ಭಾರತ ಹಾಕಿ ತಂಡ ಗೆದ್ದ ಈ ಪದಕ ಈ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಸಿಕ್ಕಿರುವ ನಾಲ್ಕನೇ ಪದಕವಾಗಿದೆ. ಇದರೊಂದಿಗೆ ಭಾರತದ ಬುಟ್ಟಿಯಲ್ಲಿ 1 ಬೆಳ್ಳಿ ಮತ್ತು 3 ಕಂಚಿನ ಪದಕ ಇವೆ. ಅತ್ತ, ಭಾರತ ಮಹಿಳಾ ಹಾಕಿ ತಂಡ ಕೂಡ ಕಂಚಿನ ಪದಕಕ್ಕಾಗಿ ನಾಳೆ ಪ್ರಯತ್ನಿಸುತ್ತಿದೆ.
Attachments area