ಸ್ಪೋರ್ಟ್ಸ್ ಮೇಲ್ ವರದಿ
ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಪ್ರೊ ವಾಲಿಬಾಲ್ ಲೀಗ್ನ್‌ಲ್ಲಿ ಯಾವುದೇ ಪಂದ್ಯದಲ್ಲೂ ಸೋಲರಿಯದ ಕ್ಯಾಲಿಕಟ್ ಹೀರೋಸ್ ತಂಡ ಫೈನಲ್ ತಲುಪಿದೆ. ಯು ಮುಂಬಾ ವಿರುದ್ಧದ ಪಂದ್ಯದಲ್ಲಿ ಕ್ಯಾಲಿಕಟ್ ತಂಡ 3-0 ,ಸೆಟ್‌ಗಳ ಅಂತದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿತು.
ನಾಯಕ ಜೆರೊಮ್ ವಿನೀತ್ 12 ಅಂಕ (10 ಸ್ಪೆ‘ಕ್ಸ್ ಮತ್ತು 2 ಸರ್ವ್)ಗಳ ಮೂಲಕ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಯು ಮುಂಬಾ ಪರ ವಿನೀತ್ ಕುಮಾರ್ 7 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಕ್ಯಾಲಿಕಟ್ ತಂಡ ಈ ಲೀಗ್‌ನಲ್ಲಿ ಒಟ್ಟು 200 ಅಂಕಗಳನ್ನು ಪೂರ್ಣಗೊಳಿಸಿದ ತಂಡವೆನಿಸಿತು. ಫೈನಲ್ ಪಂದ್ಯದಲ್ಲಿ ಕ್ಯಾಲಿಕಟ್ 15-12, 15-9, 16-14 ಅಂತರದಲ್ಲಿ ಜಯ ಗಳಿಸಿತು. ಕ್ಯಾಲಿಕಟ್ ಹೀರೋಸ್ ಇದುವರೆಗೂ ಆಡಿದ ಎಲ್ಲ ಪಂದ್ಯಗಳಲ್ಲೂ ಜಯ ಗಳಿಸಿದೆ. ಬುಧವಾರ ಸಂಜೆ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೊಚ್ಚಿ ಬ್ಲೂ ಸ್ಪೈಕರ್ಸ್ ಹಾಗೂ ಚೆನ್ನೈ ಸ್ಪಾರ್ಟಾನ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಗೆಲ್ಲುವ ತಂಡದೊಂದಿಗೆ ಕ್ಯಾಲಿಕಟ್ ಹೀರೋಸ್ ತಂಡ ಶುಕ್ರವಾರ ಫೈನಲ್ ಪಂದ್ಯವನ್ನಾಡಲಿದೆ.