Wednesday, November 13, 2024

26ರಂದು ಪಡುಕರೆಯಲ್ಲಿ ಅಮೃತೇಶ್ವರಿ ಟ್ರೋಫಿ ಕಬಡ್ಡಿ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ

ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ ಇಂದು ವೃತ್ತಿಪರ ಕ್ರೀಡೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ವ್ಯಾಪ್ತಿಯ ಕಬಡ್ಡಿ ಆಟಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೋಟ ಪಡುಕರೆ ಫ್ರೆಂಡ್ಸ್ ಪಡುಕರೆ ಸ್ಪೋರ್ಟ್ಸ್ ಕ್ಲಬ್ ಜನವರಿ 26ರಂದು ಹೊನಲು ಬೆಳಕಿನ ಕಬಡ್ಡಿ ಟೂರ್ನಿ ಅಮೃತೇಶ್ವರಿ ಟ್ರೋಫಿಯನ್ನು ಆಯೋಜಿಸಿದೆ.

ಕೋಟತಟ್ಟು ಪಡುಕರೆ ಅರಮ ದೇವಸ್ಥಾನದ ಅಂಗಣದಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಬ್ರಹ್ಮಾವರದಿಂದ ಬೈಂದೂರು ವ್ಯಾಪ್ತಿಯೊಳಗಿನ ಕಬಡ್ಡಿ ತಂಡಗಳು ಪಾಲ್ಗೊಳ್ಳಬಹುದು. ಟೂರ್ನಿಯು ಮ್ಯಾಟ್‌ನಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ನಿಯಮದಂತೆ ಈ ಟೂರ್ನಿ ನಡೆಯಲಿದೆ.
ಶನಿವಾರ (ಜನವರಿ 26)ದಂದು ಸಂಜೆ 7 ಗಂಟೆಗೆ ಪಂದ್ಯಗಳು ಆರಂಭಗೊಳ್ಳಲಿದ್ದು, ತಂಡಗಳು ಆ ದಿನ ಸಂಜೆ 7 ಗಂಟೆಯ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು. ಪ್ರಥಮ ಸ್ಥಾನ ಗಳಿಸುವ ತಂಡ  20,000 ರೂ. ನಗದು ಹಾಗೂ ಶಾಶ್ವತ ಫಲಕ ಪಡೆಯಲಿದೆ. ದ್ವಿತೀಯ ಸ್ಥಾನ ಗಳಿಸುವ ತಂಡ  12,000 ರೂ. ನಗದು ಬಹುಮಾನ ಹಾಗೂ ಶಾಶ್ವತ ಟ್ರೋಫಿ ಪಡೆಯಲಿದೆ. ತೃತೀಯ ಸ್ಥಾನ ಹಾಗೂ ಚತುರ್ಥ ಸ್ಥಾನ ಗಳಿಸುವ ತಂಡಗಳು ಅನುಕ್ರಮವಾಗಿ 6,000 ಹಾಗೂ 4,000 ರೂ. ಬಹುಮಾನ ಹಾಗೂ ಶಾಶ್ವತ ಫಲಕ ಗಳಿಸಲಿವೆ. ಅಲ್ಲದೆ ವೈಯಕ್ತಿಕ ವಿಭಾಗದಲ್ಲಿ ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಬೆಸ್ಟ್ ಡಿಫೆಂಡರ್ ಹಾಗೂ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ನೀಡಲಾಗುವುದು.
ಪಂದ್ಯಾಟದಲ್ಲಿ ಪಾಲ್ಗೊಳ್ಳ ಬಯಸುವ ತಂಡಗಳು 2,000 ರೂ. ಪ್ರವೇಶ ಶುಲ್ಕ ನೀಡಬೇಕಾಗುತ್ತದೆ.
ಹೆಚ್ಚಿನ ವಿವರಗಳಿಗೆ 9611846671, 9632105468 ಹಾಗೂ 7676545454 ದೂರವಾಣಿಯನ್ನು ಸಂಪರ್ಕಿಸಬಹುದು. ಕ್ರೀಡಾಪಟುಗಳು ತಮ್ಮ ವಾಸ್ತವ್ಯದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರತಕ್ಕದ್ದು.

Related Articles