Thursday, October 10, 2024

ಭಾರತದ ಕಬಡ್ಡಿಯನ್ನು ಅಮಾನತುಗೊಳಿಸಿದ ಐಕೆಎಫ್

ಹೊಸದಿಲ್ಲಿ: ಭಾರತದಲ್ಲಿ ಇತರ ಕ್ರೀಡೆಗಳು ಹಿಂದೆ ಉಳಿಯಲು ಮುಖ್ಯ ಕಾರಣ ಆಡಳಿತ ವ್ಯವಸ್ಥೆ. ಪ್ರೋ ಕಬಡ್ಡಿ ಮೂಲಕ ಭಾರತದಲ್ಲಿ ಕಬಡ್ಡಿಗೆ ಕ್ರಿಕೆಟ್‌ನಷ್ಟೇ ಬೇಡಿಕೆ ಬಂದಿತ್ತು. ಆದರೆ ಆಡಳಿತ ವ್ಯವಸ್ಥೆಯಲ್ಲಿ ಜಾಗತಿಕ ಸಂಸ್ಥೆಯ ನಿಯಮವನ್ನು ಪಾಲಿಸದ ಕಾರಣ ಈಗ ಅಮೆಚೂರ್‌ ಕಬಡ್ಡಿ ಫೆಡರೇಷನ್‌ ಅಫ್‌ ಇಂಡಿಯಾಕ್ಕೆ ನಿಷೇಧ ಹೇರಲಾಗಿದೆ. Indian Kabaddi Team barred from international tournaments by world body.

ಕಬಡ್ಡಿ ಭಾರತದ ಕ್ರೀಡೆ. ಆದರೆ ಭಾರದಲ್ಲೇ ಈ ಕ್ರೀಡೆಯ ಆಡಳಿತ ವ್ಯವಸ್ಥೆ ಸರಿ ಇಲ್ಲ ಎಂದಾಗ ನೋವಾಗುತ್ತದೆ. ಅಂತಾರಾಷ್ಟ್ರೀಯ ಕಬಡ್ಡಿ ಸಂಸ್ಥೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ಅವರಿಗೆ ಪತ್ರ ಬರೆದು ಭಾರತೀಯ ಕಬಡ್ಡಿ ತಂಡ ಯಾವುದೇ ಅಂತಾರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಆದೇಶ ನೀಡಿದೆ. ಐಕೆಎಫ್‌ ಅಧ್ಯಕ್ಷ ವಿನೋದ್‌ ಕುಮಾರ್‌ ತಿವಾರಿ ಅವರು ಆಯ್ಕೆಗೊಂಡ ಪದಾಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವವಹಿಸುತ್ತಿಲ್ಲ ಎಂದಿದ್ದಾರೆ.

ಇದರಿಂದಾಗಿ ಸೆಪ್ಟಂಬರ್‌ನಲ್ಲಿ ಇರಾನ್‌ನಲ್ಲಿ ನಡೆಯಲಿರುವ ವಿಶ್ವ ಬೀಚ್‌ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಸ್ಪರ್ಧಿಸುವಂತಿಲ್ಲ. ನವೆಂಬರ್‌ನಲ್ಲಿ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಏಷ್ಯನ್‌ ಒಳಾಂಗಣ ಮತ್ತು ವಿಶ್ವ ಮಾರ್ಷಲ್‌ ಆರ್ಟ್ಸ್‌ ಗೇಮ್ಸ್‌ನಿಂದಲೂ ಭಾರತ ವಂಚಿತವಾಗಲಿದೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ಎಕೆಎಫ್‌ಐ ಚುನಾವಣೆಯಲ್ಲಿ ವಿಬೋರ್‌ ಜೈನ್‌ ಹಾಗೂ ಜಿತೇಂದ್ರ ಪ್ರಾಣ್‌ ಸಿಂಗ್‌ ಅವರು ಅನುಕ್ರಮವಾಗಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುತ್ತಾರೆ. ಆದರೂ ಸಂಸ್ಥೆ ಕೆಲಸಗಳು ಈಗಿರುವ ಆಡಳಿತಾಧಿಕಾರಿಯ ಮೂಲಕವೇ ನಡೆಯುತ್ತಿದೆ.ಇದು ನ್ಯಾಯಾಲದಯ ಆದೇಶದ ಮೇರೆ ನಡೆಯುತ್ತಿದೆ. ಆದರೆ ಐಕೆಎಫ್‌ಗೆ ಈ ರೀತಿಯ ಕಾರ್ಯವೈಖರಿಯ ಬಗ್ಗೆ ಅಸಮಧಾನ ಹುಟ್ಟಿದೆ.

ಭಾರತಕ್ಕೆ ಪ್ರೋ ಕಬಡ್ಡಿ ಲೀಗ್‌ ಪರಿಚಯಿಸಿದ ಮಷಾಲ್‌ ಸ್ಪೋರ್ಟ್ಸ್‌ ಜೊತೆಗಿನ ಗುತ್ತಿಗೆಯನ್ನು ಎಕೆಎಫ್‌ಐ ರದ್ದು ಗೊಳಿಸಿದೆ. ಇದರಿಂದಾಗಿ ಮೇ ಕೊನೆಯ ವಾರದಲ್ಲಿ ನಡೆಯಬೇಕಾಗಿದ್ದ 11ನೇ ಆವೃತ್ತಿ ಪ್ರೋ ಕಬಡ್ಡಿ ಲೀಗ್‌ನ ಆಟಗಾರರ ಹರಾಜುಪ್ರಕ್ರಿಯೆಯೂ ರದ್ದಾಗಿದೆ.

Related Articles