Wednesday, November 6, 2024

ಚುನಾವಣೆಯ ರಿಂಗ್ ಗೆ ಬಾಕ್ಸರ್ ವಿಜೇಂದರ್

ನವದೆಹಲಿ:  ದೆಹಲಿ ಲೋಕಸಭೆಯ ಎಲ್ಲ 7 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಇಂದು ಪ್ರಕಟಿಸಿದ್ದು, ಒಲಿಂಪಿಕ್‌  ಪದಕ ವಿಜೇತ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಅವರಿಗೂ ಪಕ್ಷದ ಟಿಕೆಟ್‌ ನೀಡಲಾಗಿದೆ.

ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವಿಜೇಂದರ್‌ ಸಿಂಗ್‌, ತಮಗೆ ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್ ನೀಡಿರುವ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಪೂರ್ವ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ್‌ ಗಾಂಧಿ ವಾದ್ರಾ ಅವರಿಗೆ ಟ್ವಿಟರ್‌ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ. “ಸತತ 20 ವರ್ಷಗಳ ಬಾಕ್ಸಿಂಗ್‌ ವೃತ್ತಿ ಜೀವನದಲ್ಲಿ ದೇಶಕ್ಕೆ ಹೆಮ್ಮೆ ತರುವಂತೆ ಮಾಡಿದ್ದೇನೆ. ಹಾಗಾಗಿ, ಇದೀಗ ದೇಶ ಸೇವೆ ಮಾಡಬೇಕೆಂದು ಬಯಸಿದ್ದೇನೆ. ಇದಕ್ಕೆ ಅವಕಾಶ ಕಲ್ಪಿಸಿರುವ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ” ಎಂದು 2008ರ ಬೀಜಿಂಗ್‌ ಒಲಿಂಪಿಕ್‌ ಕಂಚಿನ ಪದಕ ವಿಜೇತ ವಿಜೇಂದರ್‌ ಟ್ವಿಟ್‌ ಮಾಡಿದ್ದಾರೆ.
ದೆಹಲಿ ಲೋಕಸಭಾ ಚುನಾವಣೆ ಮೇ.12 ರಂದು ಆರನೇ ಹಂತದಲ್ಲಿ ನಡೆಯಲಿದೆ. ಮೇ.26ರಂದು ಫಲಿತಾಂಶ ಹೊರಬೀಳಲಿದೆ.

Related Articles