Tuesday, September 10, 2024

ವಿಶ್ವಕಪ್‌ ಅಫ್ಘಾನಿಸ್ತಾನ ತಂಡ ಪ್ರಕಟ: ಅಸ್ಘರ್‌, ಹಸನ್‌ ಇನ್

ಕಾಬೂಲ್‌: ಮುಂಬರುವ ಐಸಿಸಿ ವಿಶ್ವಕಪ್‌ಗೆ 15 ಆಟಗಾರರ ಅಫ್ಘಾನಿಸ್ತಾನ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಮಾಜಿ ನಾಯಕ ಅಸ್ಘರ್‌ ಅಫ್ಘಾನ್‌ ಹಾಗೂ ವೇಗಿ ಹಮಿದ್‌ ಹಸನ್‌ ತಂಡಕ್ಕೆ ಮರಳಿದ್ದಾರೆ.

ಫಿಟ್ನೆಸ್‌ ಸಮಸ್ಯೆಯಿಂದ ಹಸನ್‌ ದೀರ್ಘಕಾಲ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದರು. ಇವರು 2017ರಲ್ಲಿ ಹಿರಿಯ ತಂಡದಲ್ಲಿ ಆಡಿದ್ದರು. ಹಸನ್‌ ಅವರ ಫಿಟ್ನೆಸ್ ಪರೀಕ್ಷೆ ಇನ್ನೂ ನಡೆದಿಲ್ಲ.

ಹಿರಿಯ ವೇಗಿ ಹಮಿದ್‌ ಹಸನ್‌ ತಂಡಕ್ಕೆ ಮರಳಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ಅಭ್ಯಾಸ ಪಂದ್ಯಗಳಲ್ಲಿ ಅವರನ್ನು ಆಡಿಸಲಾಗುವುದು” ಎಂದು ಅಫ್ಘಾನಿಸ್ತಾನ ಮುಖ್ಯ ತರಬೇತುದಾರ ದಲ್ವತ್‌ ಖಾನ್‌ ತಿಳಿಸಿರುವುದಾಗಿ ಐಸಿಸಿ ವೆಬ್‌ ಸೈಟ್‌ ಪ್ರಕಟಿಸಿದೆ.

ಕಳೆದ ತಿಂಗಳು ಅಫ್ಘಾನಿಸ್ತಾನ ತಂಡದ ನಾಯಕತ್ವದಿಂದ ಕೆಳಗಿಳಿಸಿದ ಅಸ್ಘರ್‌ ಅಫ್ಘಾನ್‌ ಅವರನ್ನು ಮತ್ತೆ ತಂಡಕ್ಕೆ ಪರಿಗಣಿಸಲಾಗಿದೆ. ತಂಡದ ನಾಯಕತ್ವದ ಜವಾಬ್ದಾರಿಯನ್ನು ಗುಲ್ಬುದ್ದಿನ್‌ ನೈಬ್‌ಗೆ ವಹಿಸಲಾಗಿದೆ. ಇವರ ಜತೆ, ಮೊಹಮ್ಮದ್‌ ನಬಿ, ರಶೀದ್‌ ಖಾನ್‌, ಮೊಹಮ್ಮದ್‌ ಶಹದಾಜ್‌ ಹಾಗೂ ಸಮಿಹುಲ್ಲಾ ಶಿನ್ವಾರಿ ಅವರು ತಂಡಕ್ಕೆ ಆಯ್ಕೆಯಾಗಿದ್ದಾರೆ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌  ಇಕ್ರಾಂ ಅಲಿಖಿಲ್ ಅವರನ್ನು ವಿಶ್ವಕಪ್‌ಗೆ ಪರ್ಯಾಯ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
ಅಫ್ಘಾನಿಸ್ತಾನ ( ಐಸಿಸಿ ವಿಶ್ಬಕಪ್‌): ಗುಲ್ಬುದ್ದಿನ್‌ ನೈಬ್‌ (ನಾಯಕ), ಮೊಹಮ್ಮದ್‌ ಶಹ್ಜಾದ್‌ (ವಿ.ಕೀ), ನೂರ್‌ ಅಲಿ ಝರ್ದಾನ್‌, ಹಜ್ರತುಲ್ಹಾ ಝಝಾಯ್‌, ರಹಮತ್‌ ಶಾ, ಅಸ್ಘರ್‌ ಅಫ್ಘಾನ್‌,  ಹಸ್ಮತುಲ್ಹಾ ಶಾಹಿದಿ, ನಾಜಿಬುಲ್ಹಾ ಝರ್ದಾನ್‌, ಸಮಿಹುಲ್ಹಾ ಶಿನ್ವಾರಿ, ಮೊಹಮ್ಮದ್‌ ನಬಿ, ರಶೀದ್‌ ಖಾನ್‌, ದವ್ಲತ್‌ ಝರ್ದಾನ್‌, ಅಫ್ಧಾಬ್‌ ಅಲಾಂ, ಹಮೀದ್‌ ಹಸನ್‌ ಹಾಗೂ ಮುಜೀಬ್‌ ಉರ್‌ ರಹಮಾನ್‌.

Related Articles