Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಚುಟುಕು ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

ಚೆನ್ನೈ:

ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್(92) ಹಾಗೂ ರಿಷಭ್ ಪಂತ್(58) ಅವರ ಸ್ಪೋಟಕ ಅರ್ಧ ಶತಕಗಳ ನೆರವಿನಿಂದ ಭಾರತ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆರು ವಿಕೆಟ್ ಗಳ ಜಯ ಸಾಧಿಸಿತು. ಅಂದುಕೊಂಡಂತೆ ಟೀಂ ಇಂಡಿಯಾ ಚುಟುಕು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂ ಡಿತು. ಇನ್ನೂ ಪಂದ್ಯ ಗೆದ್ದು ಗೌರವ ಉಳಿಸಿಕೊಳ್ಳಬೇಕು ಎಂಬ  ತವಕದಲ್ಲಿದ್ದ ವಿಂಡೀಸ್ ಗೆ ಸೋಲುವ ಮೂಲಕ ಭಾರತ ಪ್ರವಾಸದ ಅಭಿಯಾನ ಮುಗಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 181 ರನ್ ದಾಖಲಿಸಿತು. ವಿಂಡೀಸ್ ಪರ ಉತ್ತಮ ಬ್ಯಾಟಿಂಗ್ ಮಾಡಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ನಿಕೋಲಾಸ್ ಪೂರನ್(53*) ಕೇವಲ 25 ಎಸೆತಗಳಿಗೆ ಸ್ಪೋಟಕ ಅರ್ಧ ಶತಕ ಸಿಡಿಸಿದರು. ಇವರಿಗೆ ಸಾಥ್ ನೀಡಿದ ಡೆರೆನ್ ಬ್ರಾವೊ 37 ಎಸೆತಗಳಲ್ಲಿ 43 ರನ್ ಗಳಿಸಿ ತಂಡದ ಮೊತ್ತ 180ರ ಗಡಿ ದಾಟಲು ನೆರವಾದರು. ಇದರೊಂದಿಗೆ ಪ್ರವಾಸಿ ತಂಡ ಭಾರತಕ್ಕೆ 182 ರನ್ ಸವಾಲಿನ ಗುರಿ ನೀಡಿತು .
ಗುರಿ ಬೆನ್ನತ್ತಿದ ಭಾರತ  20 ಓವರ್ ಗಳಿಗೆ   ನಾಲ್ಕು ವಿಕೆಟ್ ಕಳೆದುಕೊಂಡು 182 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಭಾರತದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಕೇವಲ ನಾಲ್ಕು ರನ್ ಗಳಿಸಿ ಔಟ್ ಆದರು. ರಾಹುಲ್(17) ಕೂಡ ನಿರಾಸೆ ಮೂಡಿಸಿದರು. ನಂತರ, ಜತೆಯಾದ ಶಿಖರ್ ಧವನ್ ಹಾಗೂ ರಿಷಭ್ ಪಂತ್ ವಿಂಡೀಸ್ ಬೌಲರ್ ಗಳನ್ನು ಚೆಂಡಾಡಿದರು. ಈ ಜೋಡಿ
130 ರನ್ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಸಮೀಪ ತಂದರು. 62 ಎ ಸೆತಗಳಲ್ಲಿ ಶಿಖರ್ ಧವನ್ 92 ರನ್ ಗಳಿಸಿದರು. ಇನ್ನೂ, ಪಂತ್ 38 ಎಸೆತಗಳಲ್ಲಿ 58 ಗಳಿಸಿ ತಂಡದ ಗಲುವಿಗೆ ಕೊಡುಗೆ ನೀಡಿದರು.
ಅಂತಿಮವಾಗಿ, ಭಾರತ ಆರು ವಿಕೆಟ್ ಗಳಿಂದ ಗೆದ್ದು ಬೀಗಿತು. ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಕುಲ್ದೀಪ್ ಯಾದವ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

administrator