ದಕ್ಷಿಣ ವಲಯ ನೆಟ್‌ಬಾಲ್ ರಾಜ್ಯ ತಂಡ

0
286
ಸ್ಪೋರ್ಟ್ಸ್ ಮೇಲ್ ವರದಿ

ಕೇರಳ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನವೆಂಬರ್ 20 ಹಾಗೂ 21ರಂದು ತ್ರಿಶೂರ್‌ನ  ಡಾನ್ ಬಾಸ್ಕೋ ಎಸ್‌ಎಸ್‌ಎಸ್ ಇನ್‌ಸ್ಟಿಟ್ಯೂಟ್  ಇಲ್ಲಿ ನಡೆಯಲಿರುವ 12ನೇ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಆಯ್ಕೆಗೊಂಡ ಕರ್ನಾಟಕ ತಂಡಕ್ಕೆ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಅಂಬೇಡ್ಕರ್  ಅಂಗಣದಲ್ಲಿ ಏಳು ದಿನಗಳ ಕಾಲ ಕರ್ನಾಟಕದ ಮಹಿಳಾ ಹಾಗೂ ಪುರುಷ ತಂಡಗಳಿಗೆ ತರಬೇತಿ ಶಿಬಿರ ನಡೆಯಿತು.
ತಂಡದ ವಿವರ
ಪುರುಷರ ತಂಡ– ಮನೋಜ್ ಕೆ. (ನಾಯಕ), ಶಶಕ್ತ್ ಎಚ್.ಎಸ್. (ಉಪನಾಯಕ), ರೋಹಿತ್ ಪಿಡಿ, ಆಕಾಶ್ ಯು, ಶ್ರೀನಿವಾಸ್, ಜಯಾನಂದ ಡಿ., ದುರ್ಗಾ ಪ್ರಸಾದ್, ವಿನಯ್ ಶೆಟ್ಟಿ, ಸಯ್ಯದ್ ಮಸೂದ್ ಅಹಮ್ಮದ್, ಹೊನ್ನರಾಜು, ಕಾರ್ತಿಕ್ ಎಸ್.ಕೆ., ಮಣಿಕಂಠ ಡಿ
ಕೋಚ್- ಮಂಜುನಾಥ್ ಎಚ್.ಕೆ., ಮ್ಯಾನೇಜರ್-ಶ್ರೀರಾಮ್.
ಮಹಿಳಾ ತಂಡ– ರೋಶನಿ ಆರ್. (ನಾಯಕಿ), ಸಿಂಧೂ  ಜಿ. (ಉಪನಾಯಕಿ), ರಂಜಿತ್ ಬಿಜೆ, ವೈಷ್ಣವಿ, ದೀಪಾ ಟಿ.ಆರ್., ದೀಪಿಕಾ ಎಸ್, ದೀಪ್ತಿ ಜೆ. ಬಾಬು, ಶಾಲಿನಿ ಕೆ., ದೀಕ್ಷಿತಾ ಎಸ್., ಸಿರಿ ಯಾದವ್ ಎಸ್., ವರ್ಷಾ ಕೆ.ಎಚ್., ಶಿಲ್ಪಾ ಕೆ.ಎಸ್.
ಕೋಚ್- ಬಸವರಾಜ್ ಪಾಟೀಲ್, ಮ್ಯಾನೆಜರ್-ಮಾನಸ ಎಲ್.ಜಿ.
ತರಬೇತಿ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಬಿಬಿಎಂಪಿ ನಾಗಪುರ  ವಾರ್ಡ್‌ನ ಸದಸ್ಯ ಬಿ. ಬದ್ರೇಗೌಡ್, ಎಎನ್‌ಬಿಎಕೆ ಪ್ರಧಾನ ಕಾರ್ಯದರ್ಶಿ ಗಿರೀಶ್ ಸಿ., ಎಎನ್‌ಬಿಎಕೆ ಜಂಟಿ ಕಾರ್ಯದರ್ಶಿ ಗಿರೀಶ್ ಪಿ.  ಹಾಗೂ ಇತರ ಪ್ರಮುಖರು ಹಾಜರಿದ್ದರು.