ದೇಶದ ಪರ ಆಡಲು ಆಸಕ್ತಿ ಇಲ್ಲ: ಹೂಪರ್

0
220
ಕೊಲ್ಕತಾ:

ವೆಸ್ಟ್ ಇಂಡೀಸ್ ನಲ್ಲಿ ಸ್ಟಾರ್ ಆಟಗಾರರು ಇದ್ದರೂ ರಾಷ್ಟ್ರೀಯ ತಂಡದಲ್ಲಿ ಆಡಲು ಆಸಕ್ತಿ ತೋರದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದು ವಿಂಡೀಸ್ ಮಾಜಿ ಕ್ರಿಕೆಟಿಗ ಕಾರ್ಲ್ ಹೂಪರ್ ವಿಷಾದ ವ್ಯಕ್ತಪಡಿಸಿದರು.

ಕ್ರಿಸ್ ಗೇಲ್, ಆಂಡ್ರೊ ರಸೆಲ್ ಹಾಗೂ ಸುನೀಲ್ ನರೆನ್ ಅವರ ಅನುಪಸ್ಥಿಯಲ್ಲಿ ಟಿ-20 ಚಾಂಪಿಯನ್ ತಂಡ ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ವಿರುದ್ಧ ಐದು ವಿಕೆಟ್ ಗಳ ಸೋಲು ಅನುಭವಿಸಿದೆ ಎಂದರೆ ಹೇಳಲು ಹೇಸಿಗೆ ಆಗುತ್ತದೆ ಎಂದು ಹೇಳಿದರು.
ರಾಷ್ಟ್ರೀಯ ತಂಡದಲ್ಲಿ ಅವರಿಗೆ ಆಡಲು ಆಸಕ್ತಿ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ವೆಸ್ಟ್ ಇಂಡೀಸ್ ಹಿರಿಯ ಆಟಗಾರರು ಆಡಿದರೆ ಭಾರತ ಗೆಲ್ಲುವುದು ಸುಲಭವಲ್ಲ. ಇದೀಗ ಯುವ ತಂಡವಾಗಿದ್ದರಿಂದ ಬಲಿಷ್ಠವಾಗಲು ಇನ್ನೂ ಕಾಲಾವಕಾಶ ಬೇಕು ಎಂದರು.