Sunday, September 8, 2024

ಪ್ರೊ ವಾಲಿಬಾಲ್ ಲೀಗ್; ರಂಜಿತ್ ಸಿಂಗ್‌ಗೆ 13 ಲಕ್ಷ ರೂ.

ಸ್ಪೋರ್ಟ್ಸ್‌ಮೇಲ್ ವರದಿ

ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೇಶದ ಮೊದಲ ಪ್ರೊ ವಾಲಿಬಾಲ್ ಲೀಗ್ ಆಟಗಾರರ ಹರಾಜು ದಿಲ್ಲಿಯಲ್ಲಿ ನಡೆಯುತ್ತಿದ್ದು, ಶುಕ್ರವಾರ ಮಧ್ಯಾಹ್ನದ ವೇಳೆಯ ಹೊತ್ತಿನ ವಿರಾಮದ ವೇಳೆ ಭಾರತದ ಆಟಗಾರ ರಂಜಿತ್ ಸಿಂಗ್ 13 ಲಕ್ಷ ರೂ.ಗಳಿಗೆ ಅಹಮದಾಬಾದ್ ಡಿೆಂಡರ್ಸ್ ತಂಡದ ಪಾಲಾಗಿದ್ದಾರೆ.

ಬೇಸ್‌ಲೇನ್ ವೆಂಚರ್ಸ್ ಹಾಗೂ ಭಾರತೀಯ ವಾಲಿಬಾಲ್ ಫೆಡರೇಷನ್ ಆಶ್ರಯದಲ್ಲಿ ಈ ಪ್ರೊ ವಾಲಿಬಾಲ್ ಲೀಗ್ ನಡೆಯಲಿದೆ. ಸುಮಾರು 117 ಭಾರತದ ಆಟಗಾರರು ಆರು ತಂಡಗಳಿಗಾಗಿ ಆಯ್ಕೆಯಾಗಲಿದ್ದಾರೆ. ಈಗಾಗಲೇ ಆರು ವಿದೇಶಿ ಆಟಗಾರರು ವಿವಿಧ ತಂಡಗಳನ್ನು ಸೇರಿಕೊಂಡಿದ್ದಾರೆ.
ರಂಜಿತ್ ಸಿಂಗ್ ಭಾರತದ ಅತಿ ದುಬಾರಿ ಆಟಗಾರರೆನಿಸಿದರು. ಡಿಫೆಂಡರ್ ಆಗಿರುವ ಸಿಂಗ್, ಹಲವಾರು ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುತ್ತಾರೆ. ‘ನಮ್ಮ ಮೇಲೆ ತಂಡದ ಮಾಲೀಕರು ಇಟ್ಟಿರುವ ನಂಬಿಕೆಗೆ ತಕ್ಕುದಾದ ಆಟವನ್ನು ಆಡುತ್ತೇವೆ,‘ ಎಂದು ರಂಜಿತ್ ಸಿಂಗ್ ಹೇಳಿದ್ದಾರೆ.
ವಿದೇಶಿ ಆಟಗಾರರ ಆಯ್ಕೆಯಲ್ಲಿ ಮೊದಲ ಅವಕಾಶ ಪಡೆದ ಹಾಕ್ಸ್ ಹೈದರಾಬಾದ್  ಕಾರ್ಸನ್ ಕ್ಲಾರ್ಕ್ ಅವನ್ನು ಆಯ್ಕೆ ಮಾಡಿದರೆ, ಕ್ಯಾಲಿಕಟ್ ಹೀರೋಸ್ ಪೌಲ್ ಲಾಟ್‌ಮ್ಯಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಚೆನ್ನೆ‘ ಸ್ಪಾರ್ಟನ್ಸ್ ತಂಡ ಕೆನಡಾದ ಅಂತಾರಾಷ್ಟ್ರೀಯ ಆಟಗಾರ ರೂಡಿ ವೆರ್‌ಹಾಯ್ಫ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ತಿಮಿಸ್ಲಾವ್ ಕಾಸ್ಕೋವಿಕ್, ಡೇವಿಡ್ ಲೀಗ್ ಹಾಗೂ ನೊವಿಕಾ ಬೆಲಿಕಾ ಅವರನ್ನು ಅನುಕ್ರಮವಾಗಿ ಯು ಮುಂಬಾ ವಾಲಿ, ಕೊಚ್ಚಿ ಬ್ಲೂ ಸ್ಪೈಕರ್ಸ್ ಹಾಗೂ ಅಹಮದಾಬಾದ್ ಡಿೆಂಡರ್ಸ್ ತಂಡಗಳು ಖರೀದಿಸಿದವು.
2019, ಫೆಬ್ರವರಿ 2ರಿಂದ ಪ್ರೊ ವಾಲಿಬಾಲ್ ಲೀಗ್ ತಂಡಗಳು ಆರಂಭಗೊಳ್ಳಲಿವೆ. ಅಹಮದಾಬಾದ್ ಡಿಫೆಂಡರ್ಸ್, ಕ್ಯಾಲಿಕಟ್ ಹೀರೋಸ್, ಚೆನ್ನೈ ಸ್ಪಾರ್ಟನ್ಸ್, ಯು ಮುಂಬಾ ವಾಲಿ, ಬ್ಲ್ಯಾಕ್ ಹಾಕ್ಸ್ ಹೈದರಾಬಾದ್ ಹಾಗೂ ಕೊಚ್ಚಿ ಬ್ಲೂ ಸ್ಪೈಕರ್ಸ್ ತಂ ಮೊದಲ ಪ್ರೊ ವಾಲಿಬಾಲ್ ಲೀಗ್‌ನಲ್ಲಿ ಪಾಲ್ಗೊಳ್ಳಲಿವೆ.
ಕೊಚ್ಚಿಯ ರಾಜೀವ್ ಗಾಂಧಿ ಕ್ರೀಡಾಂಗಣ ಹಾಗೂ ಚೆನ್ನೈನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಇಬ್ಬರು ವಿದೇಶಿ ಆಟಗಾರರು ಸೇರಿದಂತೆ ಪ್ರತಿಯೊಂದು ತಂಡದಲ್ಲಿ 12 ಆಟಗಾರರಿರುತ್ತಾರೆ. ಅದರಲ್ಲಿ ಒಬ್ಬರು ಭಾರತೀಯ ಐಕಾನ್ ಆಟಗಾರ ಹಾಗೂ 21 ವರ್ಷ ವಯೋಮಿತಿಯ ಒಬ್ಬ ಆಟಗಾರ ಸೇರಿರುತ್ತಾರೆ. ಒಟ್ಟು 18 ಪಂದ್ಯಗಳು ನಡೆಯಲಿದ್ದು, ರೌಡ್ ರಾಬಿನ್ ಮಾದರಿಯಲ್ಲಿ ಪ್ರತಿಯೊಂದು ತಂಡಗಳೂ ಒಮ್ಮೆ ಮುಖಾಮುಖಿಯಾಗುತ್ತವೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತವೆ.

Related Articles