ರಾಜ್ಯಮಟ್ಟದ ಪಿಕಲ್‌ಬಾಲ್ ಟೂರ್ನಿ

0
202
ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನವೆಂಬರ್ 1ರಂದು ಬೆಂಗಳೂರಿನ ವಸಂತಪುರದಲ್ಲಿ ಮೊದಲ ರಾಜ್ಯಮಟ್ಟದ ಪಿಕಲ್‌ಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ.

ರಾಜ್ಯ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ನೆರವಿನಿಂದ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು ಅಕ್ಟೋಬರ್ 28ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ವಸಂತಪುರದಲ್ಲಿರುವ ಏಕಲವ್ಯ ಪ್ರೀಮಿಯರ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಚಾಂಪಿಯನ್‌ಷಿಪ್ ನಡೆಯಲಿದೆ. ಪ್ರವೇಶ ಶುಲ್ಕ ತಲಾ ಒಬ್ಬರಿಗೆ 200 ರೂ. ಆಗಿರುತ್ತದೆ. ಆಟಗಾರರ ವಾರ್ಷಿಕ ಶುಲ್ಕ 100 ರೂ  ಆಗಿರುತ್ತದೆ. ನಾನ್ ಮಾರ್ಕಿಂಗ್ ಶೂ ಧರಿಸಿಯೇ ಆಡತಕ್ಕದ್ದು. ಪುರುಷರ ಡಬಲ್ಸ್, ಮಹಿಳಾ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.

ಹೆಚ್ಚಿನ ವಿವರಗಳಿಗೆ 9972227345, 9916000600 ದೂರವಾಣಿಯನ್ನು ಸಂಪರ್ಕಿಸಬಹುದು.