Friday, December 13, 2024

ಮನೆಯಂಗಣದಲ್ಲಿ ಮಿಂಚಿದ ಎಟಿಕೆ

ಸ್ಪೋರ್ಟ್ಸ್ ಮೇಲ್ ವರದಿ

ಕಲು ಅಚೆ ( 3ನೇ ನಿಮಿಷ)  ಜಾನ್ ಜಾನ್ಸನ್ (13ನೇ ನಿಮಿಷ) ಗಳಿಸಿದ ಎರಡು ಗೋಲುಗಳ ನೆರವಿನಿಂದ ಎಟಿಕೆ ತಂಡ ಚೆನ್ನೈಯಿನ್ ಎಫ್ ಸಿ ವಿರುದ್ಧ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. ಇದು ಎಟಿಕೆ ತಂಡಕ್ಕೆ ಪ್ರಸಕ್ತ ಋತುವಿನಲ್ಲಿ ಮನೆಯಂಗಣದಲ್ಲಿ ಸಿಕ್ಕ ಮೊದಲ ಜಯ. ಚೆನ್ನೈ ಪರ ಕಾರ್ಲೋಸ್ ಸಲೋಮ್ (17 ನೇ ನಿಮಿಷ ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಖಾತೆ ತೆರೆದ ಚೆನ್ನೈ 

ಹಾಲಿ ಚಾಂಪಿಯನ್ ಚೆನ್ನೈಯಿನ್  ತಂಡ ಕಾರ್ಲೋಸ್ ಸಲೋಮ್ ಗಳಿಸಿದ ಗೋಲಿನಿಂದ ಪ್ರಸಕ್ತ ಋತುವಿನಲ್ಲಿ ಮೊದಲ ಗೋಲು ಗಳಿಸಿ ಗೌರವ ಕಾಯ್ದುಕೊಂಡಿತು. ಆದರೆ ಇದಕ್ಕೂ ಮುನ್ನ ಎಟಿಕೆ ಪರ ಜಾನ್ ಜಾನ್ಸನ್ ಹಾಗೂ ಕಲು ಉಚೆ ಎರಡು ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದ್ದರು. ಎಟಿಕೆ ಮನೆಯಂಗಣದಲ್ಲಿ ಇದೇ ಮೊದಲ ಬಾರಿಗೆ ಋತುವಿನ ಗೋಲು ಗಳಿಸಿರುವುದು ವಿಶೇಷ. ಕೇವಲ 12 ನಿಮಿಷಗಳ ಅವಧಿಯಲ್ಲಿ ಜಾನ್ ಜಾನ್ಸನ್ ಹಾಗೂ ಕಲು ಉಚೆ ಎರಡು ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಪ್ರಥಮಾರ್ಧದಲ್ಲಿ  ಇತ್ತಂಡಗಳಿಗೂ ಗೋಲು ಗಳಿಸಲು ಉತ್ತಮ ಅವಕಾಶ ಕೂಡಿ ಬಂತು. ಮಾನ್ವೆಲ್ ಲಾನ್ಜೆರೋಟ್ ಮೊದಲ ಅವಧಿಯ ಹೀರೋ ಎನಿಸಿದರು. ಎರಡೂ ಗೋಲು ಗಳಿಕೆಯಲ್ಲಿ ಅವರು ನೀಡಿದ ಪಾಸ್ ಪ್ರಮುಖವಾಗಿತ್ತು. ಪ್ರವಾಸಿ ತಂಡ ಪ್ರಥಮಾರ್ಧದಲ್ಲಿ  ಒಂದು ಗೋಲಿನಿಂದ ಹಿಂದೆ ಬಿದ್ದಿರಬಹುದು, ಆದರೆ ಚೆನ್ನೈ ನೈಜ ಚಾಂಪಿಯನ್ನರಂತೆ ಆಟ ಪ್ರದರ್ಶಿಸಿತ್ತು.ಫ್ರಾನ್ಸಿಸ್ಕೋ  ಫೆರ್ನಾಂಡೀಸ್ ಗಾಯಗೊಂಡಿರುವುದು ತಂಡದ ಬಲದ ಮೇಲೆ ಪರಿಣಾಮ ಬಿದ್ದಿರುವುದು ನಿಜ. ಆದರೆ ಬೆಂಚ್‌ನಲ್ಲಿ ಉತ್ತಮ ಆಟಗಾರರಿರುವುದರಿಂದ ಆ ಬಗ್ಗೆ ಹೆಚ್ಚು ಯೋಚಿಸಬೇಕಾಗಿಲ್ಲ.

 ಚೆನ್ನೈಯಿನ್‌ಗೆ ಮೊದಲ ಗೋಲು

ಹಾಲಿ ಚಾಂಪಿಯನ್ ಚನ್ನೈ ಯಿನ್ ಎಫ್ ಸಿ  ಪರ ಕಾರ್ಲೋಸ್ ಸಲೋಂ 17ನೇ  ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಂಡ ಋತುವಿನ ಮೊದಲ ಗೋಲು ಗಳಿಸಿ ಗೌರವ ಕಾಯ್ದುಕೊಂಡಿತು.ಫ್ರಾನ್ಸಿಸ್ಕೋ ಫೆರ್ನಾಂಡೀಸ್ ನೀಡಿದ ನೀಡಿದ ಪಾಸ್ ತಂಡದ ಮೊದಲ ಯಶಸ್ಸಿಗೆ ಕಾರಣವಾಯಿತು.

ಎಟಿಕೆ ಮೇಲುಗೈ

ಲಾನ್ಜೆರೋಟ್ ಅವರಿಗೆ 11ನೇ ನಿಮಿಷದಲ್ಲೇ ಎರಡನೇ ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಸಾಧ್ಯವಾಗಲಿಲ್ಲ. ಜಾನ್ ಜಾನ್ಸನ್ ಮಾತ್ರ 13ನೇ ನಿಮಿಷದಲ್ಲಿ ತಂಡಕ್ಕೆ 2-0 ಮುನ್ನಡೆ ಕಲ್ಪಿಸುವಲ್ಲಿ ಯಶಸ್ವಿಯಾದರು. ಲಾನ್ಜೆರೋಟ್ ನೀಡಿದ ಪಾಸ್ ಮೂಲಕ ಜಾನ್ ಜಾನ್ಸನ್ ಗೋಲು ಗಳಿಸಿದರು.
3ನೇ ನಿಮಿಷದಲ್ಲೇ ಗೋಲು
ಪಂದ್ಯದ ಆರಂಭದಲ್ಲೇ ಎಟಿಕೆ ಆಕ್ರರಮಣಕಾರಿ ಆಟ ಪ್ರದರ್ಶಿಸಿತ್ತು, ಪರಿಣಾಮ ಪಂದ್ಯ ಆರಂ‘ಗೊಂಡ ಮೂರನೇ ನಿಮಿಷದಲ್ಲಿ ಕಲು ಅಚೆ ಅವರಿಂದ ಗೋಲು ದಾಖಲಾಯಿತು, ಮನೆಯಂಗಣದಲ್ಲಿ ಎಟಿಕೆ ಋತುವಿನ ಮೊದಲ ಗೋಲು ಗಳಿಸಿತು. ಚೆನ್ನೆ‘ಯಿನ್ ಗೋಲ್‌ಕೀಪರ್ ತುಳಿದ ಚೆಂಡು ನೇರವಾಗಿ ಗೆರ್ಸನ್ ವಿಯೆರಾ ಅವರ ಹೆಡರ್ ಮೂಲಕ ಕಲು ಅಚೆ ಅವರ ನಿಯಂತ್ರಣಕ್ಕೆ ಸಿಲುಕಿತು. ಎದುರಾಳಿ ತಂಡದ ಆಟಗಾರರು ಇನ್ನೂ ಹೊಂದಿಕೊಳ್ಳುತ್ತಿರುವಾಗಲೇ ಚುದುರಿದ ಫಾರ್ವರ್ಡ್ ವಲಯದಲ್ಲಿ ಚೆಂಡನ್ನು ಮುನ್ನಡೆಸಿದ ಕಲು ಅಚೆ, ಸುಲಭವಾಗಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು.

ಎಟಿಕೆ ಮನೆಯಂಗಣದಲ್ಲಿ ಮಿಂಚಬೇಕಿದೆ

ಮನೆಯಂಗಣದಲ್ಲಿ ಎರಡು ಪಂದ್ಯಗಳಲ್ಲಿ ಒಂದು,ಸೋತು, ಒಂದು ಡ್ರಾ ಕಂಡಿದೆ. ಹೊರಗಿನ ಒಂದು ಪಂದ್ಯದಲ್ಲಿ ಜಯ ಕಂಡಿರುವ ಎಟಿಕೆ ತಂಡ ಈಗ ಮನೆಯಂಗಣದಲ್ಲಿ ಮತ್ತೆ ಆಡಲು ಸಜ್ಜಾಗಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಗಳಿಸಿರುವುದು ಕೇವಲ ೪ ಅಂಕ. ಮನೆಯಂಗಣದಲ್ಲಿ ಎಟಿಕೆ ಮಿಂಚಬೇಕಾಗಿದೆ. ಪ್ರೇಕ್ಷಕರ ಪ್ರೋತ್ಸಾಹ ಹಾಗೂ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ಇದು ಸುಲಭ.
ಮನೆಯಂಗಣದಲ್ಲಿ ಎಟಿಕೆ ಒಂದು ಗೋಲನ್ನೂ ಗಳಿಸಲಿಲ್ಲ. ಮ್ಯಾನ್ವೆಲ್ ಲಾನ್ಜೆರೋಟ್ ತಮ್ಮ ನೈಜ ಆಟ ಪ್ರದರ್ಶಿಸಿದರೆ, ಎಟಿಕೆಗೆ ಜಯದ ಹಾದಿ ಸುಲಭವಾಗಲಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ಎಟಿಕೆ ಗಳಿಸಿರುವ ಗೋಲುಗಳಲ್ಲಿ ಲಾನ್ಜೆರೋಟ್ ಅವರ ಪಾತ್ರ ಪ್ರಮುಖವಾಗಿದೆ.
ಇನ್ನೂ ಖಾತೆ ತೆರೆಯದ ಚೆನ್ನೈಯಿನ್ ಎಫ್ ಸಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಹಾಲಿ ಚಾಂಪಿಯನ್ ಹಿಂದಿನ ಪಂದ್ಯಗಳಲ್ಲಿ ಗೋಲುಗಳಿಸಲು ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಂಡಿತ್ತು. ಆದರೆ ಯಶಸ್ಸು ಕಾಣಲಿಲ್ಲ. ಚಾಂಪಿಯನ್ ತಂಡ ಇನ್ನೂ ಜಯದ ಅಂಕ ಗಳಿಸದೆ ಮುಂದುವರೆದಿದೆ. ಒಂದು ಗೋಲನ್ನೂ ಗಳಿಸಲಿಲ್ಲ.

Related Articles