ಚೆಸ್ : ರಿತ್ವಿಜ್ ಪರಬ್‌ಗೆ ಚಾಂಪಿಯನ್ ಪಟ್ಟ

0
155
ಸ್ಪೋರ್ಟ್ಸ್ ಮೇಲ್ ವರದಿ

ರೋಟರಿ ಕ್ಲಬ್ ಹಬ್ಬಳ್ಳಿ ಉತ್ತರ, ಧಾರವಾಡ ಜಿಲ್ಲಾ ಚೆಸ್ ಸಂಸ್ಥೆ ಹಾಗೂ ಕೆಎಲ್‌ಇ ತಾಂತ್ರಿಕ ಶಿಕ್ಷಣ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಅಖಿಲ ಭಾರತ ಮುಕ್ತ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಗೋವಾದ ರಿತ್ವಿಜ್ ಪರಬ್ (2252) ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.

ರಿತ್ವಿಜ್ ಪರಬ್ (2252), ಯಶಸ್ ಡಿ (2248) ಹಾಗೂ ಜಿಎಂ ತೇಜ್‌ಕುಮಾರ್‌ಎಂ,ಎಸ್ (2471) ತಲಾ 8 ಅಂಕಗಳನ್ನು ಗಳಿಸಿದ್ದರು. ಆದರೆ ಉತ್ತಮ ಟೈಬ್ರೇಕ್ ಆಧಾರದ ಮೇಲೆ ರಿತ್ವಿಜ್ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಯಶಸ್ ಹಾಗೂ ತೇಜ್‌ಕುಮಾರ್ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.
ಅಂತಿಮ ಸುತ್ತಿನಲ್ಲಿ ರಿತ್ವಿತ್ ಗೋವಾದವರೇ ಆದ ನಿರಜ್ ಸರಿಪಳ್ಳಿ ಅವರನ್ನು ಸೋಲಿಸಿದರು. ಯಶಸ್ ನಿನ್ನೆ ಅಗ್ರ ಸ್ಥಾನದಲ್ಲಿದ್ದ ಸಮ್ಮದ್ ಜಯ ಕುಮಾರ್ ಅವರಿಗೆ ಸೋಲುಣಿಸಿದರು. ತೇಜ್ ಕುಮಾರ್ ಮೂರನೇ ಸುತ್ತಿನಲ್ಲಿ ಹರ್ಮನ್ ಸಾಲ್ದಾನಾ ಅವರನ್ನು ಪರಾಭವಗೊಳಿಸಿದರು.
ಬಹುಮಾನ ವಿತರಣ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ರೋ. ರವಿಕಿರಣ್ ಕುಲಕರ್ಣಿ ಮುಖ್ಯ ಅತಿಥಿಗಳಾಗಿದ್ದರು. ಡಾ. ಬಿ.ಎಸ್. ಅನಾಮಿ, ರೋ. ನರೇಂದ್ರ ಬರ್ವಾಲ್,  ಸಹಾಯಕ ಗವರ್ನರ್ , ಅಖಿಲ ಭಾರತ ಚೆಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆಯ ಕಾರ್ಯದರ್ಶಿ ಆರ್. ಹನುಮಂತ ಸೇರಿದಂತೆ ಪ್ರಮುಖ ಗಣ್ಯರು ಹಾಜರಿದ್ದರು. ಹುಬ್ಬಳ್ಳಿ ರೋಟರಿ ಕ್ಲಬ್‌ನ ಕಾರ್ಯದರ್ಶಿ ಡಾ. ನಾಗರಾಜ ಶೆಟ್ಟಿ ಸೇರಿದಂತೆ ಪ್ರಮುಖ ಗಣ್ಯರು ಹಾಜರಿದ್ದರು.