Sunday, September 8, 2024

ಕೊರೊ ಗೈರಿನಲ್ಲಿ ಜೆಮ್ಷೆಡ್ಪುರ ಎದುರಿಸಲಿರುವ ಗೋವಾ

ಸ್ಪೋರ್ಟ್ಸ್ ಮೇಲ್ ವರದಿ

ಸ್ಟಾರ್ ಸ್ಟ್ರೈಕರ್ ಫೆರಾನ್ ಕೊರೊಮಿನಾಸ್ ಅವರ ಅನುಪಸ್ಥಿತಿಯಲ್ಲಿ ಸರ್ಗಿಯೊ ಲೊಬೆರಾ ನೇತೃತ್ವದ ಗೋವಾ ಪಡೆ ಹೀರೋ ಇಂಡಿಯನ್ ಸೂಪರ್ ಲೀಗ್‌ನ ಪ್ರಮುಖ ಪಂದ್ಯದಲ್ಲಿ  ಜೆಮ್ಷೆಡ್ಪುರ ಎಫ್ಸಿ ವಿರುದ್ಧ ಸೆಣಸಲಿದೆ. ಕೊರೊ ಗೈರು ಟಾಟಾ ಪಡೆಯ ಮನೋಬಲವನ್ನು ಹೆಚ್ಚಿಸಿರುವುದು ಸ್ಪಷ್ಟ.

ಕಳೆದ ಋತುವಿನಲ್ಲಿ ಗೋಲ್ಡನ್ ಬೂಟ್ ಗೌರವ ಪಡೆದಿರುವ ಕೊರೊಮಿನಾಸ್, ಈಗಾಗಲೇ ಆರು ಗೋಲುಗಳನ್ನು ಗಳಿಸಿದ್ದು, ನಾಲ್ಕು ಗೋಲುಗಳನ್ನು ಗಳಿಸುವಲ್ಲಿ ನೆರವಾಗಿದ್ದಾರೆ. ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲಿ ಗೋವಾ ತಂಡ 4-2 ಅಂತರದಲ್ಲಿ ಗೆದ್ದಿತ್ತು, ಆದರೆ ಕೊರೊಮಿನಾಸ್ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.ಕಳೆದ ಋತುವಿನಲ್ಲಿ ಚೆನ್ನೈಯಿನ್ ತಂಡದ ವಿರುದ್ಧ ಮೊದಲ ಪಂದ್ಯವನ್ನಾಡಿ ಐಎಸ್‌ಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಮೊದಲ ಬಾರಿಗೆ ತಂಡದಿಂದ ಹೊರಗುಳಿದಿದ್ದಾರೆ.
‘ಇದೊಂದು ಸಂಘಟಿತ ಹೋರಾಟ. ಅಂಗಣದಲ್ಲಿ ಸಂಘಟಿತ ಹೋರಾಟ ನೀಡಿ, ಉತ್ತಮ ಲಿತಾಂಶವನ್ನು ಪಡೆಯುವುದು ನಮ್ಮ ಗುರಿ,‘ ಎಂದು ಲೊಬೆರಾ ಹೇಳಿದ್ದಾರೆ.
ಕೊರೊ ಅವರಿಗಿಂತ ಗೋವಾ ಒಂದು ಪರಿಗಣಿಸುತ್ತೇವೆ ಎಂದು ಜೆಮ್ಷೆಡ್ಪುರ ತಂಡದ ಕೋಚ್ ಸೆಸರ್ ಫೆರಾಂಡೊ ಹೇಳಿದ್ದಾರೆ. ‘ಅವರೊಬ್ಬ ಉತ್ತಮ ಆಟಗಾರ, ಗೋವಾ ಕೂಡ ಒಂದು ಉತ್ತಮ ತಂಡ. ಕೊರೊ ಅವರಿಗಾಗಿ ನಾವು ಯಾವುದೇ ಹೊಸ ಯೋಜನೆಯನ್ನು ಹಾಕಿಕೊಂಡಿಲ್ಲ. ನಾವು ಗೋವಾ ಒಂದು ತಂಡವೆಂದು ಪರಿಗಣಿಸಿ ಅದಕ್ಕೆ ಬೇಕಾಗುವ ರಣತಂತ್ರ ರೂಪಿಸಿದ್ದೇವೆ, ನಾವು ತಂಡವಾಗಿ ಆಡಿದರೆ ಗೆಲ್ಲುತ್ತೇವೆ. ನಾನು ಈಗ ನಮ್ಮ ತಂಡದ ಬಗ್ಗೆ ಯೋಚನೆ ಮಾಡುತ್ತಿದ್ದೇನೆ,‘ ಎಂದು ಫೆರಾಂಡೊ ಹೇಳಿದ್ದಾರೆ.
ಮುಂಬೈ ಸಿಟಿ ವಿರುದ್ಧ ಜಯ ಗಳಿಸಿದ ಫೆರಾಂಡೊ ಪಡೆ ನಂತರ ನಿರಂತರ ಡ್ರಾದಲ್ಲಿ ತೃಪ್ತಿ ಕಂಡಿತ್ತು. ಬೆಂಗಳೂರು ಎಫ್ಸಿ, ಎಟಿಕೆ, ನಾರ್ತ್ ಈಸ್ಟ್ ಯುನೈಟೆಡ್ ಮತ್ತು ಕೇರಳ ಬ್ಲಾಸ್ಟರ್ಸ್ ವಿರುದ್ಧ ಡ್ರಾ ಕಂಡಿತ್ತು.
ಜೆಮ್ಷೆಡ್ಪುರ ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆದ್ದೇ ಗೆಲ್ಲುತ್ತೇವೆಂಬ ರೀತಿಯಲ್ಲಿ ಆಡಿತ್ತು, ಆದರೆ ಡೇವಿಡ್ ಜೇಮ್ಸ್ ಪಡೆ ದ್ವಿತಿಯಾ‘ರ್ದಲ್ಲಿ ಗಳಿಸಿದ ಎರಡು ಗೋಲು ತಂಡದ ಜಯವನ್ನು ಕಸಿದುಕೊಂಡಿತ್ತು.
‘ತಂಡದ ಬಗ್ಗೆ ನನಗೆ ಸಾಕಷ್ಟು ಖುಷಿ ಇದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ನನಗೆ ಸಾಕಷ್ಟು ಸಿಟ್ಟು ಬಂದಿತ್ತು, ಏಕೆಂದರೆ ನಾವು ಕೆಲವು ಸಣ್ಣ ಪುಟ್ಟ ತಪ್ಪುಮಾಡಿ ಬೆಲೆ ತೆತ್ತೆವು. ಎಟಿಕೆ ವಿರುದ್ಧ ನಾವು ಮೂರು ಪ್ರಮಾದಗಳನ್ನು ಎಸಗಿದೆವು. ನಾರ್ತ್ ಈಸ್ಟ್ ವಿರುದ್ಧವೂ ಒಂದು ತಪ್ಪು ಮಾಡಿದೆವು. ಹಿಂದಿನ ಪಂದ್ಯದಲ್ಲಿ ಬ್ಲಾಸ್ಟರ್ಸ್ ತಂಡ ಒಂದು ಪೆನಾಲ್ಟಿ ಅವಕಾಶವನ್ನು ಕೈ ಚೆಲ್ಲಿತು. ನಂತರ  ಅವರು ಮೊದಲ ಗೋಲು ಗಳಿಸಿದಾಗ ನಮ್ಮ ಆರು ಮಂದಿ ಆಟಗಾರರು ಪೆನಾಲ್ಟಿ ಬಾಕ್ಸ್‌ನ ಒಳಗಿದ್ದರು, ಆದರೂ ತಡೆಯಲು ಸಾ‘್ಯವಾಗಲಿಲ್ಲ,‘ ಎಂದು ಫೆರಾಂಡೊ ವಿವರಿಸಿದರು.
ಆ ಸೋಲಿನ ನಡುವೆಯೂ ಸ್ಟಾರ್ ಸ್ಟ್ರೆ‘ಕರ್ ಟಿಮ್ ಕೆಹಿಲ್ ಗೋಲು ದಾಖಲಿಸಿರುವ ಬಗ್ಗೆ ಫೆರಾಂಡೋ ಖುಷಿ ಪಟ್ಟಿದ್ದಾರೆ. ಇದುವರೆಗೂ ಸೋಲಿನ ಕಹಿ ಕಾಣದ ಟಾಟಾ ಪಡೆ ಗೋಲಿನ ಮಳೆಯನ್ನೇ ಗರೆಯಬಲ್ಲ ಗೋವಾದ ವಿರುದ್ಧ ಉತ್ತಮ ಪ್ರದರ್ಶನ ತೋರುವ ಆತ್ಮವಿಶ್ವಾಸ ಹೊಂದಿದೆ.
ಗೋವಾ ತಂಡ ನಾರ್ತ ಈಸ್ಟ್ ಯುನೈಟೆಡ್ ಪರ ಡ್ರಾ ಗಳಿಸುವ ಮೂಲಕ ಅಭಿಯಾನ ಆರಂಭಿಸಿತ್ತು. ನಂತರ ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿ ಪ್ರಭುತ್ವ ಸಾಧಿಸಿದೆ. ಗೋಲು ಗಳಿಸುವುದನ್ನೇ ಗುರಿಯಾಗಿಸಿಕೊಂಡಿರುವ ಲೊಬೆರಾ ಪಡೆ ಈಗಾಗಲೇ ನಾಲ್ಕು ಪಂದ್ಯಗಳಲ್ಲಿ 14 ಗೋಲುಗಳನ್ನು ಗಳಿಸಿದೆ.
‘ಜೆಮ್ಷೆಡ್ಪುರ ವಿರುದ್ಧದ ಪಂದ್ಯ ನಮ್ಮ ಪಾಲಿಗೆ ಕಠಿಣವೆನಿಸಲಿದೆ. ಅವರದ್ದು ಒಂದು ಉತ್ತಮ ಸ್ಪರ್ಧಾತ್ಮಕ ತಂಡ. ಸ್ಪೇನ್‌ನ ಕೋಚ್ ಬಗ್ಗೆ ಗೊತ್ತಿದೆ. ಅವರ ಕೋಚಿಂಗ್ ಶೈಲಿಯ ಬಗ್ಗೆಯೂ ತಿಳಿದಿರುವೆ. ಆದ್ದರಿಂದ ಒಂದು ಉತ್ತಮ ಸ್ಪರ್ಧಾತ್ಮಕ ಹಾಗೂ ಕಠಿಣ ಪಂದ್ಯವನ್ನು ನಿರೀಕ್ಷಿಸುತ್ತಿದ್ದೇವೆ,‘ ಎಂದು ಲೊಬೆರಾ ಹೇಳಿದ್ದಾರೆ.
ಕಳೆದ ಐಎಸ್‌ಎಲ್ ಋತುವಿನಲ್ಲಿ ಗೋವಾ ಪಡೆ ಟಾಟಾ ಪಡೆಯನ್ನು ಎರಡು ಬಾರಿ ಸೋಲಿಸಿತ್ತು. ಸ್ಟಾರ್ ಫಾರ್ವರ್ಡ್ ಆಟಗಾರ ಇಲ್ಲದೆ ಮತ್ತೊಂದು ಜಯವನ್ನು ಗೋವಾ ತಂಡ ಗಳಿಸಬಹುದೇ ಎಂಬುದು ಕುತೂಹಲದ ಸಂಗತಿ.

Related Articles