ದೆಹಲಿ:
ಜಾಗತಿಕ ಪ್ರಮುಖ ಬಿಯರ್ ಬ್ರಾಂಡ್ ಗಳಲ್ಲಿ ಒಂದಾದ ಬಿರಾ 91 ನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐದು ವರ್ಷ ಒಪ್ಪಂಧ ಮಾಡಿಕೊಂಡಿದೆ. ಈ ಕುರಿತು ಐಸಿಸಿಯು ಬುಧವಾರ ಘೋಷಿಸಿದೆ.
ಐಸಿಸಿ ಹೇಳಿಕೆಯಂತೆ ವಿಶ್ವಕಪ್, ಟಿ-20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, 19 ವಯೋಮಿತಿ ವಿಶ್ವಕಪ್ ಸೇರಿದಂತೆ ಐಸಿಸಿ ಜಾಗತಿಕ ಎಲ್ಲ ಟೂರ್ನಿಗಳಲ್ಲಿ ಅಧಿಕೃತವಾಗಿ ಬಿರಾ 91 ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ. ಜತೆಗೆ, ಪ್ರಸಾರ, ಡಿಜಿಟಲ್ ವೇದಿಕೆಗಳಲ್ಲಿ ಹಾಗೂ ಐಸಿಸಿ ಕಾರ್ಯಕ್ರಮಗಳಲ್ಲಿ ಪಾಲುದಾರಿಕೆಯನ್ನು ಹೊಂದಿದೆ.
ಬಿರಾ 91ನೊಂದಿಗೆ ಐದು ವರ್ಷದ ಒಪ್ಪಂದ ಕುರಿತಂತೆ ಚರ್ಚೆ ಮಾಡಲಾಗಿದೆ. ಕ್ರಿಕೆಟ್ ಒಂದು ಬಿಲಿಯನ್‌ಗೂ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ನೈಸರ್ಗಿಕ ಬ್ರಾಂಡ್ ಬಿರಾ 91 ಪಾಲುದಾರಿಕೆಯಿಂದ ಕ್ರಿಕೆಟ್ ಅಭಿಮಾನಿಗಳಿಗೆ ಪಂದ್ಯವಾಳಿಗಳ ಸಮಯದಲ್ಲಿ ಬಿಯರ್ ದೊರೆಯಲಿದೆ ಎಂದು ಐಸಿಸಿ ವಾಣಿಜ್ಯ ಪ್ರಧಾನ ವ್ಯವಸ್ಥಾಪಕ ಕ್ಯಾಂಪೆಲ್ ಜೆಮಿಸನ್ ತಿಳಿಸಿದರು.