Saturday, July 20, 2024

ಹಾಂಕಾಂಗ್ ಓಪನ್ ಮೇಲೆ ಸಿಂಧು ಕಣ್ಣು

ಕೌಲೂನ್(ಹಾಂಕಾಂಗ್):

ಕಳೆದ ಟೂರ್ನಿಗಳಲ್ಲಿ  ಸತತ ವೈಫಲ್ಯದಿಂದ ಕಂಗೆಟ್ಟಿರುವ ಭಾರತದ ಪಿ.ವಿ.ಸಿಂಧು ಇಂದಿನಿಂದ(ಮಂಗಳವಾರ) ಆರಂಭವಾಗುವ ಹಾಂಕಾಂಗ್ ವಿಶ್ವ ಟೂರ್ ಸೂಪರ್ 500 ಟೂರ್ನಿ ಮೇಲೆ ಕಣ್ಣಿಟ್ಟಿದ್ದಾರೆ.

ಅದಕ್ಕಾಗಿ ಕಳೆದ ಟೂರ್ನಿಗಳಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡು ಇಂದು ಕಣಕ್ಕೆ ಇಳಿಯಲಿದ್ದಾರೆ.
ಕಳೆದ ಆವೃತ್ತಿಯಲ್ಲಿ ವಿಶ್ವ ನಂ.1 ಥಾಯ್ ಟಿಜು ಯಿಂಗ್ ವಿರುದ್ಧ ಫೈನಲ್ ನಲ್ಲಿ ಸೋಲುವ ಮೂಲಕ ರನ್ನರ್ ಅಪ್ ಆಗಿದ್ದರು. ಆದ್ದರಿಂದ ಅದೇ ಮಾನದಂಡದೊಂದಿಗೆ ಇಂದು ಅಭಿಯಾನ ಮುಂದುವರಿಸಲಿದ್ದಾರೆ. ಟೂರ್ನಿಯ ಮೊದಲ ಕಾದಾಟ ಥಾಯ್ ಲೆಂಡ್ ನ ನಿಟ್ಚೋನ್ ಜಿಂದಾಲ್ ಅವರ ವಿರುದ್ಧ ನಡೆಸಲಿದ್ದಾರೆ.

Related Articles