Friday, December 13, 2024

ಯುವ ಆಟಗಾರರಿಗೆ ದ್ರಾವಿಡ್ ಸಲಹೆ ನೀಡಿದ್ದೇನು?

ದೆಹಲಿ:

ನ್ಯೂಜಿಲೆಂಡ್ ವಾತಾವರಣ ಆಸ್ಟ್ರೇಲಿಯಾ ರೀತಿ ಹೊಂದಾಣಿಕೆ ಇರುವುದಿಲ್ಲ. ಹಾಗಾಗಿ, ಭಾರತ(ಎ) ತಂಡದಲ್ಲಿರುವ ಟೀಂ ಇಂಡಿಯಾ ಹಿರಿಯ ಆಟಗಾರರಿಗೆ ಮೊದಲ ಅನಧೀಕೃತ ಪಂದ್ಯದ ಅಭ್ಯಾಸ ಅತ್ಯಂತ ಮೌಲ್ಯಯುತವಾದದು ಎಂದು ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಆಟಗಾರರಿಗೆ ಸಲಹೆ ನೀಡಿದರು.

ಭಾರತ ಟೆಸ್ಟ್ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ, ಮುರಳಿ ವಿಜಯ್, ಪೃಥ್ವಿ ಶಾ ಹಾಗೂ ಹನುಮ ವಿಹಾರಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ. ಹಾಗಾಗಿ ಅವರಿಗೆ ನ್ಯೂಜಿಲೆಂಡ್(ಎ) ವಿರುದ್ಧ ಮೊದಲ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇದನ್ನು ಆಟಗಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಲ್ಲದೇ, ಭಾರತ(ಎ) ತಂಡದಲ್ಲಿರುವ ಯುವ ಆಟಗಾರರಿಗೆ ಭಾರತ ತಂಡದ ಆಟಗಾರರಿಂದ ಆಟದ ಬಗ್ಗೆ ಇನ್ನಷ್ಟು ಪ್ರಾವಿಣ್ಯತೆ ಸಾಧಿಸಲು ಇದೊಂದು ಉತ್ತಮ ಅವಕಾಶ. ಹಾಗಾಗಿ ಇದನ್ನು ಯುವ ಆಟಗಾರು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

Related Articles