Friday, June 14, 2024

ಅಹಮದಾಬಾದ್‌ನಲ್ಲಿ ಭಾನುವಾರ ಬರೇ ಕ್ರಿಕೆಟ್‌ ಫೈನಲ್‌ ಅಲ್ಲ!

ಅಹಮದಾಬಾದ್‌: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಬಾರಿಯ ವಿಶ್ವಕಪ್‌ನ ಉದ್ಘಾಟನಾ ಸಮಾರಂಭವನ್ನು ಕಂಡಾಗ ಸಾಕಷ್ಟು ನಿರಾಸೆಯಾಗಿತ್ತು. ಆದರೆ ಆ ಎಲ್ಲ ನಿರಾಸೆಗಳಿಗೆ ಸಂಭ್ರಮದ ಸ್ಪರ್ಷ ಭಾನುವಾರದ ಫೈನಲ್‌ ಪಂದ್ಯದಲ್ಲಿ ಸಿಗಲಿದೆ. Not like inauguration ICC world cup closing ceremony will be special events.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಫೈನಲ್‌ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಮಾಪನಾ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮಗಳು ನಾಲ್ಕು ಹಂತಗಳಲ್ಲಿ ನಡೆಯಲಿವೆ.

ನೆರೆದ ಕ್ರಿಕೆಟ್‌ ಅಭಿಮಾನಿಗಳಿಗೆ ಹಾಗೂ ಜಗತ್ತಿನಾದ್ಯಂತ ವೀಕ್ಷಿಸುತ್ತಿರುವ ಕ್ರಿಕೆಟ್‌ ಪ್ರೇಮಿಗಳಲ್ಲಿ ಸಂಭ್ರಮವನ್ನುಂಟು ಮಾಡುವ ಸಲುವಾಗಿ ಐಸಿಸಿ ಹಾಗೂ ಬಿಸಿಸಿಐ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಬಣ್ಣದ ಬೆಳಕಿನ ನಕ್ಷತ್ರ ಲೋಕ, ಸಂಗೀತದ ಮೂಲಕ ಮನರಂಜನೆ, ಹಿಂದೆಂದೂ ಕಾಣದ ಸುಡುಮದ್ದುಗಳ ಚಿತ್ತಾರ ಮೋದಿ ಅಂಗಣದಲ್ಲಿ ಸೇರುವ ಲಕ್ಷಾಂತರ ಜನರಿಗೆ ಹಾಗೂ ಟಿವಿ ಪರದೆಯ ಮೇಲೆ ಪಂದ್ಯ ವೀಕ್ಷಿಸುವ ಕ್ರಿಕೆಟ್‌ ಅಭಿಮಾನಿಗಳ ಮನಸೂರೆಗೊಳ್ಳಲಿದೆ.

ಭಾರತೀಯ ವಾಯು ಪಡೆಯ ಹತ್ತು ವಿಮಾನಗಳು ಹತ್ತು ನಿಮಿಷಗಳ ಕಾಲ ಏರ್‌ ಶೋ ಕಾರ್ಯಕ್ರಮವನ್ನು ನಡೆಸಿಕೊಡಲಿವೆ. ಸೂರ್ಯಕಿರಣ್‌ ಏಕ್ರೊಬ್ಯಾಟಿಕ್‌ ತಂಡವನ್ನು ವಿಂಗ್‌ ಕಮಾಂಡರ್‌ ಸಿದ್ಧೇಶ್‌ ಕಾರ್ತಿಕ್‌ ಮುನ್ನಡೆಸಲಿದ್ದಾರೆ. ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಆಗಮಿಸುವ ವಿಮಾನಗಳು ಕ್ರೀಡಾಂಗಣದ ಮೇಲ್ಭಾಗದಲ್ಲಿ ಏರ್‌ ಶೋ ನಡೆಸಿಕೊಡಲಿವೆ.

ಇದೇ ಮೊದಲ ಬಾರಿಗೆ ಐಸಿಸಿ ಈ ಹಿಂದೆ ವಿಶ್ವಕಪ್‌ ಗೆದ್ದ ತಂಡದ ನಾಯಕರನ್ನು ಆಹ್ವಾನಿಸಿದೆ. 1975ರಲ್ಲಿ ಚಾಂಪಿಯನ್‌ ಪಟ್ಟ ಗೆದ್ದ ವಿಂಡೀಸ್‌ನ ನಾಯಕ ಕ್ಲೈವ್‌ ಲಾಯ್ಡ್‌ ಅವರಿಂದ ಹಿಡಿದು ಇತ್ತೀಚೆಗೆ ಪ್ರಶಸ್ತಿ ಗೆದ್ದಿರುವ ಇಂಗ್ಲೆಂಡ್‌ ತಂಡದ ನಾಯಕ ಇಯಾನ್‌ ಮಾರ್ಗನ್‌ ಹಾಜರಿರುತ್ತಾರೆ. ಕಪಿಲ್‌ ದೇವ್‌, ಎಂಎಸ್‌ ಧೋನಿ ಸೇರಿದಂತೆ ಎಲ್ಲ ನಾಯಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು. ಎಲ್ಲ ಮಾಜಿ ನಾಯಕರಿಗೂ ವಿಶೇಷ ಬ್ಲೇಸರ್‌ ನೀಡಿ ಸನ್ಮಾನಿಸಲಾಗುವು.

ಭಾರತದ ಶ್ರೇಷ್ಠ ನೃತ್ಯ ನಿರ್ದೇಶಕರಾದ ಪ್ರೀತಮ್‌ ಅವರು 500ಕ್ಕೂ ಹೆಚ್ಚು ನೃತ್ಯಗಾರರನ್ನೊಳಗೊಂಡು ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ. 1200 ಡ್ರೋನ್‌ಗಳನ್ನು ಬಳಸಿ ವಿಜೇತ ತಂಡದ ಹೆಸರನ್ನು ಬೆಳಕಿನ ಮೂಲಕ ಪ್ರಸ್ತುತಪಡಿಸಲಿವೆ. ಬಳಿಕ ಸುಡುಮದ್ದುಗಳ ಚಿತ್ತಾರ ನರೇಂದ್ರ ಮೋದಿ ಅಂಗಣಕ್ಕೆ ರಂಗು ತರಲಿದೆ.

Related Articles