Friday, December 13, 2024

Bengaluru FC ಬೆಂಗಳೂರು ಎಫ್‌ಸಿ ಸೂಪರ್‌ ಡಿವಿಜನ್‌ ಚಾಂಪಿಯನ್‌

ಬೆಂಗಳೂರು: ರೆಬೆಲ್‌ ಎಫ್‌ಸಿ ವಿರುದ್ಧ 11-0 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್‌ಸಿ ತಂಡ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಲೀಗ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Bengaluru FC were crowned BDFA Super Division League Champions.

ಬೆಂಗಳೂರು ಎಫ್‌ಸಿ ತಂಡ ಟೂರ್ನಿಯುದ್ದಕ್ಕೂ ಒಂದೂ ಪಂದ್ಯದಲ್ಲಿ ಸೋಲನುಭವಿಸದೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ಆಡಿರುವ 17 ಪಂದ್ಯಗಳಲ್ಲಿ ಬೆಂಗಳೂರು ಎಫ್‌ಸಿ 16 ಪಂದ್ಯಗಳಲ್ಲಿ ಜಯ ಗಳಿಸಿರುವುದು ವಿಶೇಷ.

ಶುಕ್ರವಾರ ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ 11-0 ಅಂತದಲ್ಲಿ ಜಯ ಗಳಿಸಿತು. ಅಂಕಿತ್‌ ಪಿ. ಅವರ ಹ್ಯಾಟ್ರಿಕ್‌ ಸಾಧನೆ ಬೃಹತ್‌ ಅಂತರದ ಜಯಕ್ಕೆ ಮೂಲ ಕಾರಣವಾಯಿತು. ಅಂಕಿತ್‌ 17, 39 ಮತ್ತು 59 ನಿಮಿಷಗಳಲ್ಲಿ ಗೋಲು ಗಳಿಸಿದರು. ಕ್ಲಾರೆನ್ಸ್‌ ಸಾವಿಯೋ ಫೆರ್ನಾಂಡೀಸ್‌ 26ನೇ ನಿಮಿಷ, ಅಮಯ್‌ ಮರೋಜ್ಕರ್‌ 34 ಮತ್ತು 69ನೇ ನಿಮಿಷ, ತೊಖೋಂ ಮಲೆಮ್ನಗಬಾ 44ನೇ ನಿಮಿಷ, ಲಾಲ್‌ಪೆಕ್ಲುವಾ 76 ಮತ್ತು 80ನೇ ನಿಮಿಷ, ಒಯ್ನಮ್‌ ರೊನೆಕ್ಸ್‌ ಮೇಟಿ 79ನೇ ನಿಮಿಷ, ಶಶಾವತ್‌ ಪನ್ವಾರ್‌ 86ನೇ ನಿಮಿಷಗಳಲ್ಲಿ ಗೋಲು ಗಳಿಸಿ ತಂಡದ ಜಯದ ರೂವಾರಿ ಎನಿಸಿದರು.

Related Articles