Friday, February 23, 2024

ಮೂರು ದಿನಗಳ ಕ್ರಿಕೆಟ್‌ ಹಬ್ಬಕ್ಕೆ ನಿಟ್ಟೆ ಸಜ್ಜು

 

ಸ್ಪೋರ್ಟ್ಸ್‌ ಮೇಲ್‌ ವರದಿ

ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ (ಬಿಎಸಿಎ) ಮತ್ತು ಕಟಪಾಡಿ ರಮಾನಂದ ಶಾಂತಿ ಕ್ರಿಕೆಟ್‌ ಅಕಾಡೆಮಿ (ಕೆಆರ್‌ಎಸ್)‌ ಆಯೋಜನೆ ಮತ್ತು ನಿಟ್ಟೆ ವಿದ್ಯಾ ಸಂಸ್ಥೆಗಳ ಆಶ್ರದಲ್ಲಿ ಮೂರು ದಿನಗಳ ಕಾಲ ಹಿರಿಯರ ಕ್ರಿಕೆಟ್‌ ಟೂರ್ನಿ ನಿಟ್ಟೆಯ ಬಿ.ಸಿ. ಆಳ್ವಾ ಕ್ರಿಕೆಟ್‌ ಅಂಗಣದಲ್ಲಿ ನಡೆಯಲಿದೆ.

 

ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ನಾಯಕ ವಿಜಯ್‌ ಆಳ್ವಾ ಮತ್ತು ಉದಯ ಕಟಪಾಡಿ ಅವರ ಮುಂದಾಳತ್ವದಲ್ಲಿ ಈ ಟೂರ್ನಿ ನವೆಂಬರ್‌ 19 ಮತ್ತು  20ರಂದು ನಡೆಯಲಿದ್ದು, ಈಗಾಗಲೇ 50+ ವಯಸ್ಸಿನ ಆಟಗಾರರು ನಿಟ್ಟೆಯನ್ನು ತಲುಪಿದ್ದಾರೆ.

90ರ ದಶಕದಲ್ಲಿ ಮಿಂಚಿದ್ದ ಆಟಗಾರರಿಂದ ಕೂಡಿರುವ ಬಿಎಸಿಎ-ಕೆಆರ್‌ಎಸ್‌ ಇಲೆವೆನ್‌ ಹಾಗೂ ಮುಂಬೈನ ಹಿರಿಯ ಆಟಗಾರ ಪ್ರದೀಪ್‌ ಗೋಡ್ಬೊಲೆ ಅವರ ನಾಯಕತ್ವದ ರಾಯಲ್‌ ಇಂಡಿಯನ್ಸ್‌ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಕೋಲ್ಕೊತಾ, ಚೆನ್ನೈ ಮತ್ತು ಮುಂಬೈಯ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

 

ಉದ್ಘಾಟನೆ:

ಬೆಳಿಗ್ಗೆ 10:30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಚಾನ್ಸೆಲರ್‌ ಎನ್.‌ ವಿನಯ್‌ ಹೆಗ್ಡೆ ಅವರು ಉದ್ಘಾಟಕರಾಗಿ ಪಾಲ್ಗೊಳ್ಳುವರು. ಮುಖ್ಯ ಅತಿಥಿಗಳಾಗಿ ನಿಟ್ಟೆ ಎಜ್ಯುಕೇಶನ್‌ ಟ್ರಸ್ಟ್‌ನ ರಿಜಿಸ್ಟ್ರಾರ್‌ ಯೋಗೇಶ್‌ ಹೆಗ್ಡೆ, ಎನ್‌ಎಂಎಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಿರಂಜನ್‌ ಎನ್.‌ ಚಿಪ್ಳೂಣ್ಕರ್‌, ಉಡುಪಿ ಜಿಲ್ಲಾ ಅಮೆಚೂರ್‌ ಅಥ್ಲೆಟಿಕ್ಸ್‌ ಸಂಸ್ಥೆಯ ಅಧ್ಯಕ್ಷ ಅಶೋಕ್‌ ಅಡ್ಯಂತಾಯ, ಉಡುಪಿ ಜಿಲ್ಲಾ ಕ್ರಿಕೆಟ್‌ ಅಸೋಸಿಯೇಷನ್‌ನ  ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್‌ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮಾಜಿ ಸಮನ್ವಯಕಾರ ಮನೋಹರ್‌ ಅಮೀನ್‌ ಪಾಲ್ಗೊಳ್ಳುವರು.

ಸನ್ಮಾನ:

ಸಾಧನೆಯ ಹಾದಿಯಲ್ಲಿ ಹಿರಿಯರನ್ನು ಗುರುತಿಸುವ ಕಾರ್ಯವನ್ನು ಮಾಡುತ್ತಿರುವ ಬಿಎಸಿಎ ಮತ್ತು ಕೆಆರ್‌ಎಸ್‌ ಇದೇ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಕೆಎಸ್‌ಸಿಎ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದ ವೈ.ಎಸ್‌. ರಾವ್‌ ಅವರನ್ನು ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಬಹುಮಾನ ವಿತರಣೆ

19 ರ ಸಂಜೆ 4:30ಕ್ಕೆ ನಡೆಯುವ ಮೊದಲ ದಿನದ ಬಹುಮಾನ ವಿತರಣಾ ಸಮಾರಂಭದಲ್ಲಿ ಬ್ರಹ್ಮಾವರ ಸ್ಪೋರ್ಟ್ಸ್‌ ಕ್ಲಬ್‌ನ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಚೇತನ ಹೈಸ್ಕೂಲ್‌ ಮಾಬುಕಳ ಇದರ ಮುಖ್ಯೋಪಾಧ್ಯಾಯರಾದ ಗಣೇಶ್‌ ಜಿ., ಕೆಎಂಸಿ ಮಣಿಪಾಲ ಇದರ ದೈಹಿಕ ಶಿಕ್ಷಣ ನಿರ್ದೇಶಕ ದೀಪಕ್‌ ಬೈರಿ, ಸಂತೆಕಟ್ಟೆಯ ಬೈಕ್‌ ಫಾರ್ಮ್‌ನ ಮಾಲೀಕರಾದ ಅಲೆನ್‌ ಲೆವಿಸ್‌, ನಿಟ್ಟೆಯ ಎನ್‌ಎಂಎಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೃಷ್ಣರಾಜ್‌ ಜೊಯ್ಸಾ, ಎನ್‌ಇಟಿ ಕ್ಯಾಂಪಸ್‌ನ ಕ್ರೀಡಾ ಆಡಳಿತಾಧಿಕಾರಿ ಶ್ಯಾಮ್‌ ಸುಂದರ್‌  ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

20ರ ಸಂಜೆ 4:30ಕ್ಕೆ ನಡೆಯುವ ಎರಡನೇ ದಿನದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಡುಬಿದ್ರಿ ಸಿ.ಎ. ಬ್ಯಾಂಕ್‌ನ ಅಧ್ಯಕ್ಷ ವೈ. ಸುಧೀರ್‌ ಕುಮಾರ್‌, ಉಡುಪಿ ಜಿಲ್ಲಾ ಟೆನಿಸ್‌ ಬಾಲ್‌ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಗೌತಮ್‌ ಶೆಟ್ಟಿ, ನಿಟ್ಟೆ ಎನ್‌ಎಸ್‌ಎಎಂ ತಾಂತ್ರಿಕ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಪಾಲ್ಗೊಳ್ಳುವರು.

ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಕ್ರಿಕೆಟ್‌ ಅಸೋಸಿಯೇಷನ್‌ ಮಂಗಳೂರು ಇದರ ಮಾಜಿ ಮ್ಯಾನೇಜರ್‌ ಕೆ. ಬಾಲಕೃಷ್ಣ ಪೈ. ಅವರನ್ನು ಸನ್ಮಾನಿಸಲಾಗುವುದು.

ಸಮಾರೋಪ ಸಮಾರಂಭ:

21ರ ಅಪರಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಕೃಷ್ಣಪ್ರಸಾದ್‌, ಎನ್‌ಇಟಿ ಕ್ಯಾಂಪಸ್‌ ನಿಟ್ಟೆ ಇದರ ರಿಜಿಸ್ಟ್ರಾರ್‌ ಯೋಗೇಶ್‌ ಹೆಗ್ಡೆ, ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ ಇದರ ಪ್ರಾಂಶುಪಾಲ ಪ್ರೊ. ಗುರುಪ್ರಸಾದ್‌ ರಾವ್‌, ಉಡುಪಿಯ ನೋಟರಿ ಗಣೇಶ್‌ ಮಟ್ಟು, ಹಾಗೂ ಕಟಪಾಡಿಯ ನವ್ಯಾ ಸಾಫ್ಟ್‌ ಡ್ರಿಂಕ್ಸ್‌ ಇದರ ಮಾಲೀಕ ಸುಶೀಲ್‌ ಬಿ ಬೋಳಾರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ರಾಯಲ್‌ ಇಂಡಿಯನ್ಸ್‌ ತಂಡದ ನಾಯಕ, ಹಿರಿಯ ಕ್ರಿಕೆಟಿಗ ಪ್ರದೀಪ್‌ ಗೋಡ್ಬೊಲೆ ಅವರನ್ನು ಸನ್ಮಾನಿಸಲಾಗುವುದು.

 

ತಂಡಗಳ ವಿವರ:

ಬಿಎಸಿಎ ಮತ್ತು ಕೆಆರ್‌ಎಸ್‌ ಇಲೆವೆನ್:‌

ವಿಜಯ್‌ ಆಳ್ವಾ, ಜೀವನ್‌ ರೈ, ಪ್ರವೀಣ್‌ ಚಂದ್ರ, ವಿವೇಕಾನಂದ ಕಿಣಿ, ಲೂಯಿಸ್‌ ರೊಸಾರಿಯೋ, ಸಫ್ದಾರ್‌ ಅಲಿ, ವಿನ್ಸೆಂಟ್‌, ಶ್ರೀನಿವಾಸ್‌, ಗಣೇಶ್‌ ರೈ, ಉದಯ್, ಸದಾನಂದ, ರಾಜೇಶ್ವರ್‌, ರಾಜು ಶೆಟ್ಟಿ, ಪ್ರಮೋದ್‌ ಶೆಟ್ಟಿ, ಶ್ರೀಧರ್‌ ಉಳ್ಳಾಲ್‌, ಸುಕುಮಾರ್‌, ಕಿಶೋರ್‌ ಸಿ.ಕೆ., ಆದಿಲ್‌ ಚಾಗ್ಲಾ, ಜೆ.ಕೆ, ಮಹೇಂದ್ರ, ಬ್ರಿಯಾನ್‌ ಪಾಯಸ್‌, ಮನೋಜ್‌ ನಾಯರ್.‌

ರಾಯಲ್‌ ಇಂಡಿಯನ್ಸ್‌:

ಪ್ರದೀಪ್‌ ಗೋಡ್ಬೊಲೆ (ನಾಯಕ), ಶಿವಕುಮಾರ್‌ ಬಿ, ಡಾ, ಅರುಣ್‌ ಕುಮಾರ್‌ ಜನಾರ್ಧನ್‌, ಅರುಣ್‌ ರಾಜುವೆಲ್‌ ಆರ್‌,ವಿ,, ಅಲ್ವಿನ್‌ ಫೆರ್ನಾಂಡೀಸ್‌, ಮನ್‌ದೀಪ್‌ ಸಿಂಗ್‌ ಬಿಂದ್ರಾ, ಸಂದೀಪ್‌ ಆಗರ್ವಾಲ್‌ (ವಿಕೆಟ್‌ ಕೀಪರ್)‌, ಸತ್ಯಮೂರ್ತಿ, ಭರಣೀಧರನ್‌ ಎಸ್‌, ಸೆಂಥಿಲ್‌ ಕುಮಾರ್‌, ಗೋಪಾಲ್‌ ದುದಾನಿ, ಮನೀಶ್‌ ಪಾಚೀಸಿಯಾ.

Related Articles