Thursday, December 12, 2024

ನೆಟ್‌ಬಾಲ್ ಚಾಂಪಿಯನ್‌ಷಿಪ್: ಹಾಸನ ತಂಡಗಳಿಗೆ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ

ಎಸ್‌ಜೆಎಂ ವಸತಿ ಶಾಲೆ ಚಿತ್ರದುರ್ಗ ಹಾಗೂ ಕರ್ನಾಟಕ ಅಮೆಚೂರ್ ನೆಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಜೂನಿಯರ್ ನೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಹಾಸನ ಜಿಲ್ಲಾ ಬಾಲಕರು ಹಾಗೂ ಬಾಲಕಿಯರ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ಚಿತ್ರದುರ್ಗದಲ್ಲಿ ನಡೆದ ಚಾಂಪಿಯನ್‌ಷಿಪ್‌ನಿಂದ ರಾಷ್ಟ್ರೀಯ ಸಬ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ೨೫ ಬಾಲಕರು ಹಾಗೂ ೨೫ ಬಾಲಕಿಯರನ್ನು ಆಯ್ಕೆ ಮಾಡಲಾಯಿತು. ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಸಬ್ ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ
.
ಚಿತ್ರದುರ್ಗದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ೧೪ ಬಾಲಕರು ಹಾಗೂ ೧೪ ಬಾಲಕಿಯರ ತಂಡಗಳು ಪಾಲ್ಗೊಂಡಿದ್ದವು. ಟೂರ್ನಿ ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯಿತು.
ಬಾಲಕರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ  ಹಾಸನ ಜಿಲ್ಲಾ ತಂಡ ಟಿ. ನರಸಿಪುರದ ಸರಕಾರಿ ಪ್ರೌಢ ಶಾಲಾ ತಂಡವನ್ನು ೧೬-೧೨ ಅಂಕಗಳಿಂದ ಮಣಿಸಿ ಸೂಪರ್ ಲೀಗ್ ಪ್ರವೇಶಿಸಿತು. ಅದೇ ರೀತಿ ಚಿತ್ರದುರ್ಗ ಜಿಲ್ಲಾ ತಂಡ ೧೫-೧೦ ಅಂತರದಲ್ಲಿ ಎಸ್‌ಜೆಎಂ ವಸತಿ ಶಾಲೆಯ ವಿರುದ್ಧ ಜಯ ಗಳಿಸಿತು. ಮೈಸೂರು ಜಿಲ್ಲಾ ತಂಡ ಎವಿಎಂ ಬೆಂಗಳೂರು ತಂಡದ ವಿರುದ್ಧ ೧೪-೧೨ ಅಂತರದಲ್ಲಿ ಗೆದ್ದು ಸೆಮಿೈನಲ್ ಪ್ರವೇಶಿಸಿತು. ಬಿಐಎ ಬೆಂಗಳೂರು ತಂಡ ತುಮಕೂರು ಜಿಲ್ಲಾ ತಂಡದ ವಿರುದ್ಧ ೧೪-೧೨ ಅಂತರದಲ್ಲಿ ಜಯ ಗಳಿಸಿತು.
ಹಾಸನ, ಚಿತ್ರದುರ್ಗ, ಮೈಸೂರು ಹಾಗೂ ಬಿಐಎ ತಂಡಗಳು ಸೂಪರ್ ಲೀಗ್ ಹಂತವನ್ನು ತಲುಪಿದವು.
ಸೂಪರ್ ಲೀಗ್‌ನಲ್ಲಿ ಹಾಸನ ಜಿಲ್ಲಾ ತಂಡ ಬೆಂಗಳೂರು ಬಿಐಎ ತಂಡವನ್ನು ೧೬-೧೦ ಅಂತರದಲ್ಲಿ ಮಣಿಸಿತು.  ಹಾಸನ ಜಿಲ್ಲಾ ತಂಡ ಚಿತ್ರದುರ್ಗವನ್ನು  ೧೬-೧೪ ಅಂತರದ ಪರಾಭವಗೊಳಿಸಿತು. ನಂತರ ಹಾಸನ ಜಿಲ್ಲಾ ತಂಡ ಮೈಸೂರು ವಿರುದ್ಧ ೧೮-೧೬ ಅಂತರದಲ್ಲಿ ಜಯ ಸಾಧಿಸಿತು. ಮೈಸೂರು ಜಿಲ್ಲಾ ತಂಡ ಬಿಐಎ ಬೆಂಗಳೂರು ವಿರುದ್ಧ  ೧೮-೧೫ ಅಂತರದಲ್ಲಿ ಗೆದ್ದಿತು. ನಂತರದ ಪಂದ್ಯದಲ್ಲಿ ಮೈಸೂರು ಜಿಲ್ಲಾ ತಂಡ ಚಿತ್ರದುರ್ಗದ ವಿರುದ್ಧ  ೧೫-೧೦ ಅಂತರದಲ್ಲಿ ಜಯ ಗಳಿಸಿತು.  ಬಿಐಎ ಬೆಂಗಳೂರು ತಂಡ ೧೬-೧೪ ಅಂತರದಲ್ಲಿ ಚಿತ್ರದುರ್ಗ ವಿರುದ್ಧ  ಗೆದ್ದು ಮುನ್ನಡೆಯಿತು.
ಸೂಪರ್ ಲೀಗ್‌ನಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದ ಹಾಸನ ಜಿಲ್ಲಾ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಮೈಸೂರು ಜಿಲ್ಲಾ ತಂಡ ಸೂಪರ್ ಲೀಗ್‌ನಲ್ಲಿ ಹಾಸನ ವಿರುದ್ಧ ಸೋಲನುಭವಿಸಿದ ಕಾರಣ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು. ಎರಡನೇ ರನ್ನರ್ ಅಪ್ ಸ್ಥಾನವನ್ನು ಬಿಐಎ ಬೆಂಗಳೂರು ತಂಡ ತನ್ನದಾಗಿಸಿಕೊಂಡಿತು. ಚಿತ್ರದುರ್ಗ ಜಿಲ್ಲಾ ತಂಡ ನಾಲ್ಕನೇ ಸ್ಥಾನ ಗಳಿಸಿತು.
ಬಾಲಕಿಯರ ವಿ‘ಾಗದ ಕ್ವಾರ್ಟರ್ ಫೈನಲ್‌ನಲ್ಲಿ  ಹಾಸನ ಜಿಲ್ಲಾ ತಂಡ ಎಬಿಎಂ ಬೆಂಗಳೂರು ವಿರುದ್ಧ ೧೮-೧೬ ಅಂತರದಲ್ಲಿ ಗೆದ್ದಿತು. ಮೈಸೂರು ಜಿಲ್ಲಾ ತಂಡ ಜಿಎಚ್‌ಎಸ್ ಕೂಡ್ಲಿ ಗೇಟ್ ವಿರುದ್ಧ ೧೪-೧೨ ಅಂತರದಲ್ಲಿ ಗೆದ್ದಿತು. ಚಿತ್ರದುರ್ಗಾ ಜಿಲ್ಲಾ ತಂಡ ೧೬-೧೨ ಅಂತರದಲ್ಲಿ ದಾವಣಗೆರೆಗೆ ಸೋಲುಣಿಸಿತು. ಬಿಐಎ ಬೆಂಗಳೂರು ತಂಡ ಸೇಂಟ್ ಯ್ರೂಫ್ರಾಸಿಯಾ ವಿರುದ್ಧ ೧೪-೧೦ ಅಂತರದಲ್ಲಿ ಗೆದ್ದಿತು.  ಹಾಸನ ಜಿಲ್ಲೆ, ಚಿತ್ರದುರ್ಗ, ಮೈಸೂರು ಹಾಗೂ ಬಿಐಎ ಬೆಂಗಳೂರು ತಂಡಗಳು ಸೂಪರ್ ಲೀಗ್‌ಗೆ ಅರ್ಹತೆ ಪಡೆದವು.
ಸೂಪರ್ ಲೀಗ್‌ನಲ್ಲಿ ಹಾಸನ ಜಿಲ್ಲಾ ತಂಡ ಮೈಸೂರು ,ಬಿಐಎ ಹಾಗೂ ಚಿತ್ರದುರ್ಗ ತಂಡಗಳ ವಿರುದ್ಧ  ಅನುಕ್ರಮವಾಗಿ ೧೩-೧೧ ,೧೮-೧೦ ಹಾಗೂ ೧೩-೦೯ ಅಂತರದಲ್ಲಿ ಜಯ ಗಳಿಸಿತು. ಮೈಸೂರು ಜಿಲ್ಲಾ ತಂಡ ಬಿಐಎ ಬೆಂಗಳೂರು ವಿರುದ್ಧ ೧೮-೧೦ಅಂತರದಲ್ಲಿ ಜಯ  ಹಾಗೂ ಚಿತ್ರದುರ್ಗ ತಂಡದ ವಿರುದ್ಧ ೧೨-೧೨ ಅಂತರದಲ್ಲಿ ಡ್ರಾ ಸಾಧಿಸಿತು. ಚಿತ್ರದುರ್ಗ ತಂಡ ಬಿಐಎ ಬೆಂಗಳೂರು ವಿರುದ್ಧ ೧೨-೦೯ ಅಂತರದಲ್ಲಿ ಜಯ ಗಳಿಸಿತು.
ಸೂಪರ್ ಲೀಗ್‌ನಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದ ಹಾಸನ ಜಿಲ್ಲಾ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಮೈಸೂರು ಜಿಲ್ಲೆ ರನ್ನರ್ ಅಪ್ ಹಾಗೂ ಚಿತ್ರದುರ್ಗ ಜಿಲ್ಲೆ ಎರಡನೇ ರನ್ನರ್ ಅಪ್ ಸ್ಥಾನ ಗಳಿಸಿತು. ಬಿಐಎ ಬೆಂಗಳೂರು ನಾಲ್ಕನೇ ಸ್ಥಾನ ಗಳಿಸಿತು.

Related Articles