Thursday, September 21, 2023

ವಿವಿಎಸ್ ಸರ್ದಾರ್ ಕಾಲೇಜಿಗೆ ನೆಟ್‌ಬಾಲ್ ಚಾಂಪಿಯನ್ ಪಟ್ಟ

ಇತ್ತೀಚಿಗೆ ಕೆಎಲ್‌ಇ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಉತ್ತರ ತಾಲೂಕು  ಜಿಲ್ಲಾ ಮಟ್ಟದ  ಅಂತರ್ ಕಾಲೇಜು ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ  ವಿವಿಎಸ್ ಸರ್ದಾರ್ ಪಟೇಲ್ ಕಾಲೇಜು  ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಪಿಯುಸಿ ಕಾಲೇಜಿನ ವಿರುದ್ಧ ೪ ಅಂಕಗಳ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಆಗಸ್ಟ್ ೩೦ರಂದು ನಡೆದ ಚಾಂಪಿಯನ್‌ಷಿಪ್‌ನ ಸೆಮಿೈನಲ್ ಪಂದ್ಯದಲ್ಲಿ  ಒಟ್ಟು ೮ ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯದಲ್ಲಿ ಸರ್ದಾರ್ ಕಾಲೇಜು ತಂಡ ೧೦-೯ ಅಂತರದಲ್ಲಿ ಜಯ ಗಳಿಸಿತು.  ಸೆಮಿಫೈನಲ್ ಪಂದ್ಯದಲ್ಲಿ  ವಿವಿಎಸ್ ಸರ್ದಾರ್ ಕಾಲೇಜು ತಂಡ  ಎಂಇಎಸ್ ಕಿಶೋರ್ ಕೇಂದ್ರದ ವಿರುದ್ಧ ೧೭-೧ ಅಂತರದಲ್ಲಿ ಜಯ ಗಳಿಸಿತು.
ಫೈನಲ್ ಪಂದ್ಯದಲ್ಲಿ ಕಾವ್ಯ, ಧನ್ಯ, ಪೂಜಾ, ಲಿಪಿಕ, ನವ್ಯತಾ, ಹರ್ಷಿತ, ಲಿಖಿತ (ನಾಯಕಿ) ಉತ್ತಮ ಆಟ ಪ್ರದರ್ಶಿಸಿದರು. ದೈಹಿಕ ಶಿಕ್ಷಕ ರಾಘವ್ ಮಾತೋಡ್ ಹಾಗೂ ಪ್ರಾಂಶುಪಾಲರಾದ ಲಕ್ಷ್ಮೀ ನರಸು ಎನ್.ಎಚ್. ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.

Related Articles