ಸ್ಪೋರ್ಟ್ಸ್ ಮೇಲ್ ವರದಿ
ದಸರಾ ಕ್ರೀಡಾಕೂಟದ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಸದರ್ನ್ ವಾರಿಯರ್ಸ್ ತಂಡ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಯೂತ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಜಯ ಗಳಿಸಿ ಸಿಎಂ ಕಪ್ ಗೆದ್ದುಕೊಂಡಿದೆ.
ಪ್ರಶಸ್ತಿ ಸುತ್ತಿನಲ್ಲಿ ಸದರ್ನ್ ವಾರಿಯರ್ಸ್ ತಂಡ 38-37 ಅಂತರದಲ್ಲಿ ರೋಚಕ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಬೆಂಗಳೂರಿನ ಯೂತ್ ಸ್ಪೋರ್ಟ್ಸ್ ಕ್ಲಬ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.
ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಹಾಸನ ಜಿಲ್ಲಾ ತಂಡ ಚಿಕ್ಕಮಗಳೂರು ತಂಡವನ್ನು 33-17 ಅಂಕಗಳ ಅಂತರದಲ್ಲಿ ಮಣಿಸಿ ಕಂಚಿನ ಪದಕ ಗೆದ್ದುಕೊಂಡಿತು.
ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಜೀಲ್ ಸ್ಪೋರ್ಟ್ಸ್ ಕ್ಲಬ್ ಬೆಂಗಳೂರು ಗ್ರಾಮೀಣ ಯೂತ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು 35-22 ಅಂಕಗಳ ಅಂತರದಲ್ಲಿ ಮಣಿಸಿ ಚಿನ್ನದ ಪದಕ ಗೆದ್ದುಕೊಂಡಿತು. 13 ಅಂಕಗಳಿಂದ ಸೋತ ಯೂತ್ ಸ್ಟಾರ್‌ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.
ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬಿಎಂಎಸ್‌ಸಿಡಬ್ಲ್ಯು ತಂಡ 20-12 ಅಂತರದಲ್ಲಿ ದಾವಣಗೆರೆ ಜಿಲ್ಲಾ ತಂಡವನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು.
ಮೊದಲ ಬಹುಮಾನ ಗಳಿಸಿದ ಸದರ್ನ್ ವಾರಿಯರ್ಸ್ ತಂಡ 40,000, ಯೂತ್ ಸ್ಟಾರ್ಸ್ ಸ್ಪೋರ್ಟ್ಸ್ ಅಕಾಡೆಮಿ 25,000 ಹಾಗೂ ಹಾಸನ ಜಿಲ್ಲಾ ತಂಡ 15,000 ರೂ. ನಗದು ಬಹುಮಾನ ಗಳಿಸಿದವು.