Monday, June 24, 2024

ರಾಷ್ಟ್ರೀಯ ನೆಟ್‌ಬಾಲ್ ತಂಡಕ್ಕೆ ರಾಜ್ಯದ ನಂದಿನಿ, ರಂಜಿತಾ ಆಯ್ಕೆ

ಸ್ಪೋರ್ಟ್ಸ್ ಮೇಲ್ ವರದಿ

ಸಿಂಗಾಪುರದಲ್ಲಿ ನಡೆಯಲಿರುವ ಎಂ.1. ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ರಾಜ್ಯದ ಅನುಭವಿ ಆಟಗಾರ್ತಿಯರಾದ ನಂದಿನಿ ಎಲ್‌ಜಿ. ಹಾಗೂ ರಂಜಿತಾ ಬಿ.ಜೆ. ಆಯ್ಕೆಯಾಗಿದ್ದಾರೆ. ಸೆ. 1 ರಿಂದ  9 ರವರೆಗೆ ಚಾಂಪಿಯನ್‌ಷಿಪ್ ನಡೆಯಲಿದೆ. ಇಲ್ಲಿ ವಿಶ್ವ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ತಂಡಗಳ ಆಯ್ಕೆ ನಡೆಯಲಿದೆ.

ನಂದಿನಿ ಹಾಗೂ ರಂಜಿತಾ ಕಳೆದ ಹತ್ತು ವರ್ಷಗಳಿಂದ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ತಂಡದ ವಿವರ
ಆಯುಷಾ ಶರ್ಮಾ, ಪಲ್ಲವಿ ಕುಮಾರಿ, ಕೀರ್ತಿ, ಪೂಜಾ ಚೋಪ್ರಾ, ನಂದಿನಿ ಎಲ್.ಜಿ., ರಂಜಿತಾ ಬಿ.ಜೆ., ರುಚಿ, ಆಂಚಲ್ ಚೌಹಾಣ್, ಮೇಘಾ ಚೌಧರಿ, ಗುರ್‌ಪ್ರೀತ್ ಕೌರ್, ಜ್ಯೋತಿ ಶರ್ಮಾ, ನಿಧಿ ಶರ್ಮಾ. ಕೋಚ್- ಲಲಿತ್, ಸಹಾಯಕ ಕೋಚ್-ಸೊನಾಲಿ, ಮ್ಯಾನೇಜರ್-ಅಮರ್‌ದೀಪ್ ಕೌರ್. 

Related Articles