Saturday, February 24, 2024

11 ವರ್ಷಗಳ ಹಿಂದಿನ ದಾಖಲೆ ಮುರಿದ ಐಶ್ವರ್ಯ!!!

ಬೆಂಗಳೂರು, ಜೂನ್.13: ‌ ಚೆನ್ನೈನಲ್ಲಿ ನಡೆಯುತ್ತಿರು ರಾಷ್ಟ್ರೀಯ ಅಂತರ್‌ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಐಶ್ವರ್ಯ ಬಿ. ಟ್ರಿಪಲ್‌ ಜಂಪ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆ ಬರೆದು ಚಿನ್ನ ಗೆದ್ದಿದ್ದಾರೆ.

14.14ಮೀ. ಉದ್ದಕ್ಕೆ ಜಿಗಿದ ಐಶ್ವರ್ಯ 2011ರಲ್ಲಿ ಮಯೂಖಾ ಜಾನಿ ಜಪಾನಿನ ಕೋಬೆಯಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ನಿರ್ಮಿಸಿದ್ದ 14.11 ಮೀ. ದಾಖಲೆಯನ್ನು ಮುರಿದರು.

ಭಾನುವಾರ ಲಾಂಗ್‌ಜಂಪ್‌ನಲ್ಲಿ 6.73 ಮೀ. ಉದ್ದಕ್ಕೆ ಜಿಗಿದಿದ್ದ ಐಶ್ವರ್ಯ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದು ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು.

Related Articles