Monday, December 11, 2023

ರಾಷ್ಟ್ರೀಯ ಅಥ್ಲೆಟಿಕ್ಸ್‌: ನೂತನ ಕೂಟ ದಾಖಲೆ ಬರೆದ ಮನು ಉತ್ತಮ ಅಥೀಟ್‌

ಬೆಂಗಳೂರು: ನಗರದ ಶ್ರೀ ಕಂಠೀನ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ National Open Athletics Championship Manu DP best athlete ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಡಿ.ಪಿ. ಮನು ಜಾನೆಲಿನ್‌ ಎಸೆತದಲ್ಲಿ ನೂತನ ಕೂಟ ದಾಖಲೆ ಬರೆದಿದ್ದಾರೆ.

ಕಾಮನ್‌ವೆಲ್ತ್‌ ಪದಕ ವಿಜೇತ ಕಾಶಿನಾಥ್‌ ನಾಯ್ಕ್‌ ಅವರಲ್ಲಿ ತರಬೇತಿ ಪಡೆಯುತ್ತಿರುವ ಮನು 82.06 ಮೀ. ದೂರಕ್ಕೆ ಜಾವೆಲಿನ್‌ ಎಸೆದು ನೂತನ ಕೂಟ ದಾಖಲೆ ಬರೆದು ಚಿನ್ನದ ಪದಕ ಗೆದ್ದರು.

ಒಟ್ಟು 1130 ಅಂಕಗಳನ್ನು ಗಳಿಸಿದ ಮನು ಕ್ರೀಡಾಕೂಟದಲ್ಲಿ ಉತ್ತಮ ಕ್ರೀಡಾಪಟು ಎಂಬ ಗೌರವಕ್ಕೆ ಪಅತ್ರರಾಗಿದ್ದಾರೆ. ವನಿತೆಯರ ವಿಭಾಗದಲ್ಲಿ ಮಹಾರಾಷ್ಟ್ರದ ಯಮುನಾ ಶ್ರೇಷ್ಠ ಅಥ್ಲೀಟ್‌ ಗೌರವ ಪಡೆದರು. ಒಟ್ಟು 175 ಅಂಕಗಳನ್ನು ಗಳಿಸಿದ ಸರ್ವಿಸಸ್‌ ಪುರುಷರ ವಿಭಾಗದಲ್ಲಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ವನಿತೆಯರ ವಿಭಾಗದಲ್ಲಿ 156 ಅಂಕಗಳನ್ನು ಗಳಿಸಿದ ರೈಲ್ವೇಸ್‌ ತಂಡ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿತು. ಒಟ್ಟು 320 ಅಂಕಗಳನ್ನು ಗಳಿಸಿದ ರೈಲ್ವೇಸ್‌ ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು.

Related Articles