Friday, June 14, 2024

ವಯಸ್ಸು 52, ದಣಿಯದ ಭಾಸ್ಕರ ಚಿನ್ನ ಗೆದ್ದ ಕತೆ

ಗೋವಾದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ 52 ರ ಹರೆಯದ ಭಾಸ್ಕರ ಬಾಲಚಂದ್ರ ಅವರು ಬಿಲಿಯರ್ಡ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ಬರೆದಿದ್ದಾರೆ. 52 year old Kannadiga Bhaskar Balachandra won the gold medal at National Games

ಕೃಷಿ ಕುಟುಂಬದಿಂದ ಬಂದ ಭಾಸ್ಕರ್‌ ಬಾಲಚಂದ್ರ ಅವರು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅತ್ಯಂತ ಹಿರಿಯ ಕ್ರೀಡಾಪಟು ಎನಿಸಿದ್ದಾರೆ. ಕೃಷಿ ಕುಟುಂಬದಿಂದ ಬಂದ ಭಾಸ್ಕರ್‌ ಅವರಿಗೆ ಚಿಕ್ಕಂದಿನಿಂದಲೂ ಬಿಲಿಯರ್ಡ್ಸ್‌ ಆಡಬೇಕೆಂಬ ಹಂಬಲ. ಇದಕ್ಕೆ ಸ್ಫೂರ್ತಿ ಸಿಕ್ಕಿದ್ದು ದೂರದರ್ಶನದಲ್ಲಿ ಭಾರತದ ಶ್ರೇಷ್ಠ ಬಿಲಿಯರ್ಡ್ಸ್‌ ಆಟಗಾರ ಗೀತ್‌ ಸೇಠಿ ಅವರಿಂದ. ಅವರ ಆಟವನ್ನು ನೋಡಿ ಗುರುವಿಲ್ಲದೆ  ಬಿಲಿಯರ್ಡ್ಸ್‌ ಪಟುವಾದರು ಭಾಸ್ಕರ್‌.

1997ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಿಲಿಯರ್ಡ್ಸ್‌ ಆಟವನ್ನು ಮೊದಲ ಬಾರಿಗೆ ಅಳವಡಿಸಲಾಯಿತು. ಅಂದು ಸ್ಪರ್ಧಿಸಿದ್ದ ಭಾಸ್ಕರ್‌ ಕಂಚಿನ ಪದಕ ಗೆದ್ದಿದ್ದರು. ಆಶೋಕ್‌ ಶಾಂಡಿಲ್ಯ ಮತ್ತು ಗೀತ್‌ ಸೇಠಿ ಅನುಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದಿದ್ದರು. 2014ರಲ್ಲಿ ಲೀಡ್ಸ್‌ನಲ್ಲಿ ನಡೆದ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಹಾಗೂ 1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನಲ್ಲೂ ಕಂಚಿನ ಪದಕದ ಸಾಧನೆ ಮಾಡಿದ್ದರು. ಅಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ಭಾಸ್ಕರ್‌ ರಾಜ್ಯದ ಶ್ರೇಷ್ಠ ಆಟಗಾರರಲ್ಲೂ ಒಬ್ಬರು.

ಚಿಕ್ಕಂದಿನಲ್ಲಿ ಪಂಚಜ್‌ ಆಡ್ವಾಣಿ ಹಾಗೂ ಉಮಾದೇವಿ ಅವರಿಗೆ ಬಿಲಿಯರ್ಡ್ಸ್‌ ಹೇಳಿಕೊಟ್ಟ ಭಾಸ್ಕರ್‌ ಗುರುವಿನ ಕರ್ತವ್ಯವನ್ನೂ ನಿಭಾಯಿಸಿದ್ದಾರೆ. ಭಾಸ್ಕರ್‌ ಅವರ ತಂದೆ ವಿ. ಬಾಲಚಂದ್ರ ಕೂಡ ರಾಜ್ಯ ಕಂಡ ಉತ್ತಮ ಬಿಲಿಯರ್ಡ್ಸ್‌ ಆಟಗಾರ.

ರೇಷ್ಮೆ ಉದ್ಯಮದ ನಡುವೆ ದಿನವೂ ಅಭ್ಯಾಸ, ಮ್ಯಾರಥಾನ್‌ ಓಟ, ಯೋಗ ಹಾಗೂ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆಯಲ್ಲಿ ತಾಲೀಮು ಇದರಿಂದಾಗಿ ಭಾಸ್ಕರ್‌ ಅವರು ಇಂದಿಗೂ ತಮ್ಮ ಫಿಟ್ನೆಸ್‌ ಕಾಯ್ದುಕೊಂಡಿದ್ದಾರೆ.

Related Articles