Thursday, October 10, 2024

ಮೋದಿ, ಶಾ ಟೀಮ್‌ ಇಂಡಿಯಾ ಕೋಚ್‌ ಹುದ್ದೆಗೆ ಅರ್ಜಿ!?

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಕ್ತಾಯಗೊಂಡಿದೆ. ಯಾವುದೇ ವಿದೇಶಿ ಕೋಚ್‌ಗಳು ಅರ್ಜಿ ಸಲ್ಲಿಸಲಿಲ್ಲ ಎಂಬುದು ತಿಳಿದು ಬಂದಿದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರಕ್ಷಣಾ ಸಚಿವ ಅಮಿತ್‌ ಶಾ ಹಾಗೂ ಸಚಿನ್‌ ತೆಂಡೂಲ್ಕರ್‌ ಅವರು ಅರ್ಜಿ ಸಲ್ಲಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. Narendra Modi Amit Shah apply for Team India Coach Job!!

ಆದರೆ ಅವು ನಕಲಿ ಅರ್ಜಿಗಳು. ಬಿಸಿಸಿಐ ಇ-ಮೇಲ್‌ಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ ನಕಲಿ ಹೆಸರಿನಲ್ಲಿ ಅರ್ಜಿ ಸಲ್ಲಿಸಿರುವುದು ಬೇಸರದ ಸಂಗತಿ. ಅಂಥವರನ್ನು ಪತ್ತೆ ಹಚ್ಚಿ ಬಿಸಿಸಿಐ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

ಸುಮಾರು 3000ಕ್ಕೂ ಹೆಚ್ಚು ಆಸಕ್ತರು ಅರ್ಜಿ ಸಲ್ಲಿಸಿದ್ದು, ಬಿಸಿಸಿಐ ಅರ್ಜಿ ನಮೂನೆಯನ್ನು ಸಾರ್ವಜನಿಕಗೊಳಿಸಿದ್ದರಿಂದ ಕ್ರಿಕೆಟ್‌ ಆಡದವರ ಹೆಸರಿನಲ್ಲೂ ಅರ್ಜಿ ಸಲ್ಲಿಸಲಾಗಿದೆ. ಈ ಬಾರಿ ಕೋಚ್‌ ಹುದ್ದೆಯಲ್ಲಿ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಅವರ ಹೆಸರು ಮಂಚೂಣಿಯಲ್ಲಿದ್ದು, ಕೆಕೆಆರ್‌ ಮೆಂಟರ್‌ ಈ ಬಾರಿ ಕೋಚ್‌ ಆಗುವ ಸಾಧ್ಯತೆ ಹೆಚ್ಚಿದೆ. ಅದಕ್ಕೆ ಪೂರಕವೆಂಬಂತೆ ಕೆಕೆಆರ್‌ ಈ ಬಾರಿಯ ಐಪಿಎಲ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು.

ತೆಂಡೂಲ್ಕರ್‌, ಧೋನಿ, ಹರ್ಭಜನ್‌ ಸಿಂಗ್‌ ಮತ್ತು ವೀರೇಂದ್ರ ಸೆಹ್ವಾಗ್‌ ಅವರ ಹೆಸರಿನಲ್ಲಿಯೂ ಅರ್ಜಿಗಳು ಬಿಸಿಸಿಐಗೆ ತಲುಪಿದೆ. ಆದರೆ ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರ ಹೆಸರಿನಲ್ಲಿ ಅರ್ಜಿ ಸಲ್ಲಿಸಿರುವುದು ಕಿಡಿಗೇಡಿಗಳ ಕೃತ್ಯ ಎನ್ನಲಾಗುತ್ತಿದೆ.

Related Articles