Friday, December 13, 2024

ಅ. 4, 5 ರಂದು ರಾಜ್ಯ ಸ್ಕೂಲ್ ಒಲಿಂಪಿಕ್ಸ್ ಗ್ರೂಪ್ ಗೇಮ್ಸ್

ಸ್ಪೋರ್ಟ್ಸ್ ಮೇಲ್ ವರದಿ

ಯಂಗ್‌ಸ್ಟರ್ಸ್ ಸ್ಪೋರ್ಟ್ಸ್ ಪ್ರಮೋಟರ್ಸ್ ಟ್ರಸ್ಟ್ (ರಿ.) ಹಾಗೂ ಯಂಗ್‌ಸ್ಟರ್ಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಇದರ ಆಶ್ರಯದಲ್ಲಿ ಅಕ್ಟೋಬರ್  4  ಮತ್ತು  5 ರಂದು ಬೆಂಗಳೂರಿನ ಜಯನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ 11ನೇ ರಾಜ್ಯ ಮಟ್ಟದ ಸ್ಕೂಲ್‌ಗೇಮ್ಸ್ ತಂಡ ವಿಭಾಗದ ಸ್ಪರ್ಧೆಗಳು  ನಡೆಯಲಿದೆ. ರಾಜ್ಯ ಕ್ರೀಡಾ ಸಂಸ್ಥೆಗಳ ನಿಯಮದಂತೆ ಸ್ಪರ್ಧೆಗಳು ನಡೆಯಲಿವೆ.

ನಡೆಯುವ ಪಂದ್ಯಗಳು
ಥ್ರೋ ಬಾಲ್, ಬಾಸ್ಕೆಟ್‌ಬಾಲ್, ವಾಲಿಬಾಲ್, ಡಾಡ್ಜ್ ಬಾಲ್, ಖೋ ಖೋ, ಟೇಬಲ್ ಟೆನಿಸ್ (ತಂಡ ಮತ್ತು ಸಿಂಗಲ್ಸ್) ಸ್ಪೀಡ್ ಬಾಲ್ ಹಾಗೂ ಸ್ಕೇಟಿಂಗ್ ಈ ಸ್ಪರ್ಧೆಗಳು ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ನಡೆಯುತ್ತದೆ. ಕಬಡ್ಡಿ ಹಾಗೂ ಫುಟ್ಬಾಲ್ ಕೇವಲ ಬಾಲಕರಿಗೆ ನಡೆಯಲಿದೆ.
ನೋಂದಾವಣೆ ಶುಲ್ಕ
ಸ್ಪರ್ಧೆಯ ದಿನಾಂಕ – ಅಕ್ಟೋಬರ್ 4 ಮತ್ತು 5.
ಪ್ರತಿಯೊಂದು ತಂಡಕ್ಕೂ ಪ್ರವೇಶ ಶುಲ್ಕ-800 ರೂ.
ಟೇಬಲ್ ಟೆನಿಸ್ ಸಿಂಗಲ್ಸ್ ಬಾಲಕ ಹಾಗೂ ಬಾಲಕಿಯರಿಗೆ ಪ್ರವೇಶ ಶುಲ್ಕ -250 ರೂ. (ತಲಾ ಒಬ್ಬರಿಗೆ)
ಸ್ಪೀಡ್ ಬಾಲ್ ಪ್ರವೇಶ ಶುಲ್ಕ -300 ರೂ. ಪ್ರತಿಯೊಂದು ಸ್ಪರ್ಧಿಗೂ.
ಸ್ಕೇಟಿಂಗ್ ಪ್ರವೇಶ ಶುಲ್ಕ, ಪ್ರತಿಯೊಬ್ಬ ಸ್ಕೇಟರ್‌ಗೂ- 300 ರೂ.
ಪ್ರತಿಯೊಬ್ಬ ಆಟಗಾರರೂ ಸೂಕ್ತವಾದ ಶೂ ಹಾಗೂ ಸಮವಸ್ತ್ರ ಧರಿಸತಕ್ಕದ್ದು.
ಅಕ್ಟೋಬರ್ 4ರಂದು ಬೆಳಿಗ್ಗೆ 8 ಗಂಟೆಗೆ ಎಲ್ಲಾ ಶಾಲೆಯ ಸ್ಪರ್ಧಿಗಳು ಉದ್ಘಾಟನಾ ಸಮಾರಂಭದ ವೇಳೆ ಹಾಜರಿರತಕ್ಕದ್ದು.
ಸ್ಥಳದಲ್ಲೇ ಪ್ರವೇಶ ಶುಲ್ಕ ಸ್ವೀಕರಿಸಲಾಗುವುದಿಲ್ಲ.
ಸಮಾರೋಪ ಸಮಾರಂಭದ ದಿನ ವಿಜೇತರಿಗೆ ಬಹುಮಾನ ನೀಡಲಾಗುವುದು. ಸೆ.25  ಪ್ರವೇಶ ಶುಲ್ಕ ಹಾಗೂ ನೋಂದಾವಣೆಗೆ ಕೊನೆಯ ದಿನಾಂಕವಾಗಿರುತ್ತದೆ. ಹೊರ ಜಿಲ್ಲೆಗಳಿಂದ ಬಂದ ಸ್ಪರ್ಧಿಗಳು ತಮ್ಮದೇ ಸ್ವಂತ ವಸತಿ ಸೌಲವನ್ನು ಮಾಡಿಕೊಳ್ಳತಕ್ಕದ್ದು. ಸ್ಪರ್ಧೆಗಳು 16 ವರ್ಷದೊಳಗಿನವರಿಗಾಗಿರುತ್ತದೆ. ಅಂದರೆ 10ನೇ ತರಗತಿಯೊಳಗಿನವರಿಗೆ ಆಗಿರುತ್ತದೆ. 2002, ಅಕ್ಟೋಬರ್ 30 ಹಾಗೂ ಅದಕ್ಕಿಂತ ಮೊದಲು ಹುಟ್ಟಿದವರು ಸ್ಪರ್ಧಿಸಲು ಅರ್ಹರು.
ಪ್ರವೇಶ ಪತ್ರಗಳನ್ನು ತಲುಪಿಸಬೇಕಾದ ವಿಳಾಸ
N. R. Ramesh (Athletic Coach)
Organizing Secretary
# 17 U, ground Floor,
3rd Cross, 5th Main, S.R. Nagar
Bangalore 560027
Contact on- Ramesh 9845626244, Santosh- 9900305569, Manjunath-9945032388
OR
Contact @ Kanteerava Stadium between 4.00 PM to 6.30 PM

Related Articles