Sunday, May 26, 2024

ಅಮಿತ್, ವೈಶಾಖ್ ಮಿಂಚು, ವಾರಿಯರ್ಸ್‌ಗೆ ವಿಜಯ

ಸ್ಪೋರ್ಟ್ಸ್ ಮೇಲ್ ವರದಿ

ವೈಶಾಖ್ ವಿಜಯ ಕುಮಾರ್(20ಕ್ಕೆ 4) ಹಾಗೂ ಅಮಿತ್ ವರ್ಮಾ (59) ಅವರ ಅದ್ಭತ ಬೌಲಿಂಗ್ ಹಾಗೂ ಬ್ಯಾಟಿಂಗ್ ನೆರವಿನಿಂದ ಮಾಜಿ ಚಾಂಪಿಯನ್‌ಮೈಸೂರು ವಾರಿಯರ್ಸ್ ತಂಡ ಪ್ರಸಕ್ತ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬಳ್ಳಾರಿ ಟಸ್ಕರ್ಸ್ ವಿರುದ್ಧ 7 ಜಯ ಗಳಿಸಿದೆ.

ಹುಬ್ಬಳ್ಳಿಯ ರಾಜಾನಗರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸುಚಿತ್ ಪಡೆ ಮೊದಲು ಫೀಲ್ಡಿಂಗ್ ಮಾಡಿ ಟಸ್ಕರ್ಸ್ ತಂಡವನ್ನು ೧೪೫ ರನ್‌ಗೆ ಕಟ್ಟಿಹಾಕಿತು. ಟಸ್ಕರ್ಸ್ ಪರ ರೋಹನ್ ಕದಮ್(59) ಹಾಗೂ ದೇವದತ್ತ ಪಡಿಕ್ಕಲ್(60) ಅವರ ಹೋರಾಟ ವ್ಯರ್ಥವಾಯಿತು. ಮೈಸೂರು ವಾರಿಯರ್ಸ್ ತಂಡದ ನಾಯಕ ಸುಚಿತ್ 20 ರನ್‌ಗೆ 2 ವಿಕೆಟ್ ಗಳಿಸಿ ರನ್ ಗಳಿಕೆಗೆ ಕಡಿವಾಣ ಹಾಕಿದರು. 4 ವಿಕೆಟ್ ಗಳಿಸಿದ ವೈಶಾಖ್ 18 ಮತ್ತು 20ನೇ ಓವರ್‌ಗಳಲ್ಲಿ ಕೇವಲ 8 ರನ್ ನೀಡಿದ್ದು, ಟಸ್ಕರ್ಸ್ ಸೋಲಿಗೆ ಮತ್ತೊಂದು ಕಾರಣವಾಯಿತು.
15ನೇ ಓವರ್ ಮುಕ್ತಾಯದಲ್ಲಿ ಟಸ್ಕರ್ಸ್ ಪಡೆ3 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು, ಆದರೆ ನಂತರ ಬಂದ ಬ್ಯಾಟ್ಸ್‌ಮನ್‌ಗಳು ಮೈಸೂರು ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಲರಾಗಿ ಕೇವಲ 145 ರನ್‌ಗೆ ತೃಪ್ತಿಪಡಬೇಕಾಯಿತು.
ಅಮಿತ್ ವರ್ಮಾ 46 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ನೆರವಿನಿಂದ 59 ರನ್ ಗಳಿಸಿ ಜಯಕ್ಕೆ ಉತ್ತಮ ತಳಪಾಯ ಹಾಕಿದರು. ರಾಜು ಭಟ್ಕಳ್‌ 38 ಎಸೆತಗಳಲ್ಲಿ  4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 48 ರನ್‌ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ತಂಡ 18.5 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಜಯದ ಹಾದಿ ತಲುಪಿತು. ಅಬ್ರಾರ್ ಕಾಜಿ 2 ವಿಕೆಟ್ ಗಳಿಸಿದರೂ ಆಗಲೇ ಮೈಸೂರು ಜಯದ ಹಾದಿಯನ್ನು ಸುಗಮಗೊಳಿಸಿಕೊಂಡಿತ್ತು. ಅಮಿತ್ ವರ್ಮಾ ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Related Articles