Wednesday, November 6, 2024

ಕೆಪಿಎಲ್ ಫೈನಲ್: ಬುಲ್ಸ್ ಎದುರಾಳಿ ಬ್ಲಾಸ್ಟರ್ಸ್

ಸ್ಪೋರ್ಟ್ಸ್ ಮೇಲ್ ವರದಿ 

ನಾಯಕ ಭರತ್ ಚಿಪ್ಲಿ (73) ಹಾಗೂ ಎಂ. ಜಿ. ನವೀನ್ (62*) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 9 ವಿಕೆಟ್ ಅಂತರದಲ್ಲಿ ಸೋಲಿಸಿದ ಬಿಜಾಪುರ ಬುಲ್ಸ್ ತಂಡ ಕರ್ನಾಟಕ ಪ್ರೀಮಿಯರ್ ಲೀಗ್ ಫೈನಲ್ ನಲ್ಲಿ ಗುರುವಾರ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ. ಚಿಪ್ಲಿ ಹಾಗೂ ನವೀನ್ ಮೊದಲ ವಿಕೆಟ್ ಜತೆಯಾಟದಲ್ಲಿ 125 ರನ್ ಗಳಿಸುವುದರೊಂದಿಗೆ ಬುಲ್ಸ್ ಪಡೆ 135  ರನ್ ಗಳ ಅಲ್ಪ ಮೊತ್ತವನ್ನು ಸುಲಭವಾಗಿ ಗಳಿಸಿತು.

ಮೊದಲ 6 ಓವರ್ ಗಳಲ್ಲಿ  ಹುಬ್ಬಳ್ಳಿ ಟೈಗರ್ಸ್ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿ ಉತ್ತಮ ಆರಂಭ ಕಂಡಿತ್ತು. ಆದರೆ ಸ್ಥಿರ ಆಟ ಪ್ರದರ್ಶಿಸುವಲ್ಲಿ ವಿಫಲವಾಗಿ ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟಿತು. ಬಿಜಾಪುರ ಬುಲ್ಸ್ ಅತ್ಯಂತ ತಾಳ್ಮೆಯಿಂದಲೇ ಆಟ ಆರಂಭಿಸಿತು. ಮೋಡಲ 6 ಓವರ್ ಗಳಲ್ಲಿ ಬುಲ್ಸ್ ವಿಕೆಟ್ ನಷ್ಟ ಇಲ್ಲದೆ 37 ರನ್ ಗಳಿಸಿತ್ತು. ಚಿಪ್ಲಿ  46 ಎಸೆತಗಳಲ್ಲಿ  9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದರೆ ನವೀನ್ 43 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಅಜೇಯ 62 ಸಿಡಿಸಿ ಸುಲಭ ಜಯ ತಂದಿತ್ತರು.
ಗುರುವಾರ ಸಂಜೆ ೬:೩೦ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

Related Articles