Thursday, October 10, 2024

ಮ್ಯಾನೇಜ್ಮೆಂಟ್‌ ಹೋಗಿ ಎಂದರೂ ಇವರು ಆರ್‌ಸಿಬಿ ಬಿಟ್ಟಿಲ್ಲ!

ಮಾಲೀಕ ವಿಜಯ ಮಲ್ಯ ಅವರನ್ನೇ ಮನೆಯ ಹಾದಿ ತೋರಿಸಿದ್ದ ರಾಯಲ್‌ ಚಾಲೆಂಜರ್ಸ್‌‌ ಬೆಂಗಳೂರು ತಂಡಕ್ಕೆ ಕಳೆದ ಎಂಟು ವರ್ಷಗಳಿಂದ ತಂಡದಲ್ಲಿದ್ದ ಈ ಆಟಗಾರ(?)ನನ್ನು ತಂಡದಿಂದ ಹೊರಗಿಡಲಾಗಲಿಲ್ಲ. ಈ ಬಾರಿ ತಂಡದಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ ನಂತರ ನೋಡಿದರೆ ಆ ವ್ಯಕ್ತಿ ಆರ್‌ಸಿಬಿಯಲ್ಲೇ ಉಳಿದುಕೊಂಡಿರುವುದು ಸ್ಪಷ್ಟವಾಗಿತ್ತು. ಕೊನೆಯಲ್ಲಿ ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ “ನಾವು ತಂಡವನ್ನು ಬಿಟ್ಟು ಹೋಗಿ ಎಂದು ಕೇಳಿಕೊಂಡರೂ ಅವರು ಹೋಗಲಿಲ್ಲ,” ಎಂದು ಬರೆದು ಹೀಗಳೆದರೂ ಆ ವ್ಯಕ್ತಿ ತಂಡದಲ್ಲೇ ಉಳಿದುಕೊಂಡಿರುವುದು ಕ್ರಿಕೆಟ್‌ ಜಗತ್ತಿಗೆ ಅಚ್ಚರಿಯನ್ನುಂಟು ಮಾಡಿದೆ. Mr Nags retained. Salary cap unaffected. We asked him to leave, but he won’t.

2016 ರಿಂದ ಆರ್‌ಸಿಬಿ ತಂಡದಲ್ಲಿದ್ದು ತಂಡದ ಹೆಚ್ಚಿನ ಆಟಗಾರರಿಗೆ ಕನ್ನಡ ಪದಗಳನ್ನು ಪರಿಚಯಿಸಿದ ದಾನಿಶ್‌ ಸೇಠ್‌  ಕೇವಲ ಆರ್‌ಸಿಬಿಗೆ ಮಾತ್ರವಲ್ಲ, ಇತರ ತಂಡಗಳಿಗೂ ಸ್ಫೂರ್ತಿ. ಕ್ರಿಕೆಟ್‌ ಜಗತ್ತಿನಲ್ಲಿ ಇಂಥದೊಂದು ಪಾತ್ರ ಹುಟ್ಟಿಕೊಳ್ಳಲು ಸಾಧ್ಯವೆಂಬುದನ್ನು ತೋರಿಸಿದ ಮಿಸ್ಟರ್‌ ನ್ಯಾಗ್ಸ್‌ ಮತ್ತು “ಹಂಬಳ್‌ ಪೊಳಿಟೀಷಿಯನ್‌” ಖ್ಯಾತಿಯ ದಾನಿಶ್‌ ಸೇಠ್‌ ಆರ್‌ಸಿಬಿ ಜಯದಲ್ಲಿ ಮಾತ್ರವಲ್ಲ, ಸೋಲಿನಲ್ಲೂ ನಗುವನ್ನು ಭರಿಸುವ ಸಾಮರ್ಥ್ಯ ಉಳ್ಳವರು. ಭಾರತದ ಬಹುತೇಕ ಭಾಷೆಗಳನ್ನು ಬಲ್ಲ ಸೇಠ್‌, ಆರ್‌ಸಿಬಿಯ ಇನ್‌ಸೈಡರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವತ್ತು “I AM RETAINED!” ಎಂದು ಆರ್‌ಸಿಬಿ X ನಲ್ಲಿ ಹೇಳಿಕೊಂಡಿರುವುದನ್ನು ದಾನಿಶ್‌ ಸೇಠ್‌ ನಗುತ್ತ ಹಂಚಿಕೊಂಡಿದ್ದಾರೆ. ಮಿಸ್ಟರ್‌ ನ್ಯಾಗ್ಸ್‌ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ವೇತನದಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರನ್ನು ನಾವು ಬಿಟ್ಟು ಹೋಗು ಎಂದು ಕೇಳಿಕೊಂಡಿದ್ದೇವೆ, ಆದರೆ ಅವರು ಒಪ್ಪಲಿಲ್ಲ,” ಎಂದು ಆರ್‌ಸಿಬಿ X ನಲ್ಲಿ ನಕ್ಕು ತಿಳಿಸಿದೆ.

ಆರ್‌ಸಿಬಿ ಇದುವರೆಗೂ ಪ್ರಶಸ್ತಿಯನ್ನು ಗೆದ್ದಿಲ್ಲ, ದಾನಿಶ್‌ ಅದನ್ನೂ ಸಮರ್ಥಿಸಿಕೊಂಡು ನಗಿಸುತ್ತಾರೆ. ತಂಡ ಸೋತಾಗಲೂ ಅಳುತ್ತ ನಗಿಸುತ್ತಾರೆ. ಕ್ರಿಕೆಟ್‌ ಇಲ್ಲದಿರುವಾಗ ಕ್ರಿಕೆಟ್‌ ಜಗತ್ತಿನ ಹಾಸ್ಯದ ಸಂಗತಿಗಳು, ಬೆಂಗಳೂರಿನ ಸಮಸ್ಯೆಗಳು ರಾಮ್‌ ಮೂರ್ತಿಯವರೇ ಎಂದು ಯೂ ಟ್ಯೂಬ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲದಿರಬಹುದು, ಆದರೆ ಕನ್ನಡಿಗರ ಹೃದಯ ಗೆದ್ದಿದೆ. ಇದಕ್ಕೆ ಮುಖ್ಯ ಕಾರಣ ದಾನಿಶ್‌ ಸೇಠ್‌. ಆರ್‌ಸಿಬಿಯಲ್ಲಿ ಎಬಿ ಡಿವಿಲಿಯರ್ಸ್‌ ಎಲ್ಲಿಗೂ ಗೊತ್ತು. ಆದರೆ ಅವರಿಗೆ ಕನ್ನಡ ಪದಗಳ ಪರಿಚಯ ಇದೆ ಎಂದರೆ ನಂಬಲು ಸಾಧ್ಯವೇ? ಆ ನಂಬಿಕೆಯನ್ನುಂಟು ಮಾಡಿದ್ದು ದಾನಿಶ್‌ ಸೇಠ್‌ ತಮ್ಮ ಹಾಸ್ಯದ ಹೊನಲಿನ ಮೂಲಕ.

Related Articles