Thursday, October 10, 2024

ಬರುತ್ತಿದೆ ದೇಶದ ಮೊದಲ ಟೆನಿಸ್‌ ಬಾಲ್‌ ಕ್ರಿಕೆಟ್‌ನ ಪ್ರೀಮಿಯಲ್‌ ಲೀಗ್‌!

ಮುಂಬಯಿ: ಎಲ್ಲ ಮಾದರಿಯ ಕ್ರಿಕೆಟ್‌ಗೂ ತಾಯಿ ಎಂದರೆ ಅದು ಟೆನಿಸ್‌ ಬಾಲ್‌ ಕ್ರಿಕೆಟ್‌. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ, ಹಾಲಿ ನಾಯಕ ರೋಹಿತ್‌ ಶರ್ಮಾ ಮೊದಲು ಆಡಿದ್ದೇ ಟೆನಿಸ್‌ ಬಾಲ್‌‌ ಕ್ರಿಕೆಟ್‌. ಜಗತ್ತಿನ ಟೆಸ್ಟ್‌ ಪಂದ್ಯವನ್ನಾಡುವ ರಾಷ್ಟ್ರಗಳು ಪುಟಿದೇಳುವ ಪಿಚ್‌ನಲ್ಲಿ ಆಡುವುದನ್ನು ಅಭ್ಯಾಸ ಮಾಡುವಾಗ ಟೆನಿಸ್‌ ಬಾಲ್‌ ಅಭ್ಯಾಸಕ್ಕೂ ಮೊರೆ ಹೋಗುತ್ತಾರೆ ಎಂಬುದನ್ನು ಮರೆಯುವಂತಿಲ್ಲ. ಹೀಗಿರುವಾಗ ದೇಶದ ಟೆನಿಸ್‌ ಕ್ರಿಕೆಟಿಗರಿಗೆ ಭವಿಷ್ಯ ಇಲ್ಲವೇ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಚಿಂತೆ ಬೇಡ ಅನುಭವಿ ಟೆನಿಸ್‌ ಬಾಲ್‌ ಕ್ರಿಕೆಟಿಗರಿಗೆ ಮುಂಬಯಿಯಲ್ಲಿ ಮೊದಲ ಇಂಡಿಯನ್‌ ಸ್ಟ್ರೀಟ್‌ ಪ್ರೀಮಿಯರ್‌ ಲೀಗ್‌ (ಐಎಸ್‌ಪಿಎಲ್‌) ಆಡುವ ಅವಕಾಶ ಇದೆ. India’s first Tennis ball cricket Premier League ISPL in Mumbai.

ಈ ಲೀಗ್‌ ನಡೆಯುವುದು ಯಾವುದೋ ಬಯಲು ಅಥವಾ ಚಿಕ್ಕ ಕ್ರೀಡಾಂಗಣದಲ್ಲಿ ಅಲ್ಲ. ಬದಲಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ನಡೆಯುವ ಕ್ರೀಡಾಂಗಣದಲ್ಲಿ. ಭಾರತದಲ್ಲಿ ಮೊದಲ ಬಾರಿಗೆ 2024ರ ಮಾರ್ಚ್‌ 2 ರಿಂದ 9ರ ವರೆಗೆ  ಟಿ10 ಮಾದರಿಯಲ್ಲಿ ಇಂಡಿಯನ್‌ ಸ್ಟ್ರೀಟ್‌ ಪ್ರೀಮಿಯರ್‌ ಲೀಗ್‌ (ಐಎಸ್‌ಪಿಎಲ್‌) ನಡೆಯಲಿದೆ. ಮುಂಬೈಯಲ್ಲಿ ಮೊದಲ ಬಾರಿಗೆ ಒಟ್ಟು 19 ಪಂದ್ಯಗಳು ನಡೆಯಲಿವೆ.

ಒಟ್ಟು ಆರು ತಂಡಗಳು ಪಾಲ್ಗೊಳ್ಳಲಿವೆ. ಮುಂಬಯಿ, ಹೈದರಾಬಾದ್‌, ಬೆಂಗಳೂರು, ಚೆನ್ನೈ, ಕೋಲ್ಕೊತಾ ಮತ್ತು ಶ್ರೀನಗರದ ಫ್ರಾಂಚೈಸಿಗಳು ಆಟಗಾರರನ್ನು ಆಯ್ಕೆ ಮಾಡಲಿವೆ. ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡುವ ಹೆಚ್ಚಿನ ಆಟಗಾರರ ಬದುಕು ಅರ್ಥವಿಲ್ಲದೆ ಕೊನೆಗೊಳ್ಳುತ್ತದೆ. ಅವರ ಪ್ರತಿಭೆಗೆ ಬೆಲೆ ಸಿಗುತ್ತಿಲ್ಲ. ಅವರಿಗೂ ಆರ್ಥಿಕ ಸಮಸ್ಯೆಗಳಿರುತ್ತವೆ. ಕ್ರೀಡಾಂಗಣ ಮತ್ತು ಬೀದಿ ನಡುವಿನ ಅಂತರವನ್ನು ತೆಗೆದುಹಾಕುವ ಸಲುವಾಗಿ ಐಎಸ್‌ಪಿಎಲ್‌ ಹುಟ್ಟಿಕೊಂಡಿದೆ. ಈ ಆಟಗಾರರಿಗೆ ಲೀಗ್‌ ಉತ್ತಮ ಅವಕಾಶವನ್ನು ಕಲ್ಪಿಸಲಿದೆ. ಇದರಿಂದಾಗಿ ಟೆನಿಸ್‌ ಬಾಲ್‌ ಕ್ರಿಕೆಟಿಗರೂ ಈ ಕ್ರೀಡೆಯಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದಾಗಿದೆ.

ಬಿಸಿಸಿಐ ಖಜಾಂಚಿಯಾಗಿರುವ ಆಶೀಶ್‌ ಶೆಲಾರ್‌ ಅವರು ಇಂಡಿಯನ್‌ ಸ್ಟ್ರೀಟ್‌ ಪ್ರೀಮಿಯರ್‌ ಲೀಗ್‌ನ ಕೋರ್‌‌ ಕಮಿಟಿಯ ಸದಸ್ಯರಾಗಿದ್ದು, “ಐಎಸ್‌ಪಿಎಲ್‌ ಕೇವಲ ಒಂದು ಟೂರ್ನಮೆಂಟ್‌ ಅಲ್ಲ. ಇದು ಪ್ರತಿಭಾವಂತ ಆಟಗಾರರಿಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ಇರುವ ವೇದಿಕೆಯಾಗಿದೆ. ಇದೊಂದು ರಾಷ್ಟ್ರ ಮಟ್ಟದ ವೇದಿಕೆಯಾಗಿದೆ. ಆಟಗಾರರು ಕೇವಲ ಟಿ10 ಟೂರ್ನಿಯಲ್ಲಿ ಪಾಲ್ಗೊಳ್ಳುವುದಲ್ಲ, ಅವರಿಗೆ ರಣಜಿ ಆಟಗಾರರಿಂದ ತರಬೇತಿ ಸಿಗುತ್ತದೆ. ಕ್ರಿಕೆಟ್‌ ಜಗತ್ತಿಗೆ ಪ್ರವೇಶ ಮಾಡಲು ಇದೊಂದು ಉತ್ತಮ ವೇದಿಕೆ,” ಎಂದಿದ್ದಾರೆ.

ಇಂಡಿಯನ್‌ ಸ್ಟ್ರೀಟ್‌ ಪ್ರೀಮಿಯರ್‌ ಲೀಗ್‌ನ ಪ್ರಧಾನ ಮೆಂಟರ್‌ ಆಗಿ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ರವಿಶಾಸ್ತ್ರೀ ಅವರು ಕಾರ್ಯನಿರ್ವಹಿಸಲಿದ್ದಾರೆ. “ಕ್ರಿಕೆಟ್‌ನ ಬಗ್ಗೆ ಕನಸು ಕಟ್ಟಿಕೊಂಡಿರುವ ಅನೇಕ ಪ್ರತಿಭೆಗಳಿಗೆ ಐಎಸ್‌ಪಿಎಲ್‌ ಉತ್ತಮ ವೇದಿಕೆ. ಇದರಿಂದ ಅನೇಕ ಪ್ರತಿಭೆಗಳ ಮುಖ್ಯವಾಹಿನಿಗೆ ಬರಬಹುದು ಎಂಬ ನಂಬಿಕೆ ನನಗಿದೆ,” ಎಂದಿದ್ದಾರೆ.

ಆಸಕ್ತ ಆಟಗಾರರು ಡಿಸೆಂಬರ್‌ 20, 2023ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಸರನ್ನು ನೋಂದಾಯಿಸಲು ಕೆಳಗಿನ ಲಿಂಕನ್ನು ಕ್ಲಿಕ್‌ ಮಾಡಿ.

Players are invited to register for the tournament here before December 20th, 2023: 
www.ispl-t10.com

Related Articles