Sunday, September 8, 2024

ಮಣೂರು ಪ್ರೌಢ ಶಾಲೆಗೆ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ

ಕಬಡ್ಡಿ ಈಗ ವೃತ್ತಿಪರ ಕ್ರೀಡೆಯಾಗಿ ಬೆಳೆದು ನಿಂತಿದೆ. ಜಕಾರ್ತದಲ್ಲಿ ನಡೆಯುತ್ತಿವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಹಾಗೂ ಪುರುಷ ತಂಡ ಚಿನ್ನದ ಪದಕ ಗೆಲ್ಲುವ ಫೇವರಿಟ್  ಎನಿಸಿವೆ. ಅದೇ ರೀತಿ ಈ ಬಾರಿ ಶಾಲಾ ಮಟ್ಟದಲ್ಲಿ ಕಬಡ್ಡಿ ಅತ್ಯಂತ ಆಸಕ್ತಿಯಿಂದ ನಡೆಯುತ್ತಿದೆ.

ಉಡುಪಿ ಜಿಲ್ಲೆಯ ಆವರ್ಸೆ ಪ್ರೌಢ ಶಾಲಾ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಮಣೂರು ಪಡುಕರೆಯ ಪ್ರೌಢ ಶಾಲಾ ಬಾಲಕರು ಪ್ರಶಸ್ತಿ ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ.
ತರಬೇತುದಾರ ಶರತ್ ಹಾಗೂ ಶಿಕ್ಷಕಿ ಜಯಮಂಗಳ ಅವರು ತಂಡವನ್ನು ಕಟ್ಟಿ, ಚಾಂಪಿಯನ್ನರನ್ನಾಗಿಸುವಲ್ಲಿ ಕಠಿಣ ಶ್ರಮ ವಹಿಸಿರುತ್ತಾರೆ.

Related Articles