Saturday, April 20, 2024

ಜೈ ಬಜರಂಗ್

ಏಜೆನ್ಸೀಸ್ ಜಕಾರ್ತ

ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಸುಶೀಲ್ ಕುಮಾರ್ ಹೀನಾಯ ಪ್ರದರ್ಶನ ತೋರಿದರೂ, ಯುವ ಕುಸ್ತಿಪಟು ಬಜರಂಗ್ ಪೂನಿಯಾ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಉಡುಗೊರೆ ನೀಡಿದ್ದಾರೆ.

೬೫ ಕೆಜಿ ಫ್ರೀ ಸ್ಟೆ‘ಲ್ ವಿಭಾಗದಲ್ಲಿ ಪೂನಿಯಾ ಜಪಾನಿನ ದೈಚಿ ತಕಾತನಿ ವಿರುದ್ಧ ೧೧-೮ ಅಂಕಗಳಿಂದ ಜಯ ಗಳಿಸಿ ಭಾರತಕ್ಕೆ ಪ್ರಸಕ್ತ ಏಷ್ಯನ್ ಗೇಮ್ಸ್‌ನ ಮೊದಲ ಚಿನ್ನ ತಂದಿತ್ತರು. ಉಜ್ಪೆಕಿಸ್ತಾನದ ಸಿರೋಜಿದ್ದಿನ್ ಖಸಾನವೋವ್ ವಿರುದ್ಧ ೧೩-೩ ಅಂತರದಲ್ಲಿ ಜಯ ಗಳಿಸಿದ ಬಜರಂಗ್, ನಂತರ ಕ್ವಾರ್ಟರ್ ಫೈನಲ್  ಹೋರಾಟದಲ್ಲಿ ತಜಕಿಸ್ತಾನದ ಅಬ್ದುಲ್ ಖಾಸಿಂ ಫಾಯ್ಜೇವ್ ವಿರುದ್ಧ ೧೨-೨ ಅಂತರದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ  ಮಂಗೋಲಿಯಾದ ಬ್ಯಾಟ್‌ಮಗ್ನೆ‘ ಬ್ಯಾಚುಲನ್ ವಿರುದ್ಧ ೧೦-೦ ಅಂತರದಲ್ಲಿ ಗೆದ್ದು ಪ್ರಭುತ್ವ ಸಾಧಿಸಿದರು. ಜಪಾನಿನ ಕುಸ್ತಿಪಟು ವಿರುದ್ಧದ ಫೈನಲ್ ಹೋರಾಟದಲ್ಲಿ ಬಜರಂಗ್ ಆರಭದಲ್ಲಿ ೬-೦ ಅಂತರದಲ್ಲಿ ಮುನ್ನಡೆ ಕಂಡಿದ್ದರು, ಆದರೆ ಎರಡನೇ ಸುತ್ತಿನಲ್ಲಿ  ಹೋರಾಟ ೬-೬ರಲ್ಲಿ ಸಮಬಲಗೊಂಡಿತು. ಅಂತಿಮವಾಗಿ ಪೂನಿಯಾ ಪ್ರಭುತ್ವ ಸಾಧಿಸಿ ಚಿನ್ನಕ್ಕೆ ಮುತ್ತಿಟ್ಟರು.
೨೪ ವರ್ಷದ ಬಜರಂಗ್ ಪೂನಿಯಾ ೨೦೧೪ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಕಾಮನ್ ವೆಲ್ತ್ ಗೇಮ್ಸ್‌ನಲ್ಲೂ ಚಿನ್ನದ ಸಾ‘ನೆ ಮಾಡಿದ್ದರು. ಒಲಿಂಪಿಯನ್ ಯೋಗೇಶ್ವರ್ ದತ್ತ್ ಅವರಲ್ಲಿ ತರಬೇತಿ ಪಡೆದಿರುತ್ತಾರೆ. ವಿದೇಶದಲ್ಲಿ ಸುಶೀಲ್ ಕುಮಾರ್ ಜತೆ ತರಬೇತಿ ಪಡೆದಿದ್ದರೂ, ಸುಶೀಲ್ ಅವರನ್ನು ಮೀರುವ ಸಾಧನೆ ಮಾಡಿರುವುದು ವಿಶೇಷ.

Related Articles