Friday, December 13, 2024

ಮಹಾರಾಷ್ಟ್ರಕ್ಕೆ ರಾಷ್ಟ್ರೀಯ ಹಾಕಿ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್‌ಮೇಲ್ ವರದಿ 

ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು 8-6 ಗೋಲುಗಳ ಅಂತರದಲ್ಲಿ ಮಣಿಸಿದ ಮಹಾರಾಷ್ಟ್ರ ತಂಡ  ಹಾಕಿ ಇಂಡಿಯಾ 2ನೇ ರಾಷ್ಟ್ರೀಯ ೫ ಎ ಸೈಡ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಈ ಚಾಂಪಿಯನ್‌ಷಿಪ್ ಪುರುಷ ಹಾಗೂ ಮಹಿಳಾ ಆಟಗಾರರ ಸಮ್ಮಿಶ್ರಣದಲ್ಲಿ ನಡೆಯಿತು.

ಮಹಾರಾಷ್ಟ್ರದ ಪರ ಟೈರಾನ್ ಪೆರೆರಾ  ೩ ಮತ್ತು ೧೯ನೇ ನಿಮಿಷ,  ಸಯ್ಯದ್ ನಿಯಾಜ್ ೭ ಮತ್ತು ೧೬ನೇ ನಿಮಿಷ,  ಪ್ರೀತಿ ದುಬೈ ೧೧, ೧೩, ೧೪ ಹಾಗೂ ೨೦ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.  ಉತ್ತರ ಪ್ರದೇಶದ ಪರ ಸೌಲಭ್  ಆನಂದ್ ೩ ಮತ್ತು ೧೨ನೇ ನಿಮಿಷ, ವಿಶಾಲ್ ಸಿಂಗ್ ೫ನೇ ನಿಮಿಷ,  ರಾಜ್ ಕುಮಾರ್ ೬ನೇ ನಿಮಿಷ, ಶ್ಯಾಮ್ ಟಿಡ್‌ಗಾಮ್  ೧೫ನೇ ಮತ್ತು ೧೮ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ  ಮಹಾರಾಷ್ಟ್ರ ತಂಡ  ಹಾಕಿ ಹರಿಯಾಣ ವಿರುದ್ಧ ೪-೨ ಗೋಲುಗಳ ಅಂತರದಲ್ಲಿ ಜಯ ಗಳಿಸಿ  ಫೈನಲ್ ಪ್ರವೇಶಿಸಿತ್ತು.  ಉತ್ತರ ಪ್ರದೇಶ ತಂಡ  ಹಾಕಿ ಕರ್ನಾಟಕ ವಿರುದ್ಧ  ೫-೪ ಗೋಲುಗಳ ಅಂತರದಲ್ಲಿ ಜಯ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.

Related Articles