Friday, December 13, 2024

ಭಾಸ್ಕರ್‌ಗೆ ಮೈಸೂರು ಕಪ್ ಸ್ನೂಕರ್ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ

ಫೈನಲ್ ಪಂದ್ಯದಲ್ಲಿ  ಆರ್. ಸಂತೋಷ್ ಅವರನ್ನು 5-1 ಅಂತರದಲ್ಲಿ ಮಣಿಸಿದ ಬಿ. ಭಾಸ್ಕರ್ ರಾಜ್ಯ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಮೈಸೂರು ಕಪ್ ರಾಜ್ಯಮಟ್ಟದ ಸ್ನೂಕರ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ಭಾಸ್ಕರ್  81-100,16-59, 53-15,91-100,70-40,56-47
 ಅಂತರದಲ್ಲಿ ಜಯ ಗಳಿಸಿದರು. ಸೆಮಿಫೈನಲ್ ಪಂದ್ಯದಲ್ಲಿ  ಭಾಸ್ಕರ್ 4-1 ಅಂತರದಲ್ಲಿ  ದೀಪಕ್ ವಿರುದ್ಧ ಜಯ ಗಳಿಸಿ ಫೈನಲ್ ಪ್ರವೇಶಿಸಿದ್ದರು. ಆರ್. ಸಂತೋಷ್  4-3 ಅಂತರದಲ್ಲಿ ಐ.ಎಚ್. ಮನುದೇವ್ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಸುತ್ತು ತಲುಪಿದ್ದರು.
ಮಹಿಳಾ ವಿಭಾಗದ ಫೈನಲ್‌ನಲ್ಲಿ  ಚಿತ್ರಾ ಎಂ. 4-0 ಅಂತರದಲ್ಲಿ ಜೂಡಿ ವಾಲಿಯಾ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು. ಚಿತ್ರಾ 66-30, 56-16, 55-16, 57=04 ಅಂತರದಲ್ಲಿ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

Related Articles