Saturday, July 27, 2024

Border Gavaskar Trophy ಇಂದೋರ್‌ನಲ್ಲಿ ಭಾರತದ ಮೇಲೆ ಲಯನ್‌ ದಾಳಿ

ಇಂದೋರ್‌: ಆಸ್ಟ್ರೇಲಿಯಾ ಹಾಗೂ ಭಾರತ (Indian vs Australia) ತಂಡಗಳ ನಡುವಿನ ಗವಾಸ್ಕರ್‌ ಬಾರ್ಡರ್‌ ಟೆಸ್ಟ್‌ ಸರಣಿಯ (Border Gavaskar Trophy) ಎರಡನೇ ಪಂದ್ಯ ಮಿಂಚಿನ ವೇಗದಲ್ಲಿ ಕೊನೆಗೊಳ್ಳಲಿದೆ. ಎರಡನೇ ದಿನದ ಆರಂಭದಲ್ಲಿ ಭಾರತದ ಸ್ಪಿನ್‌ ಮತ್ತು ವೇಗದ ಬೌಲಿಂಗ್‌ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ 197 ರನ್‌ಗೆ ಸರ್ವ ಪತನ ಕಂಡರೆ, ನಥಾನ್‌ ಲಿಯಾನ್‌ ಸ್ಪಿನ್‌ ದಾಳಿಗೆ ಸಿಲುಕಿದ ಭಾರತ 109 ರನ್‌ಗೆ ಆಲೌಟ್‌ ಆಗಿ ಆಸೀಸ್‌ಗೆ 76 ರನ್‌ಗಳ ಜಯದ ಗುರಿ ನೀಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 109 ರನ್‌ಗೆ ಆಲೌಟ್‌ ಆಗಿದ್ದ ಭಾರತ ತಂಡ ಆಸ್ಟ್ರೇಲಿಯಾವನ್ನು ಪ್ರಥಮ ಇನ್ನಿಂಗ್ಸ್‌ನಲ್ಲಿ 197 ರನ್‌ಗೆ ನಿಯಂತ್ರಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ನಥಾನ್‌ ಲಿಯಾನ್‌ (Nathan Lyon) ದಾಳಿಗೆ ಸಿಲುಕಿ 163 ರನ್‌ಗೆ ಸರ್ವ ಪತನ ಕಂಡಿತು. ಇದರೊಂದಿಗೆ ಆಸ್ಟ್ರೇಲಿಯಾ 75 ರನ್‌ಗಳ ಮುನ್ನಡೆ ಕಂಡಿತು.

ನಥಾನ್‌ ಲಿಯಾನ್‌ 64 ರನ್‌ಗೆ 8 ವಿಕೆಟ್‌ ಗಳಿಸಿ ಇಂದೋರ್‌ ಪಿಚ್‌ ಸಂಪೂರ್ಣ ಲಾಭವನ್ನು ಪಡೆದರು. ಚೇತೇಶ್ವರ ಪೂಜಾರ 142 ಎಸೆತಗಳನ್ನು ಎದುರಿಸಿ 49 ರನ್‌ ಗಳಿಸದೇ ಇರುತ್ತಿದ್ದರೆ ಭಾರತದ ಸ್ಥಿತಿ ಇನ್ನೂ ಚಿಂತಾಜನಕವಾಗಿರುತ್ತಿತ್ತು. ಎರಡನೇ ದಿನದ ಆರಂಭದಲ್ಲಿ ಆಸ್ಟ್ರೇಲಿಯಾ ತಂಡ ಕಂಡ ಹಠಾತ್‌ ಕುಸಿತ ಮೂರನೇ ದಿನದಲ್ಲೂ ಸಂಭವಿಸಿದರೆ ಭಾರತ ಈ ಪಂದ್ಯದಲ್ಲಿ ಜಯ ಕಾಣುವ ಸಾಧ್ಯತೆ ಇದೆ. ಆದರೆ ಜಯದ ಗುರಿ ಕೇವಲ 76 ರನ್‌ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ (Border Gavaskar Trophy) ಎರಡನೇ ಟೆಸ್ಟ್‌ನ ಎರಡನೇ ದಿನದ ಆರಂಭದಲ್ಲಿ ಆಸ್ಟ್ರೇಲಿಯಾ ಕೇವಲ 11 ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದು ತಂಡದ ಅಲ್ಪ ಮೊತ್ತಕ್ಕೆ ಪ್ರಮುಖ ಕಾರಣವಾಯಿತು. ಸ್ಪಿನ್‌ ಬೌಲರ್‌ಗಳಿಗೆ ನೆರವಾದ ಪಿಚ್‌ನಲ್ಲಿ ವೇವಿ ಉಮೇಶ್‌ ಯಾದವ್‌ 12 ರನ್‌ಗೆ 3 ವಿಕೆಟ್‌ ಗಳಿಸಿರುವುದು ಗಮನಾರ್ಹ. ರವಿಚಂದ್ರನ್‌ ಅಶ್ವಿನ್‌ ಇಂದೋರ್‌ ಪಿಚ್‌ನಲ್ಲಿ ಮಿಂಚಿ 3 ವಿಕೆಟ್‌ ಗಳಿಸಿ ಆಸೀಸ್ ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು.

ಪಿಚ್‌ ಬಗ್ಗೆ ವೆಂಗ್‌ಸರ್ಕಾರ್‌ ಟೀಕೆ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ, ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ದಿಲೀಪ್‌ ವೆಂಗ್‌ಸರ್ಕಾರ್‌ ಇಂದೋರ್‌ ಪಿಚ್‌ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು, ಬಿಸಿಸಿಐ ಹಾಗೂ ಪಿಚ್‌ ಕ್ಯುರೇಟರನ್ನು ಟೀಕಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್‌ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಬರುವಾಗ ಈ ರೀತಿಯ ಪಿಚ್‌ ನಿರ್ಮಿಸುವುದು ಸೂಕ್ತವಲ್ಲ, ಬಿಸಿಸಿಐ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾದಿಂದ ಪಾಠ ಕಲಿಯಬೇಕಿದೆ ಎಂದಿದ್ದಾರೆ.

Related Articles