Saturday, April 20, 2024

ಆಚರಿಸುತಾ ಸಾಗುವ……ಕರುನಾಡೆಲ್ಲ ಈ ಉತ್ಸವ

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ಈಗ ಏಳನೇ ವರ್ಷಕ್ಕೆ ಕಾಲಿಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ  ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಬೆಳಗಾವಿ ಪ್ಯಾಂಥರ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯುವ ಮೂಲಕ ಈ ಬಾರಿಯ ಕೆಪಿಎಲ್‌ಗೆ ಚಾಲನೆ ಸಿಗಲಿದೆ.

ರಾಜ್ಯದೆಲ್ಲಡೆ ಮಳೆ ಆಗಿರುವುದನ್ನು ಗಮನಿಸಿದರೆ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಕನ್ನಡದ ಖ್ಯಾತ ರಾಪ್  ಸಿಂಗರ್ ಚಂದನ್ ಶೆಟ್ಟಿ, ನಟಿ ರಚಿತಾ ರಾಮ್ ಉದ್ಘಾಟನಾ ಸಮಾರಂಭಕ್ಕೆ ರಂಗು ನೀಡಲಿದ್ದಾರೆ. ನಟ ಪ್ರಜ್ವಲ್ ಕುಮಾರ ಸ್ವಾಮಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಪಂದ್ಯಗಳು ನಡೆಯಲಿವೆ. ಬೆಂಗಳೂರಿನಲ್ಲಿ ಕೇವಲ ಮೂರು ಪಂದ್ಯಗಳನ್ನು ಆಯೋಜಿಸಲಾಗಿದ್ದು, ಹುಬ್ಬಳ್ಳಿಯಲ್ಲಿ ೧೯ರಿಂದ ೨೬ರವರೆಗೆ ೧೧ ಪಂದ್ಯಗಳು ಹುಬ್ಬಳ್ಳಿಯಲ್ಲಿ, ೨೮ರಿಂದ ಸೆ. ೬ರವರೆಗೆ ಮೈಸೂರಿನಲ್ಲಿ  ೧೦ ಪಂದ್ಯಗಳು ನಡೆಯಲಿವೆ. ಮೈಸೂರಿಗೆ  ಈ ಬಾರಿ ಸೆಮಿಫೈನಲ್  ಹಾಗೂ ಫೈನಲ್  ಆತಿಥ್ಯ ನೀಡಲಾಗಿದೆ.

ಬಿಸಿಗೆ ಮಳೆಯ ಭಯ

ಬಿಸಿಬಿಸಿ ಕ್ರಿಕೆಟ್ಟು ಎಂಬ ಘೋಷ ವಾಕ್ಯದಿಂದ ಮುಂದೆ ಸಾಗುತ್ತಿರುವ ಕೆಪಿಎಲ್ ಬಿಸಿಬಿಸಿ ಬದಲು ತಂಪಾಗುವ ಎಲ್ಲ ಲಕ್ಷಣ ಇದೆ. ಏಕೆಂದರೆ ಮಳೆಯ ಕಾಟ. ರಾಜ್ಯದೆಲ್ಲೆಡೆ ಮಂಗಳವಾರ ರಾತ್ರಿ ವರೆಗೂ ಧಾರಾಕಾರ ಮಳೆಯಾಗಿದೆ. ಈ ಬಾರಿಯ ಕೆಪಿಎಲ್‌ಗೆ ಸಾಕಷ್ಟು ಪ್ರಚಾರವೂ ಸಿಗಲಿಲ್ಲ. ಖ್ಯಾತ ನಟ ಕಿಚ್ಚ ಸುದೀಪ್ ಅವರ ತಂಡ ಇಲ್ಲದಿರುವುದು ಕೆಪಿಎಲ್‌ನ ಜನಾಕರ್ಷಣೆ ಕಳೆದ ವರ್ಷದಿಂದಲೇ ಕುಸಿಯತೊಡಗಿತ್ತು. ಈ ಬಾರಿಯೂ ಕೆಪಿಎಲ್‌ನ ಬ್ರಾಂಡ್ ಹಿಂದಿನಷ್ಟು ಜನಪ್ರಿಯತೆಯನ್ನು ಕಂಡಿಲ್ಲ
ಎಂಬುದು ಸ್ಪಷ್ಟ.

ತಂಡಗಳ  ವಿವರ

ಬೆಳಗಾವಿ ಪ್ಯಾಂಥರ್ಸ್ 

ಸ್ಟುವರ್ಟ್ ಬಿನ್ನಿ (ನಾಯಕ), ಮನೀಶ್ ಪಾಂಡೆ, ಎಂ.ಡಿ. ನಿಧೀಶ್, ಸ್ಟಾಲಿನ್ ಹೂವರ್, ನಿಧೀಶ್, ಸಾಧಿಕ್ ಕಿರ್ಮಾನಿ,ದಿಕ್ಷಾನ್ಷು ನೇಗಿ, ಅಕ್ಷಯ್ ಬಲ್ಲಾಳ್, ದರ್ಶನ್ ಮಾಚಯ್ಯ, ನಿಕಿನ್ ಜೋಸ್, ರಕ್ಷಿತ್ ಎಸ್., ಪ್ರಶಾಂತ್ ಎಸ್, ಅಮನ್ ಖಾನ್, ಶುಭಾಂಗ್ ಹೆಗ್ಡೆ, ಡಿ. ಅವಿನಾಶ್.

 

ಬೆಂಗಳೂರು ಬ್ಲಾಸ್ಟರ್ಸ್

 

ರಾಬಿನ್ ಉತ್ತಪ್ಪ (ನಾಯಕ), ಕೆ.ಸಿ. ಅವಿನಾಶ್, ಕೆ.ಬಿ. ಪವನ್, ಪಲ್ಲವ್ ಕುಮಾರ್ ದಾಸ್, ಅಭಿಷೇಕ್ ಭಟ್, ಗೌವ್ ಧಿಮಾನ್, ಪವನ್ ದೇಶಪಾಂಡೆ, ವಿ.ಕೌಶಿಕ್, ಶರಣ್ ಗೌಡ, ಅರ್ಷದೀಪ್ ಸಿಂಗ್, ಆನಂದ್ ದೊಡ್ಡ ಮನಿ, ಮಿತ್ರಕಾಂತ್ ಯಾದವ್, ಎಂ. ವಿಶ್ವನಾಥ್
.

ಪಂದ್ಯ ಆರಂಭ ‘- ಸಂಜೆ 6-45ಕ್ಕೆ

Related Articles