ಕುಂದಾಪುರ: ಇಲ್ಲಿನ ಪ್ರಸಿದ್ಧ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ Costa Badminton Center Kundapura ಆಶ್ರಯದಲ್ಲಿ ಅಕ್ಟೋಬರ್ 20 ರಂದು ಕುಂದಾಪುರ ಮತ್ತು ಬೈಂದೂರು ತಾಲೂಕುಗಳಿಗೆ ಮೀಸಲಾಗಿರುವ ಸ್ಟಾರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ನಡೆಯಲಿದೆ. Kundapura and Byndoor taluk level Star Badminton Championship on October 20th at Costa Badminton Center
13, 15 ಮತ್ತು 17 ವರ್ಷ ವಯೋಮಿತಿಯ ವಿಭಾಗದಲ್ಲಿ ಬಾಲಕ ಮತ್ತು ಬಾಲಕಿಯರಿಗಾಗಿ ಈ ಚಾಂಪಿಯನ್‌ಷಿಪ್ ನಡೆಯಲಿದೆ. ಸಿಂಗಲ್ಸ್ ವಿಜೇತರಿಗೆ ನಗದು ಬಹುಮಾನ 2500 ಹಾಗೂ ಆಕರ್ಷಕ ಟ್ರೋಫಿ ಮತ್ತು ಡಬಲ್ಸ್ ವಿಜೇತರಿಗೆ 1250 ರೂ, ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಇರುತ್ತದೆ. ಪ್ರವೇಶ ಶುಲ್ಕ ರೂ. 350 ಮಾತ್ರವಾಗಿರುತ್ತದೆ. ಹೆಸರನ್ನು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ ಅಕ್ಟೋಬರ್ 7, 2024.
ಕುಂದಾಪುರ ಕೋಡಿ ರಸ್ತೆಯಲ್ಲಿರುವ ಹಳೆಅಳಿವೆಯ ಅರಾಲುಗುಡ್ಡೆಯಲ್ಲಿರು ಕೋಸ್ಟಾ ಬ್ಯಾಡ್ಮಿಂಟನ್ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಪಂದ್ಯಗಳು ಆರಂಭಗೊಳ್ಳಲಿವೆ. ಅಂಕಣದಲ್ಲಿ NON-MARKING SHOE ಗುರುತು ಮೂಡದ ಶೂ ಧರಿಸಿ ಆಡುವುದು ಕಡ್ಡಾಯ.
ವಯೋಮಿತಿ: 13 ವರ್ಷ ವಯೋಮಿತಿಯವರು 2012 ಅಥವಾ ನಂತರ ಜನಿಸಿದವರಾಗಿರಬೇಕು.
15 ವರ್ಷ ವಯೋಮಿತಿಯವರು 2010 ಅಥವಾ ನಂತರ ಜನಿಸಿದವರಾಗಿರಬೇಕು.
17 ವರ್ಷ ವಯೋಮಿತಿಯವರಜ 2008 ಅಥವಾ ನಂತರ ಜನಿಸಿದವರಾಗಿರಬೇಕು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 8147438366/ 7204288366.