Thursday, October 10, 2024

ಡಿಸೆಂಬರ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಟ್ರೋಫಿ ರಾಜ್ಯ ಮಟ್ಟದ ಕ್ರಿಕೆಟ್‌

ಕೋಟ:  ಗಿಳಿಯಾರಿನ ನಿಸರ್ಗ ಕ್ರಿಕೆಟರ್ಸ್‌ ವತಿಯಿಂದ ಗಿಳಿಯಾರು ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಮಟ್ಟದ 40 ಗಜಗಳ ಹೊನಲು ಬೆಳಕಿನ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿ ಡಿಸೆಂಬರ್‌ನಲ್ಲಿ ನಡೆಯಲಿದೆ. State level Tennis Ball cricket tourney for Dr. Puneeth Rajkumar Trophy will be held on December 14 & 15 at Giliyar.

ಡಾ. ಪನೀತ್‌ ರಾಜ್‌ಕುಮಾರ್‌ ಕಪ್‌ 2024 ಚಾಂಪಿಯನ್‌ಷಿಪ್‌ ಡಿಸೆಂಬರ್‌ 14 & 15ರಂದು ಮೂಡು ಗಿಳಿಯಾರು ಶಾಲಾ ಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಸ್ಥಾನ ಗೆಲ್ಲುವ ತಂಡವು 1,22,000 ರೂ. ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದೆ. ರನ್ನರ್‌ಅಪ್‌ ತಂಡವು 62,000 ರೂ. ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ಪಡೆಯಲಿದೆ.

ಟೂರ್ನಿಯಲ್ಲಿ ಪಾಲ್ಗೊಳ್ಳಲು ಪ್ರವೇಶ ಶುಲ್ಕ 15,000 ರೂ. ಇದರ ಜೊತೆಯಲ್ಲಿ ಆಕರ್ಷಕ ವೈಯಕ್ತಿಕ ಬಹುಮಾನವೂ ಇರುತ್ತದೆ. S7 Sports ನಲ್ಲಿ ಪ್ರತಿಯೊಂದು ಪಂದ್ಯದ ನೇರ ಪ್ರಸಾರವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ‌ಸಂಖ್ಯೆ: 8431020500/7022227539 ಸಂಕರ್ಕಿಸಬಹುದು

Related Articles