ಹೊಸದಿಲ್ಲಿ: ಜನವರಿ 13 ರಿಂದ 19 ರ ವರೆಗೆ ಹೊಸದಿಲ್ಲಿಯಲ್ಲಿ ನಡೆಯಲಿರುವ ಖೋ ಖೋ ವಿಶ್ವಕಪ್‌ನ ಟ್ರೋಫಿಯನ್ನು ಭಾರತೀಯ ಖೋ ಖೋ ಫೆಡರೇಷನ್ ಅನಾವರಣ ಮಾಡಿದೆ. ಇದೇ ಸಂದರ್ಭಧಲ್ಲಿ ಲಾಂಛನಗಳಾದ ತೇಜಸ್ ಹಾಗೂ ತಾರಾವನ್ನೂ ಬಿಡುಗಡೆ ಮಾಡಲಾಗಿದೆ. KKFI Unveils Spectacular Trophy Mascots Tejas and Tara for Inaugural Kho Kho World Cup 2025.
24 ರಾಷ್ಟ್ರಗಳಿಂದ 21 ಪುರುಷ ಹಾಗೂ 20 ಮಹಿಳಾ ತಂಡಗಳು ಮೊದಲ ವಿಶ್ವಕಪ್‌ಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಸಂಪೂರ್ಣ ಬೆಂಬಲ ನೀಡಿದ್ದು ಸ್ಟಾರ್ ಸ್ಪೋರ್ಟ್ಸ್ ಹಾಗೂ ದೂರದರ್ಶನದಲ್ಲಿ ಪಂದ್ಯಗಳು ಪ್ರಸಾರಗೊಳ್ಳಲಿವೆ.
ಹೊಸದಿಲ್ಲಿಯಲ್ಲಿರುವ ಇಂದಿರಾಗಾಂಧೀ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು ಚಾಂಪಿಯನ್ ಪಟ್ಟ ಗೆಲ್ಲುವ ಪುರುಷರ ತಂಡವು ನೀಲಿ ಟ್ರೋಫಿಯನ್ನೂ, ವನಿತೆಯರ ತಂಡವು ಹಸಿರು ಟ್ರೋಫಿಯನ್ನು ತಮ್ಮದಾಗಿಸಿಕೊಳ್ಳಲಿವೆ. ಜಗತ್ತಿನ ಆರು ಖಂಡಗಳಿಂದ ತಂಡಗಳು ಪಾಲ್ಗೊಳ್ಳುತ್ತಿವೆ.