Sportsmail
ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಎಂ. ಚೆನ್ನಿಯಪ್ಪನ್ ಸ್ಮಾರಕ ರಾಜ್ಯ ಅಂತರ್ ಕ್ಲಬ್ ಸ್ನೂಕರ್ ಚಾಂಪಿಯನ್ಷಿಪ್‌ನಲ್ಲಿ ಬಿಎಸ್‌ಎ ʼಎʼ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ಬೌರಿಂಗ್ ಇನ್‌ಸ್ಟಿಟ್ಯೂಟ್ ತಂಡ ಎಂ. ಚೆನ್ನಿಯಪ್ಪನ್ ಸ್ಮಾರಕ ಅಂತರ್ ಕ್ಲಬ್ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ ಗೆದ್ದುಕೊಂಡಿದೆ.
ಫೈನಲ್ ಪಂದ್ಯದಲ್ಲಿ ಬಿಎಸ್‌ಎ ಎ ತಂಡ ಇಂಡಿಯನ್ ಜಿಮ್ಖಾನಾ ಎ ವಿರುದ್ಧ 2-1 ಅಂತರದಲ್ಲಿ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಬಿಎಸ್‌ಎ ತಂಡದ ಶೆಜಾನ್ 60-40, 48-62, 70-64 (2-1) ಅಂತರದಲ್ಲಿ ಜಯ ಗಳಿಸಿದರೆ, ಆದಿಲ್ 34-64, 58-50, 31-66 (1-2) ಅಂತರದಲ್ಲಿ ಪರಾಭವಗೊಂಡರು. ನಿರ್ಣಾಯಕ ಪಂದ್ಯದಲ್ಲಿ ಜುಲ್ಫಿ ಅವರು 2-0 ಅಂತರದಲ್ಲಿ ಮೋಹನ್ ಕೆ. ವಿರುದ್ಧ 60-40, 66-56 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ತಂದುಕೊಟ್ಟರು.
ಸೆಮಿಫೈನಲ್ ಪಂದ್ಯದಲ್ಲಿ ಬಿಎಸ್‌ಎ ಎ ತಂಡ 2-0 ಅಂತರದಲ್ಲಿ ಕೆಎಸ್‌ಬಿಎ ಎ ವಿರುದ್ಧ ಜಯ ಗಳಿಸಿ ಫೈನಲ್ ತಲುಪಿತ್ತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಡಿಯನ್ ಜಿಮ್ಖಾನಾ ಬಿ ತಂಡ 2-1 ಅಂತರದಲ್ಲಿ ಕೆಎಸ್‌ಬಿಎ ಸಿ ತಂಡದ ವಿರುದ್ಧ 2-1 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಸುತ್ತು ತಲುಪಿತ್ತು.