Thursday, September 12, 2024

ರಾಜ್ಯ ಟೆಕ್ವಾಂಡೋ: ಅಮೃತ ಹಳ್ಳಿಗೆ ಸಮಗ್ರ ಪ್ರಶಸ್ತಿ

Sportsmail            

ರಾಜ್ಯ ಟೆಕ್ವಾಂಡೋ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್ಷಿಪ್‌ನಲ್ಲಿ ಬೆಂಗಳೂರಿನ ಸಹಕಾರ ನಗರದ ಅಮೃತಹಳ್ಳಿ ಟೆಕ್ವಾಂಡೋ ಕ್ಲಬ್‌ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.

ಇಲ್ಲಿನ ಡೇವ್‌ ಇನ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ನಡೆದ 20ನೇ ರಾಜ್ಯಮಟ್ಟದ ಚಾಂಪಿಯನ್ಷಿಪ್‌ನಲ್ಲಿ ರಾಜ್ಯದ 15 ಜಿಲ್ಲೆಗಳಿಂದ ಸುಮಾರು 1500 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಅಮೃತಹಳ್ಳಿ ಟೆಕ್ವಾಂಡೋ ಕ್ಲಬ್‌ 30 ಚಿನ್ನ, 33 ಬೆಳ್ಳಿ ಮತ್ತು 38 ಕಂಚಿನ ಪದಕಗಳನ್ನು ಗೆದ್ದು ಸಮಗ್ರ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿತು.

ಎನ್‌ಎಫ್‌ಸಿ ಕ್ಲಬ್‌ 22 ಚಿನ್ನ, 15 ಬೆಳ್ಳಿ, ಮತ್ತು  8 ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನ ಗಳಿಸಿತು.

ಜೆಪಿ ನಗರ ಸ್ಪೋರ್ಟ್ಸ್‌ ಕ್ಲಬ್‌  19 ಚಿನ್ನ, 14 ಬೆಳ್ಳಿ ಹಾಗೂ 10 ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನ ಗಳಿಸಿತು.

18 ಚಿನ್ನ, 19 ಬೆಳ್ಳಿ ಮತ್ತು 9 ಕಂಚಿನ ಪದಕಗಳೊಂದಿಗೆ ಪುನಿಲ್‌ ಟೆಕ್ವಾಂಡೋ ಕ್ಲಬ್‌ ನಾಲ್ಕನೇ ಸ್ಥಾನಿಯಾಯಿತು.

 

ಕರ್ನಾಟಕ ರಾಜ್ಯ ಟೆಕ್ವಾಂಡೋ ಸಂಸ್ಥೆಯ ಕಾರ್ಯದರ್ಶಿ ಪ್ರದೀಪ್‌ ಜನಾರ್ಧನ್‌ ಮತ್ತು ತಂಡ ಈ ಚಾಂಪಿಯನ್‌ಷಿಪ್‌ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಉತ್ತಮ ಫೈಟರ್‌ ಪ್ರಶಸ್ತಿ:

ಹಿರಿಯ ಪುರುಷರ ವಿಭಾಗದಲ್ಲಿ ಅಮೃತಹಳ್ಳಿ ಟೆಕ್ವಾಂಡೋ ಕ್ಲಬ್‌ನ ಅಮರನಾಥ್‌ ಕೃಷ್ಣ ಅವರು 3 ಚಿನ್ನ ಮತ್ತು 1 ಕಂಚಿನ ಪದಕದೊಂದಿಗೆ ಬೆಸ್ಟ್‌ ಫೈಟರ್‌ ಗೌರವಕ್ಕೆ ಪಾತ್ರರಾದರು.

ಹಿರಿಯ ವನಿತೆಯರ ವಿಭಾಗದಲ್ಲಿ ಎನ್‌ಎಫ್‌ಸಿಯ ಸೀಮಾ ಶರತ್‌ ಅವರು 2 ಚಿನ್ನ ಮತ್ತು 1 ಬೆಳ್ಳಿ ಪದಕದೊಂದಿಗೆ ಬೆಸ್ಟ್‌ ಫೈಟರ್‌ ಎನಿಸಿದರು.

ಕಿರಿಯ ಬಾಲಕರ ವಿಭಾಗದಲ್ಲಿ ಎನ್‌ಎಫ್‌ಸಿಯ ಸೂರಜ್‌ 5 ಚಿನ್ನದ ಪದಕಗಳನ್ನು ಗೆದ್ದು ಬೆಸ್ಟ್‌ ಫೈಟರ್‌ ಗೌರವಕ್ಕೆ ಪಾತ್ರರಾದರು.

4 ಚಿನ್ನದ ಪದಕಗಳನ್ನು ಗೆದ್ದ ನವೀನ್‌ರಾಜ್‌ ಟೆಕ್ವಾಂಡೋ ಕ್ಲಬ್‌ನ ಸೆಹ್ರಾ ಅಲೆಕ್ಸ್‌ ಕಿರಿಯ ಬಾಲಕಿಯರ ವಿಭಾಗದಲ್ಲಿ ಬೆಸ್ಟ್‌ ಫೈಟರ್‌ ಎನಿಸಿದರು,

ಪುನೀತ್‌ ಟೆಕ್ವಾಂಡೋ ಕ್ಲಬ್‌ವ ಪ್ರಶಾಂತ್‌ ಚಂದ್ರ  3 ಚಿನ್ನ, 1 ಬೆಳ್ಳಿ ಮತ್ತು  1 ಕಂಚಿನ ಪದಕ ಗೆದ್ದು ಪುರುಷರ ವಿಭಾಗದಲ್ಲಿ ಬೆಸ್ಟ್‌ ಫೈಟರ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು. 2ಚಿನ್ನ ಮತ್ತು 2 ಬೆಳ್ಳಿ ಪದಕ ಗೆದ್ದ ಜಮೀಲಾ ಅವರು ವನಿತೆಯರ ವಿಭಾಗದ ಬೆಸ್ಟ್‌ ಫೈಟರ್‌ ಗೌರವಕ್ಕೆಪಾತ್ರರಾದರು.

Related Articles