Saturday, February 24, 2024

ರಾಜ್ಯ ನೆಟ್‌ಬಾಲ್‌ ತಂಡಕ್ಕೆ ಆಯ್ಕೆ ಟ್ರಯಲ್ಸ್‌

sportsmail:

ಕರ್ನಾಟಕ ಅಮೆಚೂರ್‌ ನೆಟ್‌ಬಾಲ್‌ ಅಸೋಸಿಯೇಷನ್‌ ಸಂಸ್ಥೆಯು ರಾಷ್ಟ್ರೀಯ ಹಾಗೂ ದಕ್ಷಿಣ ವಲಯ ಚಾಂಪಿಯನ್ಷಿಪ್‌ಗಳಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ತಂಡವನ್ನು ಆಯ್ಕೆ ಮಾಡಲು ಡಿಸೆಂಬರ್‌ 18ರಂದು ಆಯ್ಕೆ ಟ್ರಯಲ್ಸ್‌ ಹಮ್ಮಿಕೊಂಡಿದೆ.

ಡಿಸೆಂಬರ್‌ 25 -26ರಂದು ಪಾಂಡಿಚೇರಿಯಲ್ಲಿ ಪುರುಷರ ಮತ್ತು ಮಹಿಳಾ 14ನೇ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್ಷಿಪ್‌ ನಡೆಯಲಿದೆ. ಅದೇ ರೀತಿ 2022, ಜನವರಿ 4 ರಿಂದ 7ರ ವರೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಪುರುಷ ಹಾಗೂ ಮಹಿಳಾ ಹಿರಿಯರ 39ನೇ ರಾಷ್ಟ್ರೀಯ ನೆಟ್‌ಬಾಲ್‌ ಚಾಂಪಿಯನ್ಷಿಪ್‌ ನಡೆಯಲಿದೆ.

ಬೆಂಗಳೂರಿನ ನಾಗಸಂದ್ರದ ಸಿದೆದ ಹಳ್ಳಿಯ, ಸೌಂದರ್ಯ ನಗರದಲ್ಲಿರುವ ಸೌಂದರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್‌ ಆಂಡ್‌ ಸೈನ್ಸ್‌ನ ಕಾಲೇಜಿನ ಅಂಗಣದಲ್ಲಿ ಬೆಳಿಗ್ಗೆ 10:30ರಿಂದ ಆಯ್ಕೆ ಟ್ರಯಲ್ಸ್‌ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಗಿರೀಶ್‌ ಪಿ: 9741075490 ಮತ್ತು ವಿಶ್ವನಾಥ್‌ 9448595611 ಅವರನ್ನು ಸಂಪರ್ಕಿಸಬಹುದು.

ಆಟಗಾರರು ತಮಗೆ ಸಂಬಂಧಿದಿ ಜಿಲ್ಲಾ ನೆಟ್‌ಬಾಲ್‌ ಸಂಸ್ಥೆಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳಿಂದ ಅಧಿಕೃತ ಅನುಮತಿ ಪತ್ರವನ್ನು ತರುವುದು ಕಡ್ಡಾಯ.

ದಿನಾಂಕ ಮತ್ತು ವಿಳಾಸ:

18th December 2021 at 10.30am.

 Venue: Soundarya Institute of Management and Science Ground,  Soundarya Nagar Sidedahalli Nagasandra Post, Bengaluru, Karnataka 560073

Related Articles