ಬಾಡಿಬಿಲ್ಡಿಂಗ್ ಇನ್ನು ಮುಂದೆ ಸ್ಟ್ರಾಂಗೆಸ್ಟ್
ಸ್ಪೋರ್ಟ್ಸ್ ಮೇಲ್ ವರದಿ
ಬಾಡಿ ಬಿಲ್ಡಿಂಗ್ ಕ್ರೀಡೆಗೆ ಹೆಚ್ಚಿನ ವೃತ್ತಿಪರತೆಯನ್ನು ತರುವ ಉದ್ದೇಶದಿಂದ ಬೆಂಗಳೂರಿನ ಸಮಾನ ಮನಸ್ಕ ದೇಹದಾರ್ಢ್ಯಪಟುಗಳು ಅಂತಾರಾಷ್ಟ್ರೀಯ ನ್ಯಾಚುರಲ್ ಬಾಡಿಬಿಲ್ಡಿಂಗ್ ಅಸೋಸಿಯೇಷನ್-ಇಂಡಿಯಾ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದಾರೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಸಾಕಷ್ಟು ಜಿಮ್‌ಗಳಿವೆ. ಅಪಾರ ಸಂಖ್ಯೆಯಲ್ಲಿ ಬಾಡಿಬಿಲ್ಡರ್‌ಗಳಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದರೂ ಅವುಗಳು ಜನರ ಗಮನ ಸೆಳೆಯುವಲ್ಲಿ ವಿಲವಾಗಿವೆ. ಇಂಥ ಸ್ಪರ್ಧೆಗಳಿಗೆ ವೃತ್ತಿಪರತೆಯನ್ನು ಕಲ್ಪಿಸಲು, ಶ್ರೇಷ್ಠ ಗುಣಮಟ್ಟದದಲ್ಲಿ ನಡೆಸುವ ಸಲುವಾಗಿ ಐಎನ್‌ಬಿಎ-ಇಂಡಿಯಾ ಎಂಬ ಸಂಘಟನೆಯನ್ನು ಸ್ಥಾಪಿಸಲಾಯಿತು.

ನಿಧಿ ಸಂಗ್ರಹ
ಈ ಸಂಘಟನೆಯಲ್ಲಿ ಕ್ರೀಡಾಪಟುಗಳಿಗೆ ಮೊದಲ ಆದ್ಯತೆ. ನೈಸರ್ಗಿಕವಾದ ಬಾಡಿಬಿಲ್ಡಿಂಗ್ ಕಲೆಯನ್ನು ರೂಪಿಸಿ, ಮುಂದುವರಿಸಿಕೊಂಡು ಹೋಗುವುದು ಈ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ತೀರ್ಪು ನೀಡುವಾಗ ಆಗುವ ಪ್ರಮಾದಗಳಿಗೆ ಉತ್ತರ ಸಿಗಲು ಕಷ್ಟವಾಗುತ್ತಿತ್ತು. ಇನ್ನು ಮುಂದೆ ಅಂಥ ಸಮಸ್ಯೆಗಳು ಎದುರಾಗದಂತೆ ಸಂಸ್ಥೆ ಮುತುವರ್ಜಿ ವಹಿಸಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ, ಅದಕ್ಕೆ ಅಗತ್ಯವಿರುವ ನಿಧಿ ಸಂಗ್ರಹ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಅನೇಕ ಸ್ಪರ್ಧಿಗಳು ತಮ್ಮ ವೈಯಕ್ತಿಕ ವೆಚ್ಚದಿಂದ ಇದುವರೆಗೂ ಸ್ಪರ್ಧಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ವ್ಯವಸ್ಥಿತ ರೀತಿಯಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಉತ್ತಮ ಗುಣಮಟ್ಟದ ಸ್ಪರ್ಧೆಗಳು
ಐಎನ್‌ಬಿಎ-ಇಂಡಿಯಾ ದೇಶಾದ್ಯಂತ ಉತ್ತಮ ಗುಣಮಟ್ಟದ ಸರಣಿ ಸ್ಪರ್ಧೆಗಳನ್ನು ನಡೆಸುವ ಯೋಜನೆ ಹಾಕಿಕೊಂಡಿದೆ. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ, ಉತ್ತಮ ಗುಣಮಟ್ಟದ ತೀರ್ಪುಗಾರಿಕೆ, ಹೆಚ್ಚೆಚ್ಚು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇವುಗಳ ಬಗ್ಗೆ ಸಂಸ್ಥೆ ಗಮನ ಹರಿಸಲಿದೆ. ಐಎನ್‌ಬಿಎ-ಇಂಡಿಯಾದ ಅಧ್ಯಕ್ಷ ರಘುನಂದನ್ ಈ ಹೊಸ ಅಭಿಯಾನದ ಚುಕ್ಕಾಣಿಯನ್ನು ಹಿಡಿದಿರುತ್ತಾರೆ.

ಈ ಸಂದರ್ಭರ್ದಲ್ಲಿ ರಾಜ್ಯದ ಅನೇಕ ದೇಹದಾರ್ಢ್ಯ ಪಟುಗಳು ಹಾಜರಿ